ETV Bharat / state

ಸಿದ್ದರಾಮಯ್ಯ ಅಹಿಂದ ನಾಯಕ, ಅವರು ಒಂದು ಜಾತಿಗೆ ಸೀಮಿತ ಅಲ್ಲ- ಕಾಗಿನೆಲೆ ಸ್ವಾಮೀಜಿ

author img

By

Published : Feb 10, 2021, 10:13 PM IST

Updated : Feb 10, 2021, 10:56 PM IST

ಈಗ ಪಾದಯಾತ್ರೆ ಮುಕ್ತಾಯವಾಗಿದೆ. ಮುಂದಿನ ಹೋರಾಟದ ಬಗ್ಗೆ ಸಮಿತಿಗಳ ಸಭೆ ಮಾಡಿ ನಿರ್ಧರಿಸಲಾಗುವುದು. ನಾವು ಹೇಳಿದಾಗ ಭಕ್ತರು ಹೋರಾಟಕ್ಕೆ ಸಜ್ಜಾಗಬೇಕು ಎಂದು ಮುಂದಿನ ಹೋರಾಟದ ಗುಟ್ಟನ್ನು ರಟ್ಟು ಮಾಡಿದರು..

Kaginele Shri reaction about Kuruba ST Foot Rally
ಕುರುಬ ಎಸ್ಟಿ ಹೋರಾಟದ ಪಾದಯಾತ್ರೆ ಬಗ್ಗೆ ಕಾಗಿನೆಲೆ ಶ್ರೀ ಪ್ರತಿಕ್ರಿಯೆ

ದಾವಣಗೆರೆ : ಕುರುಬರಿಗೆ ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಆರಂಭಿಸಿದ ಪಾದಯಾತ್ರೆ ಸಾರ್ಥಕವಾಗಿದೆ ಎಂದು ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಹರಿಹರ ತಾಲೂಕಿನ ಬೆಳ್ಳೂಡಿ ಕನಕ ಗುರುಪೀಠದ ಶಾಖಾ ಮಠಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ನಾವು ಮೀಸಲಾತಿ ಹೊಸದಾಗಿ ಕೇಳುತ್ತಿಲ್ಲ. ಈಗ ಇರುವ ಎಸ್ಟಿ ಮೀಸಲಾತಿ ಪಟ್ಟಿಯಲ್ಲಿ ಕುರುಬ ಎಂಬ ಪದ ಬಿಟ್ಟು ಹೋಗಿದೆ.

ಎಸ್‌ಟಿ ಮೀಸಲಾತಿ ಕುರಿತು ಕಾಗಿನೆಲೆಯ ಶ್ರೀ ಕನಕ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ..

ಅದನ್ನು ಸೇರ್ಪಡೆ ಮಾಡಿ ಎಂಬುವುದು ನಮ್ಮ ಬೇಡಿಕೆ ಇದೆ. ಕುರುಬರಿಗೆ ಎಸ್ಟಿ ಮೀಸಲಾತಿ ನೀಡಲು ಕುಲಶಾಸ್ತ್ರ ಅಧ್ಯಯನ ಅಗತ್ಯವಿಲ್ಲ. ಒಂದು ವೇಳೆ ಕುಲಶಾಸ್ತ್ರ ಅಧ್ಯಯನ ಬೇಕು ಅಂದ್ರೆ ಅದಕ್ಕೂ ನಾವು ಸಿದ್ಧವಾಗಿದ್ದೇವೆ. ಈಗಾಗಲೇ ಕುಲಶಾಸ್ತ್ರ ಅಧ್ಯಯನ ಶೇ. 90ರಷ್ಟು ಮುಕ್ತಾಯವಾಗಿದೆ.

ಒಂದೆರಡು ತಿಂಗಳಲ್ಲಿ ಮುಕ್ತಾಯ ಆಗುತ್ತೆ ಎಂದರು. ಈಗ ಪಾದಯಾತ್ರೆ ಮುಕ್ತಾಯವಾಗಿದೆ. ಮುಂದಿನ ಹೋರಾಟದ ಬಗ್ಗೆ ಸಮಿತಿಗಳ ಸಭೆ ಮಾಡಿ ನಿರ್ಧರಿಸಲಾಗುವುದು. ನಾವು ಹೇಳಿದಾಗ ಭಕ್ತರು ಹೋರಾಟಕ್ಕೆ ಸಜ್ಜಾಗಬೇಕು ಎಂದು ಮುಂದಿನ ಹೋರಾಟದ ಗುಟ್ಟನ್ನು ರಟ್ಟು ಮಾಡಿದರು.

ಸಿದ್ದರಾಮಯ್ಯ ಪಾದಯಾತ್ರೆ ಹಾಗೂ ಸಮಾವೇಶದಲ್ಲಿ ಭಾಗಿಯಾಗದ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಅಹಿಂದ ನಾಯಕ. ಒಂದು ಜಾತಿಗೆ ಮಾತ್ರ ಸೀಮಿತ ಆಗಿಲ್ಲ. ಅವರದ್ದೇ ಆದ ಸೈದ್ಧಾಂತಿಕ ನಿಲುವುಗಳಿವೆ. ಅವರನ್ನ ಒಂದು ಜಾತಿಗೆ ಸೀಮಿತ ಮಾಡುವುದು ಬೇಡ ಎಂದು ನಿರಂಜನಾನಂದ ಪುರಿ ಸ್ವಾಮೀಜಿ ಸ್ಪಷ್ಟ ಪಡಿಸಿದರು.

Last Updated : Feb 10, 2021, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.