ETV Bharat / state

ಕಾರ್ಯಕರ್ತರು ರಾಜೀನಾಮೆ ನೀಡಿದ್ರೆ ನಮ್ಮ ಪಕ್ಷ ಏನ್​ ಮುಳುಗಿಹೋಗಲ್ಲ: ಸಂಸದ ಸಿದ್ದೇಶ್ವರ್ ಉಡಾಫೆ

ಯಾರೋ ಕೆಲವರು ರಾಜೀನಾಮೆ ನೀಡುತ್ತಾರೆ- ನಮ್ಮ ಪಕ್ಷ ಮುಳುಗಿ ಹೋಗುವುದಿಲ್ಲ- ಸಂಸದ ಜಿ.ಎಂ ಸಿದ್ದೇಶ್ವರ್ ಉಡಾಫೆ ಮಾತು

gm-siddeshwar-gave-a-blunt-reply-to-the-resignation-of-bjp-karyakarthas
ರಾಜೀನಾಮೆ ನೀಡಿದ್ರೆ ಪಕ್ಷ ಮುಳುಗಿ ಹೋಗಲ್ಲ, 11 ಕೋಟಿ ಕಾರ್ಯಕರ್ತರ ಹೊಂದಿದ ಪಕ್ಷ ನಮ್ಮದು: ಸಂಸದ ಸಿದ್ದೇಶ್ವರ್ ಉಡಾಫೆ ಹೇಳಿಕೆ
author img

By

Published : Jul 30, 2022, 7:43 PM IST

ದಾವಣಗೆರೆ : ಯಾರೋ ಒಬ್ಬಿಬ್ಬರು ರಾಜೀನಾಮೆ ನೀಡ್ತಾರೆ ಅಂದ್ರೇ ಪಕ್ಷ ಏನ್ ಮುಳುಗಿ ಹೋಗಲ್ಲ, 11 ಕೋಟಿ ಕಾರ್ಯಕರ್ತರನ್ನು ಹೊಂದಿರುವ ಪಕ್ಷ ನಮ್ಮದು ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಉಡಾಫೆಯ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, ಅವರ್ಯಾರು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ, ರಾಜೀನಾಮೆ ಕೊಡುವ ಮುನ್ನ ನಮ್ಮ ಜಿಲ್ಲಾಧ್ಯಕ್ಷರು, ಶಾಸಕರಲ್ಲಿ, ನನ್ನಲ್ಲಿ ಮಾತನಾಡಬೇಕು ಎಂದು ಹೇಳಿದರು.

ಅವರು ಯಾರೂ ಪಕ್ಷಕ್ಕೆ ಇದುವರೆಗೆ ರಾಜೀನಾಮೆ ಸಲ್ಲಿಸಿಲ್ಲ. ಅವರು ರಾಜೀನಾಮೆ ಸಲ್ಲಿಸಿದ್ದರೂ ಅದು ಒಪ್ಪಿಗೆಯಾಗಲ್ಲ. ಟಿವಿಯಲ್ಲಿ ಬರುತ್ತೇವೆಂದು ರಾಜೀನಾಮೆ ನೀಡಿರಬೇಕು. ಈ ಬಗ್ಗೆ ಎಲ್ಲರನ್ನು ಮಾತನಾಡಿಸಿ ಸಮಾಧಾನಪಡಿಸುತ್ತೇವೆ ಎಂದು ಹೇಳಿದರು.

ರಾಜೀನಾಮೆ ನೀಡಿದ್ರೆ ಪಕ್ಷ ಮುಳುಗಿ ಹೋಗಲ್ಲ, 11 ಕೋಟಿ ಕಾರ್ಯಕರ್ತರ ಹೊಂದಿದ ಪಕ್ಷ ನಮ್ಮದು: ಸಂಸದ ಸಿದ್ದೇಶ್ವರ್ ಉಡಾಫೆ ಹೇಳಿಕೆ

ಈ ಹಿಂದೆ 32 ಮಂದಿ ಕಾರ್ಯಕರ್ತರು ಹತ್ಯೆಯಾಗಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ನಮ್ಮ ಸರ್ಕಾರ ಇದ್ದಾಗ ಎರಡು ಮೂರು ಹತ್ಯೆಗಳು ಆಗಿವೆ. ಇದಕ್ಕೆ ಸಂಬಂಧಿಸಿದಂಗತೆ ಕಾನೂನುಬದ್ಧವಾಗಿ ಹಾಗೂ ಸಂವಿಧಾನಾತ್ಮಕವಾಗಿ ನಮ್ಮ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳುತ್ತಾರೆ. ಯಾರೋ ಹೇಳಿದ್ದಾರೆಂದು ಎನ್ಕೌಂಟರ್ ಮಾಡಿದರೆ, ನೀವೇ ಗುಂಡಿಕ್ಕಿ ಕೊಂದರು ಎಂದು ಸುದ್ದಿ ಮಾಡಿ ಸರ್ಕಾರ ಬೀಳಿಸುತ್ತೀರಾ, ಕಾನೂನುಬದ್ಧವಾಗಿ ನಮ್ಮ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತಾರೆ ಎಂದು ಸಂಸದ ಸಿದ್ಧೇಶ್ವರ್ ಹೇಳಿದ್ದಾರೆ.

ಓದಿ : ರಾಜಕೀಯಕ್ಕೋಸ್ಕರ ಕೊಲೆಗಳು ನಡೆಯುತ್ತಿವೆ, ಇವುಗಳನ್ನು ಹತೋಟಿಗೆ ತರಬೇಕು: ಸಚಿವ ಮಾಧುಸ್ವಾಮಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.