ETV Bharat / state

ಹೈಟೆಕ್ ಸ್ವಾಮೀಜಿ ಕುಂತಲ್ಲೇ ಹೋರಾಟ ಮಾಡ್ತಾರೆ: ವಚನಾನಂದ ಶ್ರೀ ವಿರುದ್ಧ ಶಿವಶಂಕರ್ ಕಿಡಿ

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೆಸರು ಪ್ರಸ್ತಾಪಿಸದೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

author img

By

Published : Jan 6, 2021, 2:04 PM IST

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್
Former MLA Shivashankar

ದಾವಣಗೆರೆ: ಕೂಡಲ ಸಂಗಮ ಪೀಠಾಧಿಪತಿ ಜಯಮೃತ್ಯುಂಜಯ ಶ್ರೀಗಳು ಸಮಾಜಕ್ಕಾಗಿ ಹೋರಾಟ ಮಾಡುವವರು. ಆದರೆ, ಇನ್ನೊಬ್ಬರು ಹೈಟೆಕ್ ಸ್ವಾಮಿಗಳು. ಕುಂತಲ್ಲೇ ಫೇಸ್​​ಬುಕ್ ಮೂಲಕ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಬೆಂಬಲ ಪಡೆಯುವವರು ಎಂದು ಹೇಳುವ ಮೂಲಕ ಜೆಡಿಎಸ್​​ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೆಸರು ಪ್ರಸ್ತಾಪಿಸದೇ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದ ಮೂಲಕ ಸ್ವಾಮೀಜಿಯೊಬ್ಬರು ಪ್ರಚಾರ ಪಡೆಯುತ್ತಾರೆ. ಅವರ ಅನುಕೂಲಕ್ಕಾಗಿ ಹೋರಾಟ ಮಾಡುತ್ತಾರೆ. ಅವರದ್ದು ಕೇವಲ ವೈಭವೀಕರಣ. ವಾಟ್ಸ್​ಆ್ಯಪ್​ ಮೂಲಕ ಕೆಲಸ ಮಾಡುತ್ತಾರೆ ಅಷ್ಟೇ. ಸಮಾಜಕ್ಕಾಗಿ ಕೇವಲ ಬೆರಳೆಣಿಕೆಯಷ್ಟು ಶ್ರೀಗಳು ಹೋರಾಟ ನಡೆಸಿದ್ದಾರೆ‌ ಎಂದು ಹೇಳಿದರು.

ಓದಿ: ಹೊಸಪೇಟೆ:ಮಕ್ಕಳಿಗೆ ವಿಷವುಣಿಸಿ ದಂಪತಿ ಆತ್ಮಹತ್ಯೆ

ಲಿಂಗಾಯತ ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸಲು ಹೋರಾಟ ನಡೆಸಲಾಗುತ್ತಿದೆ. ಈಗಲಾದರೂ ಸಮಾಜಕ್ಕೆ ಮೀಸಲಾತಿ ಸಿಗಬೇಕು. ಇದು ರಾಜಕೀಯ ಹೋರಾಟ ಅಲ್ಲ, ಸಮಾಜಕ್ಕೆ ಸಂಬಂಧಿಸಿದ್ದು, ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕೆಲವರು ರಾಜಕೀಯ ಹಿತಾಸಕ್ತಿಗೋಸ್ಕರ, ಮತ್ತೆ ಕೆಲವರು ಸ್ವಾರ್ಥ ಸಾಧನೆಗೆ ಪಾದಯಾತ್ರೆ ಮಾಡುತ್ತಾರೆ. ಆದರೆ ಜಯಮೃತ್ಯುಂಜಯ ಶ್ರೀಗಳು ಸಮಾಜದ ಏಳಿಗೆಗಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ. ಜಿಲ್ಲೆಯಿಂದ ಲಕ್ಷಾಂತರ ಜನರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ‌. ನಮ್ಮಲ್ಲಿ ಒಗ್ಗಟ್ಟು ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಶ್ರೀಗಳು ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದು, ನಾವೆಲ್ಲರೂ ಕೈ ಜೋಡಿಸೋಣ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.