ದಾವಣಗೆರೆ: ಜೈಲಿಗೆ ಹೋದವನು ಎಂದು ಜನ ಕಿರಕುಳ ನೀಡಿದ್ದಕ್ಕಾಗಿ ಪೋಕ್ಸೋ ಪ್ರಕರಣದ ಆರೋಪಿಯು ಕೆಲವರ ಹೆಸರುಗಳನ್ನು ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ತಾಲ್ಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ನಡೆದಿದೆ. ವೀರೇಶ್ (24) ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿ.
ಆಟೋ ಚಾಲಕ ಮೃತ ವೀರೇಶ್ ವಿರುದ್ಧ 2020 ರಲ್ಲಿ ಅಪ್ರಾಪ್ತೆ ಬಾಲಕಿಗೆ ಕಿರುಕುಳ ನೀಡಿದ ಬೆನ್ನಲ್ಲೇ ಪೋಕ್ಸೋ ಪ್ರಕರಣ ದಾಖಲಾಗಿ ನ್ಯಾಯಾಂಗ ಬಂಧನದಲ್ಲಿದ್ದನು. ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದ ವೀರೇಶ್ ಹಾಯಾಗಿ ಗ್ರಾಮದಲ್ಲಿ ಸುತ್ತಾಡಿಕೊಂಡಿದ್ದನು. ಆದರೆ ಈತ ಜೈಲಿಗೆ ಹೋಗಿ ಬಂದವನು, ಇವನ ವಿರುದ್ಧ ಫೋಕ್ಸೊ ಪ್ರಕರಣ ಇದೆ ಎಂದು ಗ್ರಾಮದ ಕೆಲ ಜನರು ವೀರೇಶ್ ಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರಂತೆ.
ಇದರಿಂದ ಮಾನಸಿಕ ಕಿರುಕುಳ ತಡೆಯಲಾಗದೆ ವೀರೇಶ್ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇನ್ನು, ಆತನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎನ್ನಲಾದ 9 ಜನರ ಹೆಸರು ಬರೆದಿಟ್ಟಿದ್ದಾನೆ. ಈ ಸಂಬಂಧ ಹದಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಜನ್ಮದಿನದ ಸಂಭ್ರಮದಲ್ಲಿ ವಿಹಾರಕ್ಕೆ ತೆರಳಿದ್ದ ಐವರು ಮಕ್ಕಳು.. ನದಿಯಲ್ಲಿ ಮುಳುಗಿ ಸಾವು