ETV Bharat / state

ದಾವಣಗೆರೆ : ಈ ಗ್ರಾಮದಲ್ಲಿ ತೀರ್ಥ ಪ್ರಸಾದ ಸ್ವೀಕರಿಸಿದ್ರೆ ಕೆಂಡ ತುಳಿಯಲೇಬೇಕು.. - ದಾವಣಗೆರೆಯ ಸೊಕ್ಕೆ ಗ್ರಾಮದಲ್ಲಿ ಕೆಂಡೋತ್ಸವ

ಈ ಪವಾಡ ನೋಡಲು ಜನ ಸಾಗರವೇ ಸೊಕ್ಕೆ ಗ್ರಾಮದತ್ತ ಹರಿದು ಬಂದಿತ್ತು. ಮೇಲಾಗಿ ವೀರಭದ್ರ ಅಂದರೆ ದುಷ್ಟರಿಗೆ ಶಿಕ್ಷೆ ಕೊಡುತ್ತಾನೆ. ಹೀಗಾಗಿ, ಇಲ್ಲಿಗೆ ಬರುವ ಜನರು ಜಾಗರೂಕರಾಗಿರುತ್ತಾರೆ. ತಮ್ಮ ಮನಸ್ಸಿನಲ್ಲಿ ಅಂದುಕೊಂಡಂತೆ ನಡೆದುಕೊಳ್ಳುತ್ತಾರೆ..

kendotsava-in-davanagere
ಕೆಂಡ ತುಳಿತ
author img

By

Published : Dec 31, 2021, 7:31 PM IST

ದಾವಣಗೆರೆ : ಬೆಣ್ಣೆನಗರಿಯ ಈ ಸೊಕ್ಕೆ ಗ್ರಾಮದಲ್ಲಿ ಯಾರು ವೀರಭದ್ರನ ತೀರ್ಥ ಪ್ರಸಾದ ಸ್ವೀಕರಿಸುತ್ತಾರೆಯೋ ಅವರೆಲ್ಲಾ ಕೆಂಡ ತುಳಿಯಲೇಬೇಕೆಂಬ ಶಾಸ್ತ್ರವಿದೆ. ಜೊತೆಗೆ ಹರಕೆ ತೀರಿಸಲು ಅಸ್ತ್ರಗಳನ್ನ ಬಾಯಿಗೆ ಚುಚ್ಚಿಕೊಳ್ಳಬೇಕು.

ಇದು ಪುರಾತನ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ವಿಶೇಷವಾಗಿ ಈಗ ಈ ಗ್ರಾಮಕ್ಕೆ ಅಮೆರಿಕಾದಲ್ಲಿ ಸಾಫ್ಟ್​ವೇರ್​​ ಇಂಜಿನಿಯರ್​ ಆಗಿದ್ದ ಮಹಿಳೆ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಈ ಸಾಪ್ಟ್​ವೇರ್​ ಇಂಜಿನಿಯರ್​ ಹರಕೆ ತೀರಿಸಿದ್ದು ವಿಶೇಷವಾಗಿತ್ತು.

ಸೊಕ್ಕೆ ಗ್ರಾಪಂ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಮಾತನಾಡಿರುವುದು..

ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಜರುಗುವ ಈ ಪವಾಡ ಜಗತ್ಪ್ರಸಿದ್ದವಾಗಿದೆ. ಈ ಗ್ರಾಮದಲ್ಲಿ ಬೆಳಗ್ಗೆ ಏಳುತ್ತಿದ್ದಂತೆ ಗ್ರಾಮಸ್ಥರೆಲ್ಲ ವೀರಭದ್ರ ದೇವರ ಸಹಿತ ಗ್ರಾಮದ ಹೊರ ಭಾಗಕ್ಕೆ ತೆರಳುತ್ತಾರೆ.

ವಿಶೇಷವಾಗಿ ಕೆರೆ ಪಕ್ಕದಲ್ಲಿ ಗಂಗೆ ಪೂಜೆ ಮಾಡುವ ಮೂಲಕ ಭಕ್ತರು ಪೂಜಾರಿಗೆ ನಮಸ್ಕಾರ ಮಾಡಿದಾಗ, ಅವರು ತೀರ್ಥ ಪ್ರಸಾದ ನೀಡುತ್ತಾರೆ. ಹೀಗೆ ಯಾರು ಇಲ್ಲಿ ತೀರ್ಥ ಪ್ರಸಾದ ಪಡೆಯುತ್ತಾರೆಯೋ ಅವರು ವೀರಭದ್ರನ ಕೊಂಡೋತ್ಸವದಲ್ಲಿ ಪಾಲ್ಗೊಳ್ಳುವುದು ಕಡ್ಡಾಯ.

ಪೂಜಾರಿ ಕಡೆಯಿಂದ ತೀರ್ಥ ತೆಗೆದುಕೊಂಡ ಬಹುತೇಕರು ನಿಗಿ ನಿಗಿ ಉರಿಯುತ್ತಿರುವ ಕೆಂಡದಲ್ಲಿ ಹಾಯ್ದು ಹೋಗುತ್ತಾರೆ. ಇದು ತಾವು ಅಂದು ಕೊಂಡಿದ್ದ ಇಷ್ಟಾರ್ಥ ಪೂರ್ಣವಾಗುತ್ತದೆ. ಅದಕ್ಕಾಗಿ ಹರಕೆ ತೀರಿಸುತ್ತಾರೆ ಭಕ್ತರು.

ಸೊಕ್ಕೆ ಗ್ರಾಮದ ವಿಶೇಷ ಅಂದ್ರೆ ಈ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮೆರಿಕಾದಲ್ಲಿ ಹಲವಾರು ವರ್ಷ ಸಾಫ್ಟ್‌​ವೇರ್ ಇಂಜಿನಿಯರ್​ ಆಗಿ ಸೇವೆ ಸಲ್ಲಿಸಿ ಕೆಲ ವರ್ಷಗಳಿಂದ ಗ್ರಾಮಕ್ಕೆ ಬಂದು ಇಲ್ಲಿಯೇ ಚುನಾವಣೆಗೆ ನಿಂತು, ಗ್ರಾಮ ಪಂಚಾಯತ್ ಅಧ್ಯಕ್ಷೆ ಆಗಿದ್ದಾರೆ. ಅವರೇ ಕೆಂಡ ತುಳಿದು ಹರಕೆ ತೀರಿಸಿದ್ದಾರೆ.

ಈ ಗ್ರಾಮದಲ್ಲಿ ವರ್ಷಕ್ಕೊಮ್ಮೆ ವೀರಭದ್ರನ ಉತ್ಸವ ನಡೆಯುತ್ತದೆ. ಈ ಸಂದರ್ಭ ಗ್ರಾಮದಿಂದ ಯಾರೇ ಬೇರೆ ಕಡೆ ಹೋಗಿ ನೆಲೆಸಿದ್ರು ಸಹ ಈ ಉತ್ಸವಕ್ಕೆ ಬರಬೇಕು ಎಂಬ ಅಲಿಖಿತ ನಿಯಮವಿದೆ. ವೀರಭದ್ರನ ಭಕ್ತರು ಇಲ್ಲಿನ ಪವಾಡಗಳನ್ನ ಮಾಡುತ್ತಾರೆ. ಬಾಯಿಯಲ್ಲಿ ಕರ್ಪೂರ ಸುಟ್ಟು ಜನರ ಗಮನ ಸೆಳೆಯುತ್ತಾರೆ. ಇನ್ನೊಂದು ಹರಕೆ ಅಂದ್ರೆ ಬಾಯಿಯಲ್ಲಿ, ಕೈಯಲ್ಲಿ ಅಸ್ತ್ರಗಳನ್ನ ಚುಚ್ಚಿಕೊಂಡ್ರೇ ಕಷ್ಟಗಳು ದೂರ ಆಗುತ್ತವೆ ಎಂಬುದು ನಂಬಿಕೆ.

ಈ ಪವಾಡ ನೋಡಲು ಜನ ಸಾಗರವೇ ಸೊಕ್ಕೆ ಗ್ರಾಮದತ್ತ ಹರಿದು ಬಂದಿತ್ತು. ಮೇಲಾಗಿ ವೀರಭದ್ರ ಅಂದರೆ ದುಷ್ಟರಿಗೆ ಶಿಕ್ಷೆ ಕೊಡುತ್ತಾನೆ. ಹೀಗಾಗಿ, ಇಲ್ಲಿಗೆ ಬರುವ ಜನರು ಜಾಗರೂಕರಾಗಿರುತ್ತಾರೆ. ತಮ್ಮ ಮನಸ್ಸಿನಲ್ಲಿ ಅಂದುಕೊಂಡಂತೆ ನಡೆದುಕೊಳ್ಳುತ್ತಾರೆ.

ಮತ್ತೊಬ್ಬರಿಗೆ ಕೇಡು ಮಾಡುವ ಉದ್ದೇಶದಿಂದ ಹರಕೆ ಹೊತ್ತರೆ ಅವರಿಗೆ ನಷ್ಟವಾಗುತ್ತದೆ. ಇಂತಹ ಹಲವಾರು ಸಂಘಟನೆಗಳು ಈ ಗ್ರಾಮದಲ್ಲಿ ನಡೆದಿವೆ. ಹೀಗಾಗಿ, ಕೆಂಡೋತ್ಸವ ಅಂದರೆ ಗ್ರಾಮಸ್ಥರ ಪಾಲಿಗೆ ನಿಜಕ್ಕೂ ಒಂದು ಪವಿತ್ರ ಕಾರ್ಯ ಅಂದರೆ ತಪ್ಪಾಗುವುದಿಲ್ಲ.

ಓದಿ: ಜನರ ಹಿತಕ್ಕಾಗಿ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿಗೆ ಸಿಎಂ ಬೊಮ್ಮಾಯಿ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.