ETV Bharat / state

ಬೈಕ್ ಕಳ್ಳತನ ಮಾಡಿ ಪೊಲೀಸರ ಬಲೆಗೆ ಬಿದ್ದ ನಾಲ್ವರು... 10 ಬೈಕ್ ವಶ - ದಾವಣಗೆರೆ ಬೈಕ್​ ಕಳ್ಳರು,

ದಾವಣಗೆರೆಯ ವಿವಿಧೆಡೆ ಬೈಕ್ ಕಳವು ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 10 ಬೈಕ್​ಗಳನ್ನು ವಶಕ್ಕೆ ಪಡೆದಿದ್ದಾರೆ.

Four bike thieves arrest, Four bike thieves arrest in Davanagere, Davanagere bike thieves, Davanagere bike thieves news, ನಾಲ್ವರು ಬೈಕ್​ ಕಳ್ಳರ ಬಂಧನ, ದಾವಣಗೆರೆಯಲ್ಲಿ ನಾಲ್ವರು ಬೈಕ್​ ಕಳ್ಳರು ಬಂಧನ, ದಾವಣಗೆರೆ ಬೈಕ್​ ಕಳ್ಳರು, ದಾವಣಗೆರೆ ಬೈಕ್​ ಕಳ್ಳರು ಸುದ್ದಿ,
ದಾವಣಗೆರೆಯ ವಿವಿಧೆಡೆ ಬೈಕ್ ಕಳವು ಮಾಡಿದ್ದ ನಾಲ್ವರು ಬಂಧನ
author img

By

Published : Sep 11, 2020, 5:02 PM IST

ದಾವಣಗೆರೆ: ನಗರದ ವಿವಿಧೆಡೆ ಹಾಗೂ ಹರಿಹರದಲ್ಲಿ ಬೈಕ್‌ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ 10 ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಾವಣಗೆರೆಯ ವಿವಿಧೆಡೆ ಬೈಕ್ ಕಳವು ಮಾಡಿದ್ದ ನಾಲ್ವರು ಬಂಧನ

ದಾವಣಗೆರೆ ನಗರದ ಬಸವರಾಜಪೇಟೆಯ ತರಗಾರು ಕಾರ್ಮಿಕ ಖಲಂದರ್, ಎಸ್. ಎಂ. ನಗರದ ರಹೀಂ, ವಿನೋಬನಗರದ ಚಿಕ್ಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಯೀಂ ಖಾನ್ ಅಲಿಯಾಸ್ ಚೋಟು ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ದಸ್ತಗಿರಿ‌ ಮಾಡಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

ಕೆಟಿಜೆ ನಗರ ಪೊಲೀಸ್ ಠಾಣೆಯ ಮೂರು, ಆಜಾದ್ ನಗರ ಪೊಲೀಸ್ ಠಾಣೆಯ ಮೂರು, ಗಾಂಧಿನಗರ ಪೊಲೀಸ್ ಠಾಣೆಯ 2 ಹಾಗೂ ಹರಿಹರ ನಗರ ಠಾಣೆಯ 2 ಬೈಕ್​ಗಳ ಕಳ್ಳತನ ಪ್ರಕಣಗಳು ದಾಖಲಾಗಿದ್ದವು.

ಕೆಟಿಜೆ ನಗರ ಪೊಲೀಸ್ ಠಾಣೆಯ ಪಿಎಸ್ಐ ಅಬ್ದುಲ್‌ ಖಾದರ್ ಸಿಬ್ಬಂದಿಯೊಂದಿಗೆ ಗೀತಾಂಜಲಿ‌ ಚಿತ್ರಮಂದಿರದ ಬಳಿ ಗಸ್ತಿನಲ್ಲಿದ್ದಾಗ ಈರುಳ್ಳಿ ಮಾರ್ಕೆಟ್ ಕಡೆಯಿಂದ ಇಬ್ಬರು ಪಲ್ಸರ್​ ಬೈಕ್​ನಲ್ಲಿ ಬರುತ್ತಿದ್ದರು. ಈ ವೇಳೆ ಪೊಲೀಸ್ ಜೀಪ್ ನೋಡಿ ಪರಾರಿಯಾಗಲು ಯತ್ನಿಸಿದ್ದು, ಹಿಂಬದಿ ಕೂತಿದ್ದ ವ್ಯಕ್ತಿ ಓಡಿ ಹೋಗಿದ್ದ. ಆಗ ಸೆರೆ ಸಿಕ್ಕ ಕಾನೂನು ಸಂಘರ್ಷ ಬಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಉಳಿದ ಆರೋಪಿಗಳ ಮಾಹಿತಿ ನೀಡಿದ್ದು, ಈ ಮೇರೆಗೆ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.