ETV Bharat / state

ಕೆರೆ ತುಂಬಿಸುವ ಯೋಜನೆ ಪೈಪ್​​ಲೈನ್‌ ಕಾಮಗಾರಿ ತಂದಿಟ್ಟ ಫಜೀತಿ.. ಹನಗವಾಡಿ ರೈತರು ಕಂಗಾಲು

author img

By

Published : Jan 10, 2021, 2:56 PM IST

ಪೈಪ್​​ಲೈನ್‌ ಕಾಮಗಾರಿಗಾಗಿ ತೆಗೆದ ಗುಂಡಿಗಳಿಗೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬೀಳುವ ಹೆಚ್ಚು ಮಳೆ ನೀರು ರೈತರ ಹೊಲಗಳಿಗೆ ನುಗ್ಗುತ್ತಿದೆ. ಹತ್ತು ವರ್ಷಗಳಿಂದ ಈ ಸಮಸ್ಯೆ ಎದುರಾಗಿದ್ದು, ಇಂದಿಗೂ ಹಾಗೇ ಇದೆ..

lake-filling-project-pipeline-works-destroy-the-crop-news
ಪೈಪ್​​ಲೈನ್‌ ಕಾಮಗಾರಿ ತಂದಿಟ್ಟ ಫಜೀತಿ

ದಾವಣಗೆರೆ : ತುಂಗಭದ್ರಾ ನದಿಯಿಂದ ಭರಮಸಾಗರಕ್ಕೆ ಇಪ್ಪತ್ತೆರಡು ಕೆರೆ ತುಂಬಿಸುವ ಯೋಜನೆ ರೈತರಿಗೆ ಕಂಠಕವಾಗಿದೆ. ಕೆರೆಗಳನ್ನು ತುಂಬಿಸುವ ಸಲುವಾಗಿ ಅಧಿಕಾರಿಗಳು ಎರಡು ಪೈಪ್​​ಲೈನ್‌ ರೈತರ ಹೊಲಗಳ ಮುಖಾಂತರ ತೆಗೆದುಕೊಂಡು ಹೋಗಿರುವುದು ರೈತರನ್ನ ಸಂಕಷ್ಟಕ್ಕೆ ದೂಡಿದೆ. ಕಾಮಗಾರಿ ಪೂರ್ಣವಾದ್ರೂ ಹೊಲಗಳು ಮಾತ್ರ ಕೆರೆಗಳಂತೆ ಆಗಿವೆ.

ಪೈಪ್​​ಲೈನ್‌ ಕಾಮಗಾರಿ ತಂದಿಟ್ಟ ಫಜೀತಿ

ಓದಿ: ಕೆಜಿಎಫ್ ಚಾಪ್ಟರ್-2 ಟೀಸರ್ ಅಬ್ಬರ, ಹೊಸ ದಾಖಲೆ: ಯೂ- ಟ್ಯೂಬ್​ನಲ್ಲಿ 10 ಕೋಟಿ ಮಂದಿ ವೀಕ್ಷಣೆ

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ರೈತರ ಗೋಳು ಕೇಳುವವರೇ ಇಲ್ಲ. ಚಿತ್ರದುರ್ಗ ಜಿಲ್ಲೆ ಭರಮಸಾಗರ ಹೋಬಳಿಯ ಇಪ್ಪತ್ತೆರಡು ಕೆರೆಗಳನ್ನು ತುಂಬಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಹರಿಹರದ ತುಂಗಭದ್ರಾ ನದಿಯಿಂದ ನೀರನ್ನು ಭರಮಸಾಗರಕ್ಕೆ ತೆಗೆದುಕೊಂಡು ಹೋಗಲು ಪೈಪ್‌ಲೈನ್ ಅಳವಡಿಕೆ‌ ಕಾಮಗಾರಿ ಪ್ರಗತಿಯಲ್ಲಿದೆ.

ಈ ಪೈಪ್​​ಲೈನ್‌ಗಳು ಹನಗವಾಡಿ ಗ್ರಾಮದ ರೈತರ ಹೊಲಗಳ ಮುಖಾಂತರ ಹಾದು ಹೋಗಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಈ ಪೈಪ್‌ಲೈನ್ ಕಾಮಗಾರಿಗಾಗಿ ರೈತರ ಹೊಲಗಳಲ್ಲಿ ಬೃಹತ್ ಆಕಾರದ ಗುಂಡಿಗಳನ್ನು ತೆಗೆದಿದ್ದಾರೆ.

ಅದನ್ನು ಸರಿಯಾಗಿ ಸಮತಟ್ಟಾಗಿ ಮಾಡದೆ ಇರುವುದರಿಂದ ಮಳೆ ನೀರು ಬಂದು ಸುಮಾರು ಹತ್ತಾರು ಎಕರೆಗಳಲ್ಲಿ ನೀರು ಶೇಖರಣೆಯಾಗುತ್ತಿದೆ. ಇದರಿಂದ ರೈತರು ನಾಟಿ ಮಾಡುವ ಸಮಯದಲ್ಲಿ ನಾಟಿ ಮಾಡಲು ಆಗದೆ ಹೈರಾಣಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶಕ್ಕೆ ಕಾರಣ ಆಗಿದೆ.

ರಾಷ್ಟ್ರೀಯ ಹೆದ್ದಾರಿಯ ಮಳೆ ನೀರಿನಿಂದ ನೆಲಕಚ್ಚಿದ ಬೆಳೆ : ಪೈಪ್​​ಲೈನ್‌ ಕಾಮಗಾರಿಗಾಗಿ ತೆಗೆದ ಗುಂಡಿಗಳಿಗೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬೀಳುವ ಹೆಚ್ಚು ಮಳೆ ನೀರು ರೈತರ ಹೊಲಗಳಿಗೆ ನುಗ್ಗುತ್ತಿದೆ. ಹತ್ತು ವರ್ಷಗಳಿಂದ ಈ ಸಮಸ್ಯೆ ಎದುರಾಗಿದ್ದು, ಇಂದಿಗೂ ಹಾಗೇ ಇದೆ.

ನೀರು ಸರಾಗವಾಗಿ ಹೋಗಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಅಧಿಕಾರಿಗಳು ಬಾಕ್ಸ್ ಚರಂಡಿ ಮಾಡಬೇಕಿತ್ತು. ಆದರೆ, ಚರಂಡಿ ಇಲ್ಲದೆ ಇಡೀ ಮಳೆ ನೀರು ಪೈಪ್​​ಲೈನ್ ಕಾಮಗಾರಿಗಾಗಿ ತೆಗೆದಿದ್ದ ಗುಂಡಿಗಳ ಮುಖಾಂತರ ರೈತರ ಹೊಲಗಳಿಗೆ ಸೇರುತ್ತಿದೆ. ಇದರಿಂದ ಕೆಲ ದಿನಗಳ ಹಿಂದೆ ರೈತರು ರಸ್ತೆ ತಡೆ ನಡೆಸಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲವಂತೆ.

ಕೆರೆಯಂತಾದ ಹೊಲ, ನೆಲ ಕಚ್ಚಿದ ಬೆಳೆ : ಹನಗವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೊಲಗಳಲ್ಲಿ ಮಳೆ ನೀರು ನಿಂತು ಕೆರೆಯಂತೆ ಮಾರ್ಪಟ್ಟಿವೆ. ರೈತ ಬಸವರಾಜ್​​ಗೆ ಸೇರಿದ ಟೊಮ್ಯಾಟೊ, ಬಾಳೆ, ವೀಳ್ಯದೆಲೆ, ಅಡಿಕೆಯ ಫಸಲುಗಳು ಕೈಗೆ ಬರುವ ಮುನ್ನವೇ ನೆಲಕಚ್ಚಿವೆ. ನಾಲ್ಕು ಲಕ್ಷದಷ್ಟು ನಷ್ಟ ಆಗಿದೆಯಂತೆ. ಇದರಿಂದ ನಷ್ಟ ಆಗಿರುವ ಮೊತ್ತವನ್ನು ಭರಿಸದೆ ಇದ್ದರೇ, ಕಾಮಗಾರಿ ಮಾಡಲು ಬಿಡುವುದಿಲ್ಲ‌ ಎಂದು ರೈತರು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.