ETV Bharat / state

ಪಕ್ಷದ ಮುಖಂಡರು, ಹಿರಿಯರು, ಸಂಘದ ಪ್ರಮುಖರ ಅಭಿಪ್ರಾಯ ಪಡೆದು ಮುಂದಿನ ನಡೆ: ಮಾಡಾಳ್ ಮಲ್ಲಿಕಾರ್ಜುನ್

ಬಿಜೆಪಿ ಪಕ್ಷದ ಹಿರಿಯರು, ಮುಖಂಡರು, ಸಂಘದ ಪ್ರಮುಖರ ಅಭಿಪ್ರಾಯ ಪಡೆದು ಮುಂದಿನ ನಡೆ ಕೈಗೊಳ್ಳುವೆ ಎಂದು ಚನ್ನಗಿರಿ ಟಿಕೆಟ್​ ಆಕಾಂಕ್ಷಿ ಮಾಡಾಳ್ ಮಲ್ಲಿಕಾರ್ಜುನ್ ಅವರು ತಿಳಿಸಿದ್ದಾರೆ.

ಚನ್ನಗಿರಿ ಟಿಕೆಟ್​ ಆಕಾಂಕ್ಷಿ ಮಾಡಾಳ್ ಮಲ್ಲಿಕಾರ್ಜುನ್

author img

By

Published : Apr 13, 2023, 4:41 PM IST

ಚನ್ನಗಿರಿ ಟಿಕೆಟ್​ ಆಕಾಂಕ್ಷಿ ಮಾಡಾಳ್ ಮಲ್ಲಿಕಾರ್ಜುನ್

ದಾವಣಗೆರೆ : ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಹಿರಿಯ ಪುತ್ರ ಮಾಡಾಳ್ ಮಲ್ಲಿಕಾರ್ಜುನ್​ಗೆ ಟಿಕೆಟ್ ಕೈ ತಪ್ಪಿದ್ದರಿಂದ ಬಿಜೆಪಿಗೆ ಬಂಡಾಯದ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಟಿಕೆಟ್ ಕೈತಪ್ಪಿದ್ದರಿಂದ ಚನ್ನಗಿರಿ ಟಿಕೆಟ್ ಆಕಾಂಕ್ಷಿ ಮಾಡಾಳ್ ಮಲ್ಲಿಕಾರ್ಜುನ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಕಾರ್ಯಕರ್ತರ ಮುಖಂಡರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಈ ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗಿಯಾಗುವ ಮೂಲಕ ಮಾಡಾಳ್ ಮಲ್ಲಿಕಾರ್ಜುನ್ ಅವರಿಗೆ ಪಕ್ಷೇತರರಾಗಿ ನಿಲ್ಲುವಂತೆ ಸಲಹೆ ನೀಡಿದ್ರು. ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಡಾಳ್ ಮಲ್ಲಿಕಾರ್ಜುನ್, ಬಿಜೆಪಿ ಪಕ್ಷದ ಮುಖಂಡರು ಹಿರಿಯರು, ಸಂಘದ ಪ್ರಮುಖರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುವೆ. ಬಿಜೆಪಿ ಪಕ್ಷದ ಹಿರಿಯರ ತೀರ್ಮಾನದಂತೆ ಮುಂದೆ ನಡೆಯುವೆ. ಪಕ್ಷ ಈಗಾಗಲೇ ಒಬ್ಬರಿಗೆ ಟಿಕೆಟ್​​ ಘೋಷಣೆ ಮಾಡಿದೆ. ಪಕ್ಷದ ಬಗ್ಗೆ ಇನ್ನು ಅಪಾರವಾದ ಗೌರವ ಇದೆ. ಈಗಾಗಲೇ ನಮ್ಮ ಪಕ್ಷದ ಹಿರಿಯೊಬ್ಬರು ಕರೆ ಮಾಡಿದ್ದರಿಂದ ಅವರೊಂದಿಗೆ ಮಾತನಾಡಿಲ್ಲ. ಬಳಿಕ ಮಾತನಾಡಿ ಅವರ ಸಲಹೆ ಪಡೆದು ನನ್ನ ನಿರ್ಧಾರ ತಿಳಿಸುವೆ ಎಂದು ಹೇಳಿದರು.

ಇನ್ನು ಚನ್ನಗಿರಿ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡುವ ಬಗ್ಗೆ ಈಗಲೇ ಏನು ಹೇಳುವುದಿಲ್ಲ, ಪಕ್ಷದ ಕಾರ್ಯಕರ್ತರು ಮುಖಂಡರು ಸಭೆಯಲ್ಲಿ ಸಾಕಷ್ಟು ಅಭಿಪ್ರಾಯ ಹೇಳಿದ್ದಾರೆ. ಆದರೆ ಈಗಲೇ ಯಾವ ತೀರ್ಮಾನವನ್ನೂ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ಇನ್ನು ಟಿಕೆಟ್ ಕೈತಪ್ಪಿದ್ದಕ್ಕಾಗಿ ನಾನು ನನ್ನ ಕಾರ್ಯಕರ್ತರು ಅಭಿಮಾನಿಗಳು ನೋವಿನಲ್ಲಿದ್ದೇವೆ. ಹಾಗಾಗಿ ಪಕ್ಷದ ಹಿರಿಯರ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ಮಾಡಾಳ್ ನಿವಾಸದ ಮುಂದೆ ಕಾರ್ಯಕರ್ತರ ಪ್ರತಿಭಟನೆ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಹಿರಿಯ ಪುತ್ರ ಮಾಡಾಳ್ ಮಲ್ಲಿಕಾರ್ಜುನ್​ಗೆ ಪಕ್ಷೇತರರಾಗಿ ಸ್ಪರ್ಧಿಸುವಂತೆ ಅವರ ಚನ್ನೇಶಪುರ ನಿವಾಸದ ಬಳಿ ಸೇರಿ ಕಾರ್ಯಕರ್ತರು 'ಬೇಕೇ ಬೇಕು ನ್ಯಾಯ ಬೇಕು ಎಂದು' ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ರು.

ಇದನ್ನೂ ಓದಿ : ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ನಡುವೆ ಬಣ ಸೃಷ್ಟಿ; ಚನ್ನಗಿರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮೊಟಕು

ರಾಜ್ಯ ನಾಯಕರ ಬಳಿ ಮಾತನಾಡಿ ಮುಂದಿನ ನಿರ್ಧಾರ: ನೀವು ನಿಮ್ಮ ನಿರ್ಧಾರವನ್ನು ತಿಳಿಸುವ ತನಕ ಈ ಸ್ಥಳದಿಂದ ನಾವು ಕದಲುವುದಿಲ್ಲ ಎಂದು ಕಾರ್ಯಕರ್ತರು ಅಭಿಮಾನಿಗಳು ಪಟ್ಟು ಹಿಡಿದ್ರು. ಬಳಿಕ ಮಾಡಾಳ್ ಮಲ್ಲಿಕಾರ್ಜುನ್​ ಮಾತನಾಡಿ, ರಾಜ್ಯ ನಾಯಕರ ಬಳಿ ಮಾತನಾಡಿ ಮುಂದಿನ ನಿರ್ಧಾರ ಮಾಡುವುದಾಗಿ ಹೇಳಿದ್ರು. ಎರಡು ದಿನ ಸಮಯ ಕೇಳಿದ್ದೇನೆ. ಎರಡು ದಿನಗಳ ಬಳಿಕ ನಾನು ನಿರ್ಧಾರ ಮಾಡುವೆ. ಅರ್ಥ ಮಾಡಿಕೊಳ್ಳಿ, ನಾನು ಸಂಘ ಪರಿವಾರದವರನ್ನು ಭೇಟಿಯಾಗಿ ಚರ್ಚೆ ಮಾಡಿ ಇಲ್ಲಿನ‌ ಸ್ಥಿತಿಯನ್ನು ಮನವರಿಕೆ ಮಾಡುವೆ ಎಂದು ಸಂದೇಶ ರವಾನಿಸಿದರು.

ಇದನ್ನೂ ಓದಿ : ಬಿಜೆಪಿಯಲ್ಲಿ ತೀವ್ರ ಸ್ವರೂಪ‌ ಪಡೆದ ಟಿಕೆಟ್ ಹಂಚಿಕೆ‌ ವಿಚಾರ: ದಿಢೀರ್ ಸಭೆ ಕರೆದ ಮಾಡಾಳ್ ಮಲ್ಲಿಕಾರ್ಜುನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.