ETV Bharat / state

ಹೊನ್ನಾಳಿ ಡಾನ್ ಖ್ಯಾತಿಯ ಹೋರಿ ಇನ್ನಿಲ್ಲ: ಕಂಬನಿ ಮಿಡಿದ ಅಭಿಮಾನಿಗಳು

ಹೊನ್ನಾಳಿ ಡಾನ್ ಎಂದೇ ಖ್ಯಾತಿಯ ಹೋರಿ ಅನಾರೋಗ್ಯದಿಂದ ಮೃತಪಟ್ಟಿದೆ. ಹೋರಿ ಅಗಲಿಕೆಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

author img

By

Published : Dec 17, 2022, 3:51 PM IST

Updated : Dec 17, 2022, 4:31 PM IST

honnali-don-famed-ox-died
ಹೊನ್ನಾಳಿ ಡಾನ್ ಖ್ಯಾತಿಯ ಹೋರಿ ಇನ್ನಿಲ್ಲ: ಕಂಬನಿ ಮಿಡಿದ ಅಭಿಮಾನಿಗಳು
ಹೊನ್ನಾಳಿ ಡಾನ್ ಖ್ಯಾತಿಯ ಹೋರಿ ಇನ್ನಿಲ್ಲ: ಕಂಬನಿ ಮಿಡಿದ ಅಭಿಮಾನಿಗಳು

ದಾವಣಗೆರೆ : ಜಿಲ್ಲೆಯಲ್ಲಿ ಹೊನ್ನಾಳಿ ಡಾನ್ ಎಂದೇ ಖ್ಯಾತಿ ಹೊಂದಿದ್ದ ಹೋರಿ ಅನಾರೋಗ್ಯದಿಂದ ಮೃತಪಟ್ಟಿದೆ. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಹೋರಿ ಅಗಲಿಕೆಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಜಿಲ್ಲೆಯ ಹೊನ್ನಾಳಿ ಪಟ್ಟಣದ ನಿವಾಸಿಗಳಾದ ಮಹೇಶ ಮತ್ತು ಚಂದ್ರು ಸಹೋದರರಿಗೆ ಸೇರಿದ್ದ ಡಾನ್ ಹೆಸರಿನ ಹೋರಿಯನ್ನು ಬಹಳ ಪ್ರೀತಿಯಿಂದ ಸಾಕಿದ್ದರು. ಈ ಹೋರಿ ದಾವಣಗೆರೆ, ಶಿವಮೊಗ್ಗ, ಹಾವೇರಿ ಹೀಗೆ ಹತ್ತಾರು ಜಿಲ್ಲೆಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. ಇನ್ನು ಈ ಹೋರಿ ಅಖಾಡಕ್ಕಿಳಿದರೆ ಸಾಕು ಅದನ್ನು ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಡಾನ್ ಹೋರಿ : ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ‌ಬಳಲುತ್ತಿದ್ದ ಹೊನ್ನಾಳಿ ಡಾನ್ ಇಂದು ಸಾವನ್ನಪ್ಪಿದೆ. ಈ ಹೋರಿ ಮಾಲೀಕರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಡಾನ್​ ಅಗಲಿಕೆಗೆ ಮಾಲೀಕರು ಕಂಬನಿ ಮಿಡಿದಿದ್ದಾರೆ. ತಮ್ಮ ಜಮೀನಿನಲ್ಲಿ ವಿಧಿವಿಧಾನಗಳ ಮೂಲಕ ಹೋರಿಯ ಅಂತ್ಯಸಂಸ್ಕಾರ ನೆರವೇರಲಿದೆ.

ಇದನ್ನೂ ಓದಿ : 'ರಾಣೆಬೆನ್ನೂರು ಹುಲಿ' ನಿಧನದ ಬೆನ್ನಲ್ಲೇ 'ರಾಣೆಬೆನ್ನೂರು ಡಾನ್' ಸಾವು: ಅನಾಥರಾದ ದೆವ್ವ ಮರಿಯಪ್ಪ

Last Updated : Dec 17, 2022, 4:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.