ETV Bharat / state

ದಾವಣಗೆರೆಯಲ್ಲಿ ಕೊರೊನಾದಿಂದ ಐವರು ಗುಣಮುಖ: ಆಸ್ಪತ್ರೆಯಿಂದ ಆತ್ಮೀಯ ಬೀಳ್ಕೊಡುಗೆ

author img

By

Published : May 22, 2020, 11:35 AM IST

Updated : May 22, 2020, 1:02 PM IST

ದಾವಣಗೆರೆ ಚಿಗಟೇರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಐವರು ಸಂಪೂರ್ಣ ಗುಣಮುಖರಾಗಿದ್ದು,ಅದ್ಧೂರಿ ಬೀಳ್ಕೊಡುಗೆ ನೀಡಲಾಯಿತು.

Five corona patients discharged from hospital
ಕೊರೊನಾದಿಂದ ಐವರು ಗುಣಮುಖ

ದಾವಣಗೆರೆ: ಕೊರೊನಾ ಸೋಂಕಿನಿಂದ ಗುಣಮುಖರಾದ ಐವರನ್ನು ಜಿಲ್ಲಾಸ್ಪತ್ರೆಯಿಂದ ಬೀಳ್ಕೊಡಲಾಯಿತು.

ದಾವಣಗೆರೆ ಚಿಗಟೇರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಐವರು ಸಂಪೂರ್ಣ ಗುಣಮುಖರಾಗಿದ್ದು, ಇವರನ್ನು ಡಿಸಿ, ಎಸ್ಪಿ ಹಾಗೂ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.

ಬಳಿಕ ಮಾತನಾಡಿದ ಡಿಸಿ ಮಹಾಂತೇಶ ಬೀಳಗಿ, ಗುರುವಾರ ಜಿಲ್ಲೆಯಲ್ಲಿ ಮೂರು ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಪಿ-1483, ಪಿ-1485, ಪಿ-1488 ಜಾಲಿನಗರಕ್ಕೆ ಸಂಬಂಧಟ್ಟವರು. ಪಿ-1485 ಇವರು ಪಿ-667 ರ ದ್ವಿತೀಯ ಸಂಪರ್ಕ ಹೊಂದಿದವರು. ಪಿ-1488 ಇವರು ಪಿ-634 ಸಂಪರ್ಕಿತರಾಗಿದ್ದಾರೆ. ಪಿ-1483 15 ವರ್ಷದ ಬಾಲಕನಾಗಿದ್ದು, ಈ ಪ್ರಕರಣ ಎಪಿಸೆಂಟರ್​ನ ಕಂಟೈನ್ಮೆಂಟ್ ಝೋನ್‍ಲ್ಲಿ ಕಂಡುಬಂದಿತ್ತು ಎಂದು ಮಾಹಿತಿ ನೀಡಿದರು.

ಆಸ್ಪತ್ರೆಯಿಂದ ಆತ್ಮೀಯ ಬೀಳ್ಕೊಡುಗೆ

ಕೊರೊನಾದಿಂದ ಗುಣಮುಖರಾದ ಒಟ್ಟು 5 ಜನರನ್ನು ಗುರುವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಐದು ಜನರು ಪಿ-618, 620, 623, 628, 664 ಆಗಿದ್ದು ಇವರಲ್ಲಿ ಇಬ್ಬರು ಪುರುಷರು ಹಾಗೂ ಮೂವರು ಹೆಣ್ಣು ಮಕ್ಕಳಾಗಿದ್ದಾರೆ. ಬುಧವಾರ 7 ಜನ, 5 ಗುರುವಾರ 5 ಹಾಗೂ ಹಳೆಯ ಇಬ್ಬರು ಸೇರಿ ಒಟ್ಟು 14 ಜನರನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ. 4 ಜನ ಸಾವನ್ನಪ್ಪಿದ್ದು ಒಟ್ಟು 115 ರಲ್ಲಿ 97 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದರಲ್ಲದೇ, 14 ದಿನ ಚಿಕಿತ್ಸೆ ಮುಗಿದವರದ್ದು ಮೊತ್ತೊಮ್ಮೆ ಸ್ಯಾಂಪಲ್ ಸಂಗ್ರಹಿಸಿ ಕಳುಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದಷ್ಟು ಬೇಗ ಎಲ್ಲರೂ ಗುಣಮುಖರಾಗುವ ವಿಶ್ವಾಸ ಇದೆ ಎಂದು ತಿಳಿಸಿದರು.

Last Updated : May 22, 2020, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.