ETV Bharat / state

ರಾತ್ರಿಯೇ ನೆರವೇರಿದ ಕೊರೊನಾಗೆ ಬಲಿಯಾದ ವೃದ್ಧನ ಅಂತ್ಯಸಂಸ್ಕಾರ

ಕೋವಿಡ್-19 ಸೋಂಕಿನಿಂದ ಮೃತಪಟ್ಟ ದಾವಣಗೆರೆ ವೃದ್ಧನ ಶವಸಂಸ್ಕಾರವನ್ನು ಜಿಲ್ಲಾಡಳಿತ ಕೊರೊನಾ ನಿಯಮಾವಳಿಯಂತೆ ನಿನ್ನೆ ರಾತ್ರಿಯೇ ಮಾಡಿ ಮುಗಿಸಿದೆ.

funeral-of-corona-death-person-in-davanagere
ವೃದ್ಧನ ಅಂತ್ಯಸಂಸ್ಕಾರ
author img

By

Published : May 2, 2020, 10:30 AM IST

ದಾವಣಗೆರೆ: ಕೊರೊನಾಕ್ಕೆ ಜಿಲ್ಲೆಯಲ್ಲಿ ಮೊದಲ ಬಲಿಯಾದ 69 ವರ್ಷದ ವೃದ್ಧನ ಅಂತ್ಯಸಂಸ್ಕಾರ ನಿನ್ನೆ ರಾತ್ರಿಯೇ ನಡೆಸಲಾಗಿದೆ.

ಪಿ-556 ಸೋಂಕಿತ ಕಳೆದ ರಾತ್ರಿ 9.30 ಕ್ಕೆ ಮೃತಪಟ್ಟಿದ್ದರು.‌ ಮೃತರ ಶವಸಂಸ್ಕಾರವನ್ನು ಕಳೆದ ರಾತ್ರಿ 3.45 ಕ್ಕೆ ಜಿಲ್ಲಾಡಳಿತ ಮುಗಿಸಿದೆ. ದಾವಣಗೆರೆ ಎಸ್ಪಿ ಹನುಮಂತರಾಯ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಲಹೆ ಸೂಚನೆಯಂತೆ ಕೋವಿಡ್-19 ನಿಯಮಾವಳಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಇನ್ನು ಮೃತ ವೃದ್ಧನ ಕುಟುಂಬದ ಐವರು ಸದಸ್ಯರಿಗೆ ಪಾಸಿಟಿವ್ ಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂತ್ಯಕ್ರಿಯೆಯಲ್ಲೂ ಪಾಲ್ಗೊಳ್ಳಲಾರದಂತಹ ಹೀನಾಯ ಸ್ಥಿತಿಯಲ್ಲಿ ಕುಟುಂಬದ ಸದಸ್ಯರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.