ETV Bharat / state

'ಕೆಲಸ ಕೊಡ್ತೀವಿ ಅಂತ ಹೇಳಿ ಇರೋ ಕಾರ್ಮಿಕರನ್ನು ಬೀದಿಗೆ ತಂದಿದ್ದಾರೆ' - Former Union Minister Muniyappa

ಎರಡು ಕೋಟಿ ಜನರಿಗೆ ಕೆಲಸ ಕೊಡ್ತಿವಿ ಎಂದು ಎಂದಿದ್ದ ಮೋದಿಯವರು ಇಲ್ಲಿಯ ತನಕ ಯಾವುದೇ ಕೆಲಸ ನೀಡಿಲ್ಲ. ಕೆಲಸ ಕೊಡಿಸುವ ಬದಲು ಇರುವಂತಹ ಕಾರ್ಮಿಕರನ್ನು ಬೀದಿಗೆ ತಂದಿದ್ದು, ಇದರ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಹೋರಾಟ ಮಾಡುತ್ತದೆ ಎಂದು ಮಾಜಿ ಕೇಂದ್ರ ಸಚಿವ ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

Former Union Minister Muniyappa
ಮಾಜಿ ಕೇಂದ್ರ ಸಚಿವ ಮುನಿಯಪ್ಪ
author img

By

Published : Jan 19, 2021, 9:17 PM IST

ದಾವಣಗೆರೆ: ಪಾರ್ಲಿಮೆಂಟ್​​ನಲ್ಲಿ ಕೂತು ಮಾಡಿರುವ ಕಾನೂನು ದೊಡ್ಡದೆಂದು ಹೇಳ್ತಾರೆ. ಆದರೆ ರೈತ ವಿರೋಧಿ, ಜನ ವಿರೋಧಿಯಾಗಿರುವ ಕಾನೂನುಗಳನ್ನು ಜಾರಿಗೆ ತಂದಿದ್ದಾರೆಂದು ಮಾಜಿ ಕೇಂದ್ರ ಸಚಿವ ಮುನಿಯಪ್ಪ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ‌ದರು.

ಕೇಂದ್ರದ ಮಾಜಿ ಸಚಿವ ಮುನಿಯಪ್ಪ ವಾಗ್ದಾಳಿ

ದಾವಣಗೆರೆಯಲ್ಲಿ ಮಾತನಾಡಿದ‌ ಅವರು ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠವನ್ನು ಕಲಿಸುತ್ತಾರೆ. ಎರಡು ಕೋಟಿ ಜನರಿಗೆ ಕೆಲಸ ಕೊಡ್ತೀವಿ ಎಂದು ಎಂದಿದ್ದ ಮೋದಿಯವರು ಇಲ್ಲಿಯ ತನಕ ಯಾವುದೇ ಕೆಲಸ ನೀಡಿಲ್ಲ. ಕೆಲಸ ಕೊಡಿಸುವ ಬದಲು ಇರುವಂತಹ ಕಾರ್ಮಿಕರನ್ನು ಬೀದಿಗೆ ತಂದಿದ್ದು, ಇದರ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಹೋರಾಟ ಮಾಡುತ್ತದೆ ಎಂದರು.

ಓದಿ:ಬಿಜೆಪಿ ಸರ್ಕಾರದಿಂದ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿತ: ಕೆ.ಎಚ್. ಮುನಿಯಪ್ಪ

ಇನ್ನು ಮುಂದೆ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಅಧಿಕಾರಕ್ಕೆ ಬರುತ್ತೆ ಎಂದಾಗ ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾ ದಾಳಿ ನಡೆಸಿ ಜನರನ್ನು ದಾರಿ ತಪ್ಪಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರು ಎಂದು ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.