ETV Bharat / state

ನಮ್ಮ ಚಾಲಕರೇ ಬಸ್​ಗೆ ಕಲ್ಲು ಹೊಡೆದದ್ದಕ್ಕೆ ಬೇಸರವಾಯಿತು: ಲಕ್ಷ್ಮಣ್ ಸವದಿ

ನಮ್ಮ ಚಾಲಕರು,‌ ನಿರ್ವಾಹಕರು ಸಾರಿಗೆ ಬಸ್ ಗೆ ಕಲ್ಲು ಎಸೆದರಲ್ಲ, ಅದು ಬೇಸರ ತರಿಸಿತು ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.

Laxman Sawadi
ಸಾರಿಗೆ ಸಚಿವ ಲಕ್ಷ್ಮಣ್ ಸವದಿ
author img

By

Published : Jan 18, 2021, 3:14 PM IST

ದಾವಣಗೆರೆ: ನೀವು ದಿಢೀರ್ ಪ್ರತಿಭಟನೆ‌ ಕೈಗೊಂಡಿದ್ದು ನನಗೆ ಬೇಸರ ತರಿಸಲಿಲ್ಲ, ಬದಲಾಗಿ ಸಾರಿಗೆ ಸಂಸ್ಥೆಯ ಬಸ್​ಗೆ ನೌಕರರು ಕಲ್ಲು ಹೊಡೆದಿದ್ದು ನಿಜಕ್ಕೂ ನೋವುಂಟು ಮಾಡಿದೆ‌ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿಕೆ

ಕೇಂದ್ರೀಯ ಬಸ್‌ ನಿಲ್ದಾಣದ ಪುನರ್ ನಿರ್ಮಾಣ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು, ನಮ್ಮ ಚಾಲಕರು,‌ ನಿರ್ವಾಹಕರು ಸಾರಿಗೆ ಬಸ್ ಗೆ ಕಲ್ಲು ಎಸೆದದ್ದು, ಬೇಸರ ತರಿಸಿತು ಎಂದರು.

ನಿಮ್ಮ ಬದುಕಿಗೆ ಬೆಳಕನ್ನು ಕೊಟ್ಟಿರುವ ವಾಹನ ಅದು. ನಮ್ಮ ಬದುಕಿಗೆ ನಾವೇ ಕಲ್ಲು ಹಾಕಿಕೊಳ್ಳುತ್ತೇವೆ ಎನ್ನುವಂತದ್ದು ಆಗಬಾರದು. ನಿಮ್ಮ ಬೇಡಿಕೆಗಳ ಬಗ್ಗೆ ಆಗಲಿ, ಪ್ರತಿಭಟನೆ ಮಾಡಿರುವುದಾಗಲಿ ನಮಗೆ ಯಾವುದೇ ಬೇಸರ ಆಗಿಲ್ಲ. ಆದರೆ, ಕಲ್ಲೆಸೆಯುವ ಹುಚ್ಚು ಸಹಾಸಕ್ಕೆ ಕೈ ಹಾಕ್ಬೇಡಿ ಎಂದು ಸಲಹೆ ನೀಡಿದರು. ಇದೇ ವೇಳೆ ಎಲೆಕ್ಟ್ರಾನಿಕ ಬಸ್​ಗಳ ಖರೀದಿಗೆ ಸರ್ಕಾರ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಅವು ಸಂಚರಿಸಲಿವೆ ಎಂದು ಸಚಿವರು ತಿಳಿಸಿದರು.

ಓದಿ: ನಾಳೆ ಅಥವಾ ನಾಡಿದ್ದು ಖಾತೆ ಹಂಚಿಕೆ: ಸಿಎಂ ಬಿ.ಎಸ್.ಯಡಿಯೂರಪ್ಪ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.