ದಾವಣಗೆರೆ: ಜಿಲ್ಲೆಯಲ್ಲಿರುವ ಹಳೇ ಶಾಲೆಗೆ ಹೈಟೆಕ್ ಟಚ್ ನೀಡಲಾಗಿದ್ದು, ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತೆ ರೆಡಿಯಾಗಿದೆ. ಶಾಲೆಯ ಹಳೇ ವಿದ್ಯಾರ್ಥಿಗಳು ಸೇರಿ ಈ ಶಾಲೆಗೆ ತಮ್ಮದೆಯಾದ ಪುಟ್ಟ ಕೊಡುಗೆ ನೀಡಿರುವುದು ಹೈಟೆಕ್ ಶಾಲೆಯಾಗಲು ಪ್ರಮುಖ ಕಾರಣ ಆಗಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೀರೆಕೋಗಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ 1951 ಸ್ಥಾಪಿಸಲಾಗಿದ್ದು, ಇಲ್ಲಿತನಕ ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಓದಿ: ನಾಳೆ 2ನೇ ಹಂತದ ಗ್ರಾಮ ಸಮರ: ಎಲ್ಲೆಲ್ಲಿ ನಡೆಯುತ್ತೆ ಮತದಾನ?
ಅಲ್ಲದೆ ಇಲ್ಲಿನ ವಿದ್ಯಾರ್ಥಿಗಳು ರಾಜಕೀಯ ಕ್ಷೇತ್ರದಲ್ಲೂ ಕೂಡ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಆದ್ದರಿಂದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂದು ಒಗ್ಗಟ್ಟಾದ ಹಳೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿ ಶಾಲೆಗೆ ಹೈಟೆಕ್ ಟಚ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
1.50 ಲಕ್ಷ ರೂ. ವೆಚ್ಚದಲ್ಲಿ ದೀರ್ಘ ಬಾಳಿಕೆಯ ಪೇಂಟ್ ಮಾಡಿಸಿದ್ದು, ಶಾಲೆಯ ಗೋಡೆಗಳಿಗೆ ಹರಪ್ಪ ಮೆಹೆಂಜೋದಾರೋ ಸಂಸೃತಿ ಮಾದರಿಯ ವರ್ಲಿ ಕಲೆಯಿಂದ ಜಾನಪದ ಲೋಕ ಗೋಡೆಗಳಲ್ಲಿ ರಾರಾಜಿಸಿವೆ. ಪ್ರವೇಶ ದ್ವಾರದಿಂದ ಹಿಡಿದು ರಂಗಮಂದಿರದ ಸ್ವರೂಪವೇ ಬದಲಾಗಿದ್ದು, ಶಾಲೆ ನಿರ್ಮಾಣ ಮಾಡಲು ಕರಿಗೌಡ್ರು ಚಿಕ್ಕಪ್ಪ ಎಂಬುವರು ಎರಡೂವರೆ ಎಕರೆ ಜಮೀನು ದಾನ ನೀಡಿದ್ದಾರಂತೆ.
ಅಲ್ಲದೆ ಹೈಟೆಕ್ ಟೆಕ್ನಾಲಜಿ ಬಳಕೆಯಿಂದ ಗ್ರಾಮೀಣ ಪರಿಸರದಲ್ಲಿ ಶಿಕ್ಷಣದ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆಯೇ ಮಕ್ಕಳಿಗೆ ಬಯೊಮೆಟ್ರಿಕ್ ಹಾಜರಾತಿಗೆ ಚಾಲನೆ ನೀಡಲಾಗಿತ್ತು.
ಈ ಬಾರಿ ಇಡೀ ಶಾಲೆಗೆ 16 ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಿದ್ದು, ಮಕ್ಕಳು ತರಗತಿಯಲ್ಲಿ ಏನೇನು ಮಾಡುತ್ತಿದ್ದಾರೆ ಎನ್ನುವುದನ್ನು ಮುಖ್ಯ ಶಿಕ್ಷಕರ ಕಚೇರಿಯಿಂದಲೇ ಕಂಟ್ರೋಲ್ ಮಾಡುವ ಟೆಕ್ನಾಲಜಿ ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಸರ್ಕಾರಿ ಶಾಲೆ ಇಷ್ಟರ ಮಟ್ಟಿಗೆ ಅಭಿವೃದ್ಧಿಯಾಗಲು ಶಾಲೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಶ್ರಮ ಹೆಚ್ಚಿದೆ.