ETV Bharat / state

ಸಿದ್ದರಾಮಯ್ಯನಂತಹ ಸುಳ್ಳುಗಾರನನ್ನು ನನ್ನ ಜೀವನದಲ್ಲಿ ನೋಡಿಲ್ಲ : ಸಚಿವ ಕೆ ಎಸ್ ಈಶ್ವರಪ್ಪ - Minister KS Eshwarappa news

ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರು ಈ ವೇಳೆ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ. ಸಾರಿಗೆ ನೌಕರರ ಬೇಡಿಕೆ ಪೂರೈಕೆ ತುಂಬಾ ಕಷ್ಟವಾಗಿದೆ. ರಾಜ್ಯದ ಬಜೆಟ್​ನಲ್ಲಿ ಶೇ.56ರಷ್ಟು ಸಿಬ್ಬಂದಿಯ ವೇತನಕ್ಕೆ, ಇನ್ನುಳಿದ ಶೇ.44%ರಷ್ಟು ನಿಗಮಗಳಿಗೆ ಹೋಗುತ್ತದೆ..

Minister KS Eshwarappa
ಸಚಿವ ಕೆ.ಎಸ್ ಈಶ್ವರಪ್ಪ
author img

By

Published : Dec 12, 2020, 1:04 PM IST

Updated : Dec 12, 2020, 2:39 PM IST

ದಾವಣಗೆರೆ : ಉಪಚುನಾವಣೆ ಬಳಿಕ ಸಿಎಂ ಬದಲಾಗುತ್ತಾರೆ. ನನಗೆ ದೆಹಲಿಯಿಂದ ಮಾಹಿತಿ ಬಂದಿದೆ ಎಂದು ಈ ಹಿಂದೆ ಸಿದ್ದರಾಮಯ್ಯ ಹೇಳಿದ್ದರು. ಸಿದ್ದರಾಮಯ್ಯ ಅಂದ್ರೆ ಸುಳ್ಳಿಗೆ ಇನ್ನೊಂದು ಹೆಸರು. ಸಿದ್ದರಾಮಯ್ಯನಂತಹ ಸುಳ್ಳುಗಾರನನ್ನು ನನ್ನ ಜೀವನದಲ್ಲಿ ನೋಡಿಲ್ಲ ಎಂದು ಅವರ ವಿರುದ್ಧ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಸಚಿವ ಕೆ.ಎಸ್ ಈಶ್ವರಪ್ಪ

ನಗರದಲ್ಲಿ ಮಾತನಾಡಿದ‌ ಅವರು, ನಾಯಕತ್ವ ಬದಲಾವಣೆ ಆಗುತ್ತೆಂದು ಒಂದು ಸುಳ್ಳನ್ನೇ ಸೃಷ್ಟಿ ಮಾಡಿದ್ದಾರೆ. ಉಪಚುನಾವಣೆ ಮುಗಿದು ಎಷ್ಟು ದಿನಗಳು ಕಳೆದವು. ಎಲ್ಲಿ ನಾಯಕತ್ವ ಬದಲಾವಣೆ ಆಯಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಮುಂದಿನ ಮುಖ್ಯಮಂತ್ರಿ ಆಗ್ತೀನಿ ಎಂದು ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ಸಿಎಂ ಆಗಬೇಕು ಎಂಬುದು ಹಗಲುಗನಸಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಬಿಎಸ್​ವೈ ಹಾಗೂ ಸಿದ್ದರಾಮಯ್ಯ ಅವರು ನಡುರಾತ್ರಿ ಭೇಟಿ ಆಗುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರಪ್ಪ, ನಡುರಾತ್ರಿ ಭೇಟಿ ಡಿಕೆಶಿಗೆ ಗೊತ್ತು. ನಮಗೆ ರಾತ್ರಿ ಭೇಟಿ ಬಗ್ಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಓದಿ: ಯಡಿಯೂರಪ್ಪ ಅಸಮರ್ಥ ಸಿಎಂ, ಬಿಜೆಪಿ ಹೈಕಮಾಂಡ್​ ಅವರನ್ನು ಬದಲಾಯಿಸುತ್ತೆ: ಸಿದ್ದರಾಮಯ್ಯ

ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರು ಈ ವೇಳೆ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ. ಸಾರಿಗೆ ನೌಕರರ ಬೇಡಿಕೆ ಪೂರೈಕೆ ತುಂಬಾ ಕಷ್ಟವಾಗಿದೆ. ರಾಜ್ಯದ ಬಜೆಟ್​ನಲ್ಲಿ ಶೇ.56ರಷ್ಟು ಸಿಬ್ಬಂದಿಯ ವೇತನಕ್ಕೆ, ಇನ್ನುಳಿದ ಶೇ.44%ರಷ್ಟು ನಿಗಮಗಳಿಗೆ ಹೋಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನನಾಗಿ ಪರಿಗಣಿಸುವುದು ತುಂಬಾ ಕಷ್ಟ ಎಂದು ಹೇಳಿದರು. ಈಗ ಕೊರೊನಾ ಸಂಕಷ್ಟದ ಕಾಲ, ಇಂತಹ ಪರಿಸ್ಥಿತಿಯಲ್ಲಿ ಹೋರಾಟ ಮಾಡುವುದು ಸರಿಯಲ್ಲ. ಸಾರಿಗೆ ನೌಕರರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ಸಾರಿಗೆ ನೌಕರರಿಗೆ ಕೈಮುಗಿದು ಬೇಡಿಕೊಳ್ಳುವೆ ಎಂದು ಸಚಿವ ಈಶ್ವರಪ್ಪ ಸಾರಿಗೆ ನೌಕರರಲ್ಲಿ ವಿನಂತಿಸಿದರು.

Last Updated : Dec 12, 2020, 2:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.