ದಾವಣಗೆರೆ: ಬಂಜಾರ ಸಮುದಾಯದ ಜೀವನದ ಹೆಣ್ಣುಮಕ್ಕಳ ಕುರಿತು ಹೆಣೆದಿರುವ ಕಥಾ ಹಂದರದ ಗೋರ್ ಜೀವನ್ ಸಿನಿಮಾ ದೇಶಾದ್ಯಂತ ನವೆಂಬರ್ 1 ರಂದು ತೆರೆ ಕಾಣಲಿದೆ.
ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಗುಜರಾತ್ ಸೇರಿದಂತೆ ಎಲ್ಲಾ ರಾಜ್ಯಗಳ 500 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಶಾಖಪಟ್ಟಣಂನ ಪಶ್ಚಿಮ ಗೋದಾವರಿಯಲ್ಲಿ ಈ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದೆ ಎಂದು ಚಿತ್ರದ ನಾಯಕ ನಟ ಹಾಗೂ ನಿರ್ದೇಶಕ ಕೆ. ಪಿ. ಎನ್. ಚೌಹಾನ್ ತಿಳಿಸಿದರು. ಮಂಗ್ಲಿಬಾಯಿ ಈ ಚಿತ್ರದ ನಾಯಕಿ. ಪೊಲೀಸ್ ಕಾನ್ಸ್ಸ್ಟೇಬಲ್ ಆಗಿದ್ದ ಚೌಹಾನ್ಗೆ ಮೊದಲಿನಿಂದಲೂ ಚಿತ್ರ ನಿರ್ದೇಶಿಸುವ, ನಟಿಸುವ ಆಸೆ ಇತ್ತು. ಹಾಗಾಗಿ ಹಲವು ವರ್ಷಗಳ ಪರಿಶ್ರಮದಿಂದ ಬಂಜಾರ ಭಾಷೆಯಲ್ಲಿ ಈ ಸಿನಿಮಾ ಮೂಡಿಬಂದಿದೆ. ತೆಲಂಗಾಣದ 70 ಹಾಗೂ ಮಹಾರಾಷ್ಟ್ರದ 60 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, 1.2 ಕೋಟಿ ರೂಪಾಯಿ ವೆಚ್ವದಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
"ಹೆಣ್ಣುಮಕ್ಕಳನ್ನು ರಕ್ಷಿಸಿ, ಗಿಡಗಳನ್ನು ರಕ್ಷಿಸಿ ಎಂಬ ಧ್ಯೇಯ ವಾಕ್ಯದಡಿ ಸಿನಿಮಾ ಮೂಡಿ ಬಂದಿದೆ. ಬಂಜಾರ ಸಮುದಾಯದ ಹೆಣ್ಣುಮಕ್ಕಳ ಜೀವನ, ಸಂಸ್ಕೃತಿ, ಆಚಾರ ವಿಚಾರ ಸೇರಿದಂತೆ ಹಲವು ವಿಚಾರಗಳುಳ್ಳ ಈ ಸಿನಿಮಾಕ್ಕೆ ಈಗಾಗಲೇ ಪ್ರಶಂಸೆ ವ್ಯಕ್ತವಾಗಿದ್ದು, ವಿದೇಶದಲ್ಲಿಯೂ ಗೋರ್ ಜೀವನ್ ಚಿತ್ರ ತೆರೆ ಕಾಣಲಿದೆ ಎಂದು ನಟ ಚೌಹಾನ್ ತಿಳಿಸಿದ್ರು.