ETV Bharat / state

ಗೋದಾಮಿನಲ್ಲಿ ಅಕ್ರಮ ಸ್ಫೋಟಕ ಪತ್ತೆ ಪ್ರಕರಣದ ತನಿಖೆ ನಡೆಯುತ್ತಿದೆ : ಎಸ್​ಪಿ ಹನುಮಂತರಾಯ - SP Hanumantharaya reaction

ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕ ₹47 ಲಕ್ಷ ಬೇನಾಮಿ ನಗದು ಪ್ರಕರಣ ಆದಾಯ ತೆರೆಗೆ ಬರುತ್ತದೆ. ಅದನ್ನು ಅವರು ತನಿಖೆ‌ ನಡೆಸುತ್ತಿದ್ದು, ನಾವು ಈಗಾಗಲೇ ತನಿಖೆ ನಡೆಸಿ, ಈ ಪ್ರಕರಣವನ್ನು ಸಕ್ಷಮ ಅಪರಾಧದಡಿಯಲ್ಲಿ ಆದಾಯ ತೆರಿಗೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದೇವೆ..

SP Hanumantharaya reaction
ಎಸ್​ಪಿ ಹನುಮಂತರಾಯ ಪ್ರತಿಕ್ರಿಯೆ
author img

By

Published : Feb 10, 2021, 3:16 PM IST

ದಾವಣಗೆರೆ : ಗೋದಾಮುವೊಂದರಲ್ಲಿ ಸ್ಫೋಟಕ ತುಂಬಿದ್ದ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ತಿಳಿಸಿದರು.

ಎಸ್​ಪಿ ಹನುಮಂತರಾಯ ಪ್ರತಿಕ್ರಿಯೆ

ಕೆಲ ದಿನಗಳ‌ ಹಿಂದೆ ದಾವಣಗೆರೆ ತಾಲೂಕಿನ ಕಾಡಜ್ಜಿ ಹಾಗೂ ಜಗಳೂರು ತಾಲೂಕಿನ ತಾಯಿಟೋಣಿ ಗ್ರಾಮದಲ್ಲಿ ಪತ್ತೆಯಾಗಿದ್ದ ಸ್ಪೋಟಕದ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಗೋದಾಮಿನ ಮಾಲೀಕರ ಪರವಾನಿಗೆ ಬಗ್ಗೆ ತನಿಖೆ ನಡೆಸಿದಾಗ ಅಕ್ರಮ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ನಡೆದಂತಹ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಕೂಡ ತನಿಖೆ ನಡೆಸುತ್ತಿದ್ದು, ಅದೇ ರೀತಿ ಕೂಡ ನಾವು ತನಿಖೆ‌ ಮಾಡುತ್ತಿದ್ದೇವೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ನಾವು ಏನೂ ಹೇಳಲಿಕ್ಕೆ ಬರಲ್ಲ. ತನಿಖೆ ನಡೆದ ಬಳಿಕ ಮಾಹಿತಿ ಹೊರ ಬರಲಿದೆ ಎಂದರು.

ಓದಿ: ದಾವಣಗೆರೆಯಲ್ಲಿ ದಾಖಲೆಯಿಲ್ಲದ ಕೋಟ್ಯಾಂತರ ರೂಪಾಯಿ ಪತ್ತೆ

ದಾವಣಗೆರೆ ನಗರದ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕ ₹47 ಲಕ್ಷ ಬೇನಾಮಿ ನಗದು ಪ್ರಕರಣ ಆದಾಯ ತೆರೆಗೆ ಬರುತ್ತದೆ. ಅದನ್ನು ಅವರು ತನಿಖೆ‌ ನಡೆಸುತ್ತಿದ್ದು, ನಾವು ಈಗಾಗಲೇ ತನಿಖೆ ನಡೆಸಿ, ಈ ಪ್ರಕರಣವನ್ನು ಸಕ್ಷಮ ಅಪರಾಧದಡಿಯಲ್ಲಿ ಆದಾಯ ತೆರಿಗೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದೇವೆ. ಆದಾಯ ತೆರಿಗೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಾರೆ ಎಂದು ಎಸ್​ಪಿ ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.