ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಚಿರತೆ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕಮಲಬಾಯಿ(55) ಮೃತ ಮಹಿಳೆ.
10 ಜನ ಮಹಿಳೆಯರು ಮೆಕ್ಕೆಜೋಳದ ಜಮೀನಿನಲ್ಲಿ ಕಳೆ ತೆಗೆಯಲು ಹೋಗಿದ್ದರು. ಜಮೀನಿನಲ್ಲಿ ಹಲವು ಮಹಿಳೆಯರೊಂದಿಗೆ ಕಳೆ ತೆಗೆಯುವಾಗ ಸ್ವಲ್ಪ ಹಿಂದೆ ಉಳಿದಿರುವುದನ್ನು ಕಂಡ ಚಿರತೆ ಕಮಲಾಬಾಯಿ ಅವರ ಮೇಲೆ ದಾಳಿ ಮಾಡಿದೆ. ಅವರ ಕುತ್ತಿಗೆಗೆ ಬಾಯಿ ಹಾಕಿ 100 ಅಡಿ ದೂರ ಎಳೆದುಕೊಂಡು ಹೋಗಿದೆ. ಇದರಿಂದ ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ತಿಳಿಸಿದ್ದಾರೆ.
ನ್ಯಾಮತಿ ತಾಲೂಕು ಆಸ್ಪತ್ರೆಗೆ ಕಮಲಾಬಾಯಿ ಅವರ ಶವ ರವಾನಿಸಲಾಗಿದೆ. ಆಸ್ಪತ್ರೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೃತ ಕಮಲಾಬಾಯಿ ಕುಟುಂಬ ಸದಸ್ಯರ ಜೊತೆ ಮಾಹಿತಿ ಪಡೆದರು. ನ್ಯಾಮತಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ನ್ಯಾಮತಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಬೆಳಗಾವಿ ಆಪರೇಷನ್ ಚಿರತೆ ಕಾರ್ಯಾಚರಣೆಗೆ ತೆರಳಿದ ಸಕ್ರೆಬೈಲ್ ಅಲೆ, ನೇತ್ರಾವತಿ ಆನೆಗಳು