ETV Bharat / state

ಭೂ ವ್ಯಾಜ್ಯ ಪ್ರಕರಣಗಳ ಇತ್ಯರ್ಥ: ಜನರ ಸಮಸ್ಯೆಗಳೇನು, ವಕೀಲರು ಹೇಳುವುದೇನು? - ದಾವಣಗೆರೆ ಲೇಟೆಸ್ಟ್ ನ್ಯೂಸ್

ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ‌ ಮಾಡುತ್ತಿದ್ದು, ಭೂಮಿ ಕಳೆದುಕೊಂಡವರು ಅಥವಾ ವಂಚನೆಗೊಳಪಟ್ಟವರ ಪೈಕಿ ಹೆಚ್ಚಿನವರು ಪ್ರಕರಣವನ್ನು ಪೊಲೀಸ್​ ಠಾಣೆಯಲ್ಲಿ ದಾಖಲಿಸಬೇಕೋ ಅಥವಾ ನ್ಯಾಯಾಲಯದ ಮೊರೆ ಹೋಗಬೇಕೇ ಎನ್ನುವ ಗೊಂದಲದಲ್ಲಿದ್ದಾರೆ.

The land issues cases should be settled by the court itself not by police station
ಭೂ ಸಂಬಂಧಿತ ವ್ಯಾಜ್ಯ: ಪ್ರಕರಣಗಳನ್ನು ನ್ಯಾಯಾಲಯದ ಮೂಲಕವೇ ಇತ್ಯರ್ಥಪಡಿಸಿಕೊಳ್ಳಬೇಕು
author img

By

Published : Mar 10, 2021, 3:31 PM IST

Updated : Mar 10, 2021, 3:57 PM IST

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾದ‌ ಬಳಿಕ ಖಾಲಿ ನಿವೇಶನ ಹಾಗು ಇತರೆ ಭೂಮಿಗೆ ಎಲ್ಲಿಲ್ಲದ ಬೇಡಿಕೆ‌ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ‌ ಮಾಡುತ್ತಿದ್ದು, ಭೂಮಿ ಕಳೆದುಕೊಂಡವರು ಅಥವಾ ವಂಚನೆಗೊಳಪಟ್ಟವರ ಪೈಕಿ ಹೆಚ್ಚಿನವರು ಪ್ರಕರಣವನ್ನು ಪೊಲೀಸ್​ ಠಾಣೆಯಲ್ಲಿ ದಾಖಲಿಸಬೇಕೋ ಅಥವಾ ನ್ಯಾಯಾಲಯದ ಮೊರೆ ಹೋಗಬೇಕಾ ಎನ್ನುವ ಗೊಂದಲದಲ್ಲಿದ್ದಾರೆ.

ಭೂ ಸಂಬಂಧಿತ ವ್ಯಾಜ್ಯ, ವಕೀಲರ ಪ್ರತಿಕ್ರಿಯೆ

ಭೂಗಳ್ಳತನ, ಮೋಸದಿಂದ ಜಮೀನು ಬರೆಸಿಕೊಳ್ಳುವುದು ಇವೆಲ್ಲವೂ ಐಪಿಸಿ ಸೆಕ್ಷನ್​​​ ವ್ಯಾಪ್ತಿಗೆ ಬರುವುದಿಲ್ಲ. ಭೂ ಸಂಬಂಧಿತ ವ್ಯಾಜ್ಯಗಳು ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ. ಇಂತಹ ವ್ಯಾಜ್ಯಗಳಿದ್ದರೆ ನೇರವಾಗಿ ವಕೀಲರ ಮೂಲಕ ಭೂಮಿ ಲಪಟಾಯಿಸಿದ ವ್ಯಕ್ತಿ ವಿರುದ್ಧ ದಾವೆ ಹೂಡಬಹುದಾಗಿದೆ. ನ್ಯಾಯಾಲಯ ವಾದಿ-ಪ್ರತಿವಾದಿಗಳ ವಾದ ಆಲಿಸಿ ಸಮಸ್ಯೆಗೆ ಪರಿಹಾರ ಒದಗಿಸುವ ತೀರ್ಪು ನೀಡುತ್ತದೆ.‌

ದಾವಣಗೆರೆಯಲ್ಲಿ ಭೂ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೆಚ್ಚಿನವರು ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಆದ್ರೆ ಜಿಲ್ಲೆಯ ಕೆಲವು ಕಡೆ ಮಾತ್ರ ಆಯಾಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪೊಲೀಸರು ಮಧ್ಯ ಪ್ರವೇಶಿಸುತ್ತಿದ್ದಾರಂತೆ. ಸಿವಿಲ್ ಪ್ರಕರಣಗಳು ಪೊಲೀಸರಿಗೆ ಸಂಬಂಧಿಸದಿರುವುದು ಎಂದು ಜನರಿಗೆ ತಿಳಿಯದಿರುವುದರಿಂದ ಕೆಲವರು ಮಾತ್ರ ಪೊಲೀಸ್ ಠಾಣೆಗೆ ತೆರಳಿ ರಾಜಿ ಪಂಚಾಯಿತಿ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ.

ಶ್ರೀಮಂತರು ಸಿವಿಲ್ ಪ್ರಕರಣಗಳನ್ನು ಪೊಲೀಸರಿಂದಲೇ ಬಗೆಹರಿಸಿಕೊಳ್ಳುತ್ತಾರಂತೆ:

ಶ್ರೀಮಂತರು, ಅಧಿಕಾರಿಶಾಹಿಗಳು, ರಾಜಕಾರಣಿಗಳು ಸಿವಿಲ್ ವ್ಯಾಜ್ಯಗಳನ್ನು ಪೊಲೀಸ್​ ಠಾಣೆ ಮೂಲಕವೇ ಬಗೆಹರಿಸಿಕೊಳ್ಳುತ್ತಿದ್ದಾರಂತೆ. ಇನ್ಫ್ಯೂಯೆನ್ಸ್ ಮೂಲಕ ಠಾಣೆಗಳಿಗೆ ಕರೆ ಮಾಡಿ ಬಗೆಹರಿಸುಕೊಳ್ಳುತ್ತಿದ್ದಾರೆನ್ನುವ ಮಾತು ಕೇಳಿಬಂದಿದೆ.

ಸಿವಿಲ್ ಪ್ರಕರಣಗಳ ಮಧ್ಯೆ ನ್ಯಾಯಾಲಯ ಪ್ರವೇಶ ಮಾಡಬೇಕೆ ವಿನಃ ಪೊಲೀಸರು ಮಧ್ಯೆ ಪ್ರವೇಶಿಸಲು ಯಾವುದೇ ಹಕ್ಕು ಇಲ್ಲ. ಒಂದು ವೇಳೆ ಆಸ್ತಿ, ಜಮೀನಿಗಾಗಿ ಗಲಾಟೆಗಳಾದಾಗ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಮಧ್ಯ ಪ್ರವೇಶ ಮಾಡಬಹುದಾಗಿದೆ. ನಿವೇಶನ, ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸುವವರ ವಿರುದ್ಧ ಸೆಕ್ಷನ್ 420,‌ 468 ಎಫ್​​ಐಆರ್ ಹಾಕುವ ಅಧಿಕಾರ ಪೊಲೀಸರಿಗಿದ್ದು, ಆಸ್ತಿ‌ ದಾಖಲೆ ಮೇರೆಗೆ ಯಾವ ವ್ಯಕ್ತಿಗೆ ಆಸ್ತಿ ಬಿಟ್ಟುಕೊಡಬೇಕೆಂದು ಹೇಳುವ ಅಧಿಕಾರ ನ್ಯಾಯಾಲಯಕ್ಕಿದೆಯೇ ಹೊರತು ಪೊಲೀಸರಿಗಿಲ್ಲ ಎಂಬುದು ನ್ಯಾಯವಾದಿಗಳ ವಾದವಾಗಿದೆ.

ಕ್ರಿಮಿನಲ್ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ - ಸಿವಿಲ್ ಪ್ರಕರಣಗಳು ನ್ಯಾಯಾಲಯದಲ್ಲಿ:

ಸಾಮಾನ್ಯವಾಗಿ ಜನರು ಕ್ರಿಮಿನಲ್ ಪ್ರಕರಣಗಳನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಬೇಕಾಗಿದ್ದು, ಸಿವಿಲ್ ಪ್ರಕರಣಗಳನ್ನು ಕೂಡ ಹೊತ್ತು ಠಾಣೆಗೆ ತೆರಳುತ್ತಿರುವುದು ಸರ್ವೇ ಸಾಮಾನ್ಯವಾಗಿದೆ‌. ಅದ್ರೆ ಸಿವಿಲ್ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ವಕೀಲರ ಮೂಲಕ ಬಗೆಹರಿಸಬೇಕೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾಗಿಯೇ ಸಾಕಷ್ಟು ಜನರು ಪೊಲೀಸ್ ಠಾಣೆಗೆ ತೆರಳಿ ಹಣ ಸುರಿದು ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರಂತೆ.

ಈ ಸುದ್ದಿಯನ್ನೂ ಓದಿ: ಹೆಚ್ಚಾದ ಭೂಗಳ್ಳರ ಹಾವಳಿ: ಭೂಮಿ‌ ಕಳೆದುಕೊಳ್ಳುವ ಮಾಲೀಕರು ಏನು ಮಾಡಬೇಕು?

ಜಿಲ್ಲೆಯಲ್ಲಿ ‌17,713 ಸಿವಿಲ್ ಪ್ರಕರಣಗಳು ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ಕಾಲದಿಂದ ಬಗೆಹರಿಯದೇ ಹಾಗೆ ಉಳಿದುಕೊಂಡಿದೆ. ಈ ರೀತಿಯ ಸಿವಿಲ್ ಪ್ರಕರಣಗಳನ್ನು ಪೊಲೀಸರು ಬಗೆಹರಿಸಲು ಮುಂದಾದರೆ ಅದು ಕಾನೂನು ಬಾಹಿರವಾಗುತ್ತದೆ.

Last Updated : Mar 10, 2021, 3:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.