ETV Bharat / state

ದಾವಣಗೆರೆಯಲ್ಲಿ ಸುರಿದ ಮಳೆಗೆ ಓರ್ವ ಬಲಿ: 30 ಕ್ಕೂ ಹೆಚ್ಚು ಮನೆಗಳ ಕುಸಿತ - ದಾವಣಗೆರೆಯಲ್ಲಿ ಸುರಿದ ಮಳೆಗೆ ಓರ್ವ ಬಲಿ

ದಾವಣಗೆರೆಯಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಸುಮಾರು 30 ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ. ಅಲ್ಲದೆ ನಿನ್ನೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದಾನೆ.

ದಾವಣಗೆರೆಯಲ್ಲಿ ಸುರಿದ ಮಳೆಗೆ ಓರ್ವ ಬಲಿ : ಕುಸಿದ 30 ಮನೆಗಳು
author img

By

Published : Aug 19, 2019, 8:13 PM IST

ದಾವಣಗೆರೆ: ನಗರದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಸುಮಾರು 30 ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ. ಅಲ್ಲದೆ ನಿನ್ನೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದು, ಮೃತನನ್ನು ಎಸ್. ಎಂ. ಕೃಷ್ಣನಗರದ ಅಶೋಕ್ ಎಂದು ಗುರುತಿಸಲಾಗಿದೆ.

ಇನ್ನು ದೊಡ್ಡ ಬೂದಿಹಾಳ್ ಗ್ರಾಮದಲ್ಲಿ ನೆರೆಯಿಂದಾಗಿ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಬಾಷಾ ನಗರ, ಅಹಮದ್ ನಗರ, ಆಜಾದ್ ನಗರ, ರೈಲ್ವೆ ಗೇಟ್ ಬದಿಯ ಛಲವಾದಿ ಕೇರಿಗಳಲ್ಲಿಯೂ ನೀರು ನುಗ್ಗಿತ್ತು. ಮನೆಗಳಿಂದ ನೀರು ಹೊರಹಾಕುವಲ್ಲಿ ಮಹಿಳೆಯರು ಹರಸಾಹಸ ಪಡಬೇಕಾಯಿತು. ಅಲ್ಲದೆ ಚಾಮರಾಜಪೇಟೆ ವೃತ್ತದ ಬಳಿಯ ಹಳೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೀರು ನುಗ್ಗಿದ ಪರಿಣಾಮ ಬಾಣಂತಿಯರು, ಮಹಿಳೆಯರು ಪರದಾಡಬೇಕಾಯಿತು.

ದಾವಣಗೆರೆಯಲ್ಲಿ ಸುರಿದ ಮಳೆಗೆ ಓರ್ವ ಬಲಿ : ಕುಸಿದ 30 ಮನೆಗಳು

ಸಂಕಷ್ಟಕ್ಕೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಜಿ. ಎನ್. ಶಿವಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಸಂತ್ರಸ್ತರ ಅಹವಾಲು ಆಲಿಸಿದ ಅವರು ಪರ್ಯಾಯ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ರು.

Intro:KN_DVG_19_RAIN EFFECT_SCRIPT_02_7203307

REPORTER : YOGARAJA G. H.

ಭಾರೀ ಮಳೆಗೆ ಧರೆಗುರುಳಿದ 30 ಕ್ಕೂ ಹೆಚ್ಚು ಮನೆಗಳು - ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿದ ವ್ಯಕ್ತಿ ಗುರುತು ಪತ್ತೆ - ಸಂತ್ರಸ್ತರಿಗೆ ಸಿಕ್ಕಿದ್ದು ಮತ್ತೆ ಅದೇ ಭರವಸೆ...!

ದಾವಣಗೆರೆ : ನಿನ್ನೆ ಅಬ್ಬರಿಸಿ ಬೊಬ್ಬಿರಿದ ವರುಣ ಬೆಣ್ಣೆನಗರಿಯಲ್ಲಿ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ನಗರದಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು
ನುಗ್ಗಿದ್ದು, ಸುಮಾರು 30 ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ.

ದೊಡ್ಡ ಬೂದಿಹಾಳ್ ಗ್ರಾಮದಲ್ಲಿ ನೆರೆಯಿಂದಾಗಿ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಬಾಷಾ ನಗರ, ಅಹಮದ್ ನಗರ, ಆಜಾದ್ ನಗರ, ರೈಲ್ವೆ ಗೇಟ್ ಬದಿಯ ಛಲವಾದಿ
ಕೇರಿಗಳಲ್ಲಿಯೂ ನೀರು ನುಗ್ಗಿತ್ತು. ಮನೆಗಳಿಂದ ನೀರು ಹೊರಹಾಕುವಲ್ಲಿ ಮಹಿಳೆಯರು ಸಾಕು ಸಾಕಾಗಿ ಹೋದರು. ನಗರದ ಚಾಮರಾಜಪೇಟೆ ವೃತ್ತದ ಬಳಿಯ ಹಳೆಯ ಮಹಿಳಾ ಮತ್ತು ಮಕ್ಕಳ
ಆಸ್ಪತ್ರೆಯಲ್ಲಿ ನೀರು ನುಗ್ಗಿದ ಪರಿಣಾಮ ಬಾಣಂತಿಯರು, ಮಹಿಳೆಯರು ಪರದಾಡಬೇಕಾಯಿತು. ನೀರು ಹೊರ ಹಾಕಲು ಆಸ್ಪತ್ರೆ ಸಿಬ್ಬಂದಿ ಸಾಕು ಸಾಕಾಗಿ ಹೋದರು.

ಪಿ ಬಿ ರಸ್ತೆಯ ಪೀಸಾಳೆ ಕಾಂಪೌಂಡ್ ನ ಮೂರನೇ ಕ್ರಾಸ್ ಬಳಿ ಮನೆಗಳಿಗೆ ನೀರು ನುಗ್ಗಿದ್ದು, ಗಾಂಧಿನಗರದ ಹನುಮಂತಪ್ಪರ ಮನೆಯ ಗೋಡೆ ಕುಸಿದು ಬಿದ್ದಿದೆ. ಬೇತೂರು ರಸ್ತೆಯ ವೆಂಕಟೇಶ್ವರ
ದೇವಾಲಯದ ಭಾರೀ ಮಳೆಯಿಂದಾಗಿ ಮನೆ ಕುಸಿದಿದೆ. ಇನ್ನು ಬೂದಾಳ್ ರಸ್ತೆಯಲ್ಲಿನ ಆಶ್ರಯ ಕಾಲೋನಿಯಲ್ಲಿ ಆಶ್ರಯ ಪಡೆದಿದ್ದ ಮನೆಗಳಿಗೂ ನೀರು ನುಗ್ಗಿದ್ದು, ಹಲವು ಮನೆಗಳು ಧರೆಗುರುಳಿವೆ.

ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆಯೊತ್ತಿಗೆ ತುಂಬಿದ್ದ ನೀರು ಕಡಿಮೆಯಾಗಿತ್ತು. ಉಳಿದಂತೆ ತಗ್ಗು ಪ್ರದೇಶಗಳಲ್ಲಿದ್ದ ಮನೆಗಳು ಸಂಪೂರ್ಣವಾಗಿ ನೆಲಕ್ಕುರುಳಿದ್ದು, ಜನರು ಮನೆ
ಇಲ್ಲದೇ, ಮನೆಯಲ್ಲಿದ್ದ ವಸ್ತುಗಳೆಲ್ಲವೂ ನೀರಿನಲ್ಲಿ ಕೊಚ್ಚಿ ಹೋದ ಪರಿಣಾಮ ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರೀ ಮಳೆಯಿಂದ ಸಂಕಷ್ಟಕ್ಕೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಜಿ. ಎನ್.
ಶಿವಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರ ಅಹವಾಲು ಆಲಿಸಿದ ಅವರು ಪರ್ಯಾಯ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.

ಮಳೆಯಿಂದಾಗಿ ಉಂಟಾದ ಕೃತಕ ನೆರೆಯಿಂದ ಚರಂಡಿಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಾಲಿನಗರದಲ್ಲಿ ದೇಹವೊಂದು ತೇಲಿಬಂದದ್ದನ್ನು
ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರಾದರೂ, ಅಲ್ಲಿಗೆ ಹೋಗುವಷ್ಟರಲ್ಲಿ ಸಾವನ್ನಪ್ಪಿದರು. ಅಂದ ಹಾಗೆ ಮೃತಪಟ್ಟ ವ್ಯಕ್ತಿ ಎಸ್. ಎಂ.
ಕೃಷ್ಣನಗರದ ಅಶೋಕ್ ಎಂದು ತಿಳಿದು ಬಂದಿದೆ. ಇನ್ನು ಮೃತನ ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ನಿನ್ನೆ ಮೂರು ಗಂಟೆಗಳ ಕಾಲ ಸುರಿದ ಭಾರೀ ಮಳೆ ಅವಾಂತರವನ್ನೇ
ಸೃಷ್ಟಿಸಿದ್ದು ಮಾತ್ರವಲ್ಲ, ಒಂದು ಬಲಿಯನ್ನು ಪಡೆದುಕೊಂಡಿದೆ.

ಬೈಟ್- 1
ಹಾಲಪ್ಪ, ಹೊಸ ಬೂದಿಹಾಳ್ ಗ್ರಾಮಸ್ಥ

ಬೈಟ್- 2

ಸಾಗರ್, ಹೊಸ ಬೂದಿಹಾಳ್ ಗ್ರಾಮದ ಮುಖಂಡ

Body:KN_DVG_19_RAIN EFFECT_SCRIPT_02_7203307

Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.