ದಾವಣಗೆರೆ: ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಹಾಗೆಯೇ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುವುದು ಅಷ್ಟೇ ಸತ್ಯ. ಈ ಬಗ್ಗೆ ಯಾರೂ ಪ್ರಶ್ನೆ ಮಾಡುವಂತೆಯೇ ಇಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ಅವರು 2023 ವಿಧಾನಸಭೆ ಚುನಾವಣೆ ಕೂಡಾ ಬಿಎಸ್ವೈ ಅವರ ನೇತೃತ್ವದಲ್ಲಿಯೇ ನಡೆಯುತ್ತದೆ. ಕೇವಲ ನಾಯಕತ್ವ ಬದಲಾವಣೆ ಬಗ್ಗೆ ವದಂತಿಗಳಿದ್ದು, ಇದರಲ್ಲಿ ಸತ್ಯಾಂಶವಿಲ್ಲ. ಮೇಲಾಗಿ ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ರಾಜ್ಯ ಉಸ್ತುವಾರಿಗಳೇ ಸ್ಪಷ್ಟಪಡಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಯತ್ನಾಳ್ ಬಗ್ಗೆ ನಾನು ಮಾತಾಡಲ್ಲ. ಈಗಾಗಲೇ ಅವರ ಹೇಳಿಕೆ ಬಗ್ಗೆ ರಾಜ್ಯಾಧ್ಯಕ್ಷರು ವರದಿ ನೀಡಿದ್ದಾರೆ. ಸೂಕ್ತ ಸಮಯದಲ್ಲಿ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ.
ಓದಿ: ಜ.13 ಅಥವಾ 14 ರಂದು ಸಂಪುಟ ವಿಸ್ತರಣೆ: ಸಿಎಂ ಬಿಎಸ್ವೈ
'ನಾನೂ ಕೂಡಾ ಸಚಿವ ಸ್ಥಾನದ ಆಕಾಂಕ್ಷಿ'. ಮದ್ಯ ಕರ್ನಾಟಕ ದಾವಣಗೆರೆಗೆ ಒಂದು ಸ್ಥಾನ ನೀಡಿ ಅಂತಾ ಕೇಳಿದ್ದೇವೆ. ಅದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ರೇಣುಕಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.