ETV Bharat / state

ರೈತರಿಗಾಗಿ ಸ್ವಂತ ಖರ್ಚಿನಲ್ಲಿ ಕಾಮಗಾರಿ.. ಸಂಭವನೀಯ ನಷ್ಟ ತಪ್ಪಿಸಿದ ಬಿಜೆಪಿ ಮುಖಂಡ

ಬನ್ನಿಕೋಡು ಗ್ರಾಮದಲ್ಲಿ ಹಾದು ಹೋಗಿರುವ ಭದ್ರಾ ಉಪಕಾಲುವೆ ಮಳೆ ಹೊಡೆತಕ್ಕೆ ಕೊಚ್ಚಿ ಹೋಗಿತ್ತು. ಇದನ್ನರಿತ ಹರಿಹರದ ಬಿಜೆಪಿ ಮುಖಂಡ ರೈತರಿಗೆ ಆಸರೆಯಾಗಿ ನಿಂತಿದ್ದಾರೆ.

harihara bjp leader work for people by his own money
ರೈತರಿಗಾಗಿ ಸ್ವಂತ ಖರ್ಚಿನಲ್ಲಿ ಕಾಮಗಾರಿ ಮಾಡಿಸಿಕೊಟ್ಟ ಬಿಜೆಪಿ ಮುಖಂಡ
author img

By

Published : Jun 8, 2022, 5:44 PM IST

ದಾವಣಗೆರೆ: ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಾದು ಹೋಗಿರುವ ಭದ್ರಾ ಉಪಕಾಲುವೆ ಮಳೆ ಹೊಡೆತಕ್ಕೆ ಕೊಚ್ಚಿ ಹೋಗಿತ್ತು. ಪರಿಣಾಮ ಸುಮಾರು ಐದು ಸಾವಿರ ಎಕರೆ ಪ್ರದೇಶಕ್ಕೆ ನೀರಿಲ್ಲದೇ ಬೆಳೆ ಒಣಗುವ ಹಂತ ತಲುಪಿತ್ತು. ಈ ಬಗ್ಗೆ ರೈತರು ಜಿಲ್ಲಾಡಳಿತ ನೀರಾವರಿ ಇಲಾಖೆಗೆ ಮನವಿ ಮಾಡಿದ್ದರೂ ಕೂಡ ಏನೂ ಪ್ರಯೋಜನವಾಗದಿದ್ದಾಗ ಹರಿಹರದ ಬಿಜೆಪಿ ಮುಖಂಡ ರೈತರಿಗೆ ಆಸರೆಯಾಗಿ ನಿಂತಿದ್ದಾರೆ.

ರೈತರ ಸಂಕಷ್ಟ ನೋಡಿ ತಮ್ಮ ಸ್ವಂತ ಹಣದಿಂದ 7 ಲಕ್ಷ ರೂಪಾಯಿ ಖರ್ಚು ಮಾಡಿ ಕೊಚ್ಚಿಹೋದ ಸೇತುವೆಗೆ ಕಾಯಕಲ್ಪ ಒದಗಿಸಿದ್ದಾರೆ. ಇದರಿಂದ ಅಂದಾಜು 15 ಕೋಟಿ ರೂಪಾಯಿ ಮೊತ್ತದ ಬೆಳೆ ನಷ್ಟವಾಗುವುದು ತಪ್ಪಿದಂತಾಗಿದೆ. ಇನ್ನೇನು ಭತ್ತ ನೀರಿಲ್ಲದೇ ಒಣಗಿ ಹೋಯಿತು ಎಂದು ತಲೆಮೇಲೆ ಕೈಹೊತ್ತು ಕುಳಿತಿದ್ದ ರೈತರಿಗೆ ತುಸು ನೆಮ್ಮದಿ ಸಿಕ್ಕಿದೆ.

ರೈತರಿಗಾಗಿ ಸ್ವಂತ ಖರ್ಚಿನಲ್ಲಿ ಕಾಮಗಾರಿ ಮಾಡಿಸಿಕೊಟ್ಟ ಬಿಜೆಪಿ ಮುಖಂಡ

ಭದ್ರಾ ಉಪಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪುವುದು ಒಂದು ತಿಂಗಳು ತಡವಾಗುವುದರಿಂದ ಅ ಭಾಗದ ರೈತರು ತಡವಾಗಿ ನಾಟಿ ಮಾಡುತ್ತಾರೆ. ಈ ಹಿನ್ನೆಲೆ, ಕಟಾವಿಗೆ ಇನ್ನೊಂದು ತಿಂಗಳು ಬೇಕೇ ಬೇಕು. ಮೇಲ್ಭಾಗದ ರೈತರಿಗೆ ನೀರು ತಲುಪಿದ ಒಂದು ತಿಂಗಳ ಬಳಿಕ ಇವರಿಗೆ ನೀರು ಸಿಗುವುದರಿಮದ ಇವರು ಸ್ವಲ್ಪ ತಡವಾಗಿಯೇ ಕೃಷಿ ಮಾಡುತ್ತಾರೆ. ಇದೇ ಕಾರಣಕ್ಕೆ ಇವರಿಗೆ ಸಂಕಷ್ಟ ತಪ್ಪಿದ್ದಲ್ಲ. ನೀರು ಬಾರದ ಕಾರಣ ರೈತರ ದುಗುಡ ಹೆಚ್ಚಿತ್ತು.

ಆದರೆ ಅನಿರೀಕ್ಷಿತವಾಗಿ ಗ್ರಾಮಕ್ಕೆ ಬಂದ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಗಮನಕ್ಕೆ ರೈತರು ಈ ವಿಚಾರವನ್ನು ಮುಟ್ಟಿಸಿದ್ದಾರೆ. ಬಳಿಕ ನೇರವಾಗಿ ಅವರೇ ಭಾರಿ ಗಾತ್ರದ ಪೈಪ್​ಗಳನ್ನು ಖರೀದಿ ಮಾಡಿ ಮೂರು ದಿನಗಳಲ್ಲಿ ಕಾಮಗಾರಿ ಮುಗಿಸಿಕೊಟ್ಟಿದ್ದಾರೆ. ಅವರ ಈ ಕಾರ್ಯವನ್ನು ರೈತರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣಾ ಕಣದಿಂದ ನಮ್ಮ ಅಭ್ಯರ್ಥಿ ಹಿಂದಕ್ಕೆ ಸರಿಯುವ ಮಾತೇ ಇಲ್ಲ : ಹೆಚ್​​​​​ಡಿಕೆ

ಬಹುತೇಕ ಕಡೆಗಳಲ್ಲಿ ನೀರಿಲ್ಲದೇ ಕಟಾವು ಹಂತದಲ್ಲಿದ್ದ ಭತ್ತ ನಷ್ಟ ಆಗುವ ಸಾಧ್ಯತೆಯಿತ್ತು. ರೈತರು ನನಗೆ ವಿಷಯ ತಿಳಿಸಿದರು. ಜಿಲ್ಲಾಡಳಿತಕ್ಕಾಗಲಿ, ನೀರಾವರಿ ಇಲಾಖೆಗಾಗಲಿ ತುರ್ತಾಗಿ ಏನೂ ಮಾಡಲಾಗದ ಪರಿಸ್ಥಿತಿಯಿದ್ದ ಕಾರಣ ನನ್ನ ಕೈಲಾದ ಸಹಾಯವನ್ನು ನಾನು ಮಾಡಿದೆ ಎಂದು ಚಂದ್ರಶೇಖರ್ ಪೂಜಾರ್ ತಿಳಿಸಿದರು.

ರೈತ ಜಗದೀಶ್ ಮಾತನಾಡಿ, ಫಸಲು ಕೈ ಸೇರುವ ಹೊತ್ತಿಗೆ ವರುಣ ನಮಗೆ ಆಘಾತ ನೀಡಿದ. ಆದ್ರೆ ನಮ್ಮ ಚಂದ್ರಶೇಖರ್ ಪೂಜಾರ್ ಅವರು ಸಕಾಲದಲ್ಲಿ ರೈತರ ಸಹಾಯಕ್ಕೆ ಬಂದು ಭಾರಿ ಮೊತ್ತದ ಹಾನಿ ತಪ್ಪಿಸಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.