ETV Bharat / state

ರೈತರಿಗೆ ₹10.63 ಕೋಟಿ ವಂಚಿಸಿ ಪರಾರಿಯಾಗಿದ್ದ ಖದೀಮ.. ಕೊನೆಗೂ ಹರಿಹರ ಪೊಲೀಸರ ಬಲೆಗೆ ಬಿದ್ದಿದ್ಹೇಗೆ?

ನಂದಕುಮಾರ್​ನಿಂದ ಮೋಸ ಹೋಗಿದ್ದ ಜಿಲ್ಲೆಯ ವಿವಿಧ ಭಾಗದ ರೈತರು ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಕುರಿತು ಹರಿಹರ ಕೋರ್ಟ್​​ 33 ಬಾರಿ ವಾರೆಂಟ್​​ ಜಾರಿ ಮಾಡಿದ್ದರು ಕೂಡ ಆರೋಪಿ ತಲೆ ಮರೆಸಿಕೊಂಡಿದ್ದ..

harihara-police-arrested-nandakumar-in-tamilnadu
ಆರೋಪಿ ನಂದಕುಮಾರ್
author img

By

Published : Aug 17, 2021, 4:17 PM IST

ದಾವಣಗೆರೆ : ರೈತರಿಗೆ ಕೋಟ್ಯಂತರ ರೂ. ವಂಚನೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸುವಲ್ಲಿ ಹರಿಹರ ಪೊಲೀಸರು ಯಶಸ್ವಿಯಾಗಿದ್ದಾರೆ. ನಂದಕುಮಾರ್​ (52) ಎಂಬಾತ ಬಂಧಿತ ಆರೋಪಿ.

2008ರಲ್ಲಿ ಹರಿಹರ ನಗರದೊಳಗೆ ಆರೋಪಿ ನಂದಕುಮಾರ್, ರೈತರಿಂದ 10 ಕೋಟಿ 63 ಲಕ್ಷ ರೂ. ಮೌಲ್ಯದ ಮೆಕ್ಕೆಜೋಳ ಖರೀದಿಸಿದ್ದ. ರೈತರಿಗೆ ನೀಡಿದ ಚೆಕ್ ಕೂಡ ಬೌನ್ಸ್ ಆಗಿದ್ದವು. ಇದೇ ರೀತಿ ಹೊರ ರಾಜ್ಯದ ರೈತರಿಗೆ ವಂಚಿಸಿ ಆರೋಪಿ ತಲೆ‌ಮರೆಸಿಕೊಂಡಿದ್ದ.

ನಂದಕುಮಾರ್​ನಿಂದ ಮೋಸ ಹೋಗಿದ್ದ ಜಿಲ್ಲೆಯ ವಿವಿಧ ಭಾಗದ ರೈತರು ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಕುರಿತು ಹರಿಹರ ಕೋರ್ಟ್​​ 33 ಬಾರಿ ವಾರೆಂಟ್​​ ಜಾರಿ ಮಾಡಿದ್ದರು ಕೂಡ ಆರೋಪಿ ತಲೆ ಮರೆಸಿಕೊಂಡಿದ್ದ.

ಆರೋಪಿ ಬಲೆಗೆ ಬೀಳಿಸಲು ಕಾರ್ಯಪ್ರವೃತ್ತವಾದ ಹರಿಹರ ಪೊಲೀಸರು, ತಮಿಳುನಾಡಿನಲ್ಲಿ ನಂದಕುಮಾರ್​​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ನಡೆಸಿದ್ದ ತಂಡವನ್ನ ಎಸ್ಪಿ ಸಿ ಬಿ ರಿಷ್ಯಂತ್ ರಚಿಸಿದ್ದಲ್ಲದೇ, ಮಾರ್ಗದರ್ಶನ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.