ETV Bharat / state

ಹಕ್ಕಿಜ್ವರ ಭೀತಿ: ಈ ಕಂಪನಿಗೆ ಸೇರಿದ್ದ 2 ಲಾರಿ ವಶಕ್ಕೆ

ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಜ್ವರದ ಹರಡುವಿಕೆಯ ನಡುವೆ 2 ಲಾರಿಗಳಲ್ಲಿ ಸಾಗಿಸುತ್ತಿದ್ದ ನೂರಾರು ಕೋಳಿಗಳನ್ನು ಪಶುಸಂಗೋಪನಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಹರಿಹರ ಬಳಿ ವೆಂಕೋಬ್ ಚಿಕನ್ಸ್​​ಗೆ ಸೇರಿದ್ದ ಲಾರಿಯಲ್ಲಿ ಕೋಳಿಗಳನ್ನು ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಎಚ್ಚರಿಕೆಯ ದೃಷ್ಟಿಯಿಂದ ಕೋಳಿ ರಕ್ತದ ಮಾದರಿಯನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿದೆ.

author img

By

Published : Mar 23, 2020, 3:15 PM IST

Fear of bird flu: 2 lorry belonging to Venkobb Chicken Company arrested
ಹಕ್ಕಿಜ್ವರ ಭೀತಿ: ವೆಂಕೋಬ್ ಚಿಕನ್ ಕಂಪನಿಗೆ ಸೇರಿದ್ದ 2 ಲಾರಿ ವಶಕ್ಕೆ

ದಾವಣಗೆರೆ: ಹಕ್ಕಿಜ್ವರ ಭೀತಿ ನಡುವೆಯೂ ಹರಿಹರದಲ್ಲಿ ಕೋಳಿಗಳ ಸಾಗಣೆ ಮಾಡುತ್ತಿದ್ದ 2 ಲಾರಿಗಳನ್ನು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ತಡೆದು ನೂರಾರು ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ. ವೆಂಕೋಬ್ ಚಿಕನ್ ಕಂಪನಿಗೆ ಸೇರಿದ್ದ ನೂರಾರು ಕೋಳಿಗಳನ್ನು 2 ಲಾರಿಗಳ ಮೂಲಕ ಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ.

ವೆಂಕೋಬ್ ಚಿಕನ್ ಕಂಪನಿಗೆ ಸೇರಿದ್ದ 2 ಲಾರಿ ವಶಕ್ಕೆ

ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಈ ಗ್ರಾಮದ ಸುತ್ತಮುತ್ತಲಿನ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೋಳಿಗಳ ನಾಶಕ್ಕೆ ಸೂಚಿಸಲಾಗಿತ್ತು. ಮಾತ್ರವಲ್ಲ ಕೋಳಿಗಳ ಸಾಗಣೆಗೆ ಬ್ರೇಕ್ ಹಾಕಲಾಗಿತ್ತು. ಆದರೂ ಹರಿಹರದಲ್ಲಿ 2 ಲಾರಿಗಳಲ್ಲಿ ಕೋಳಿಗಳ ಸಾಗಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಕೋಳಿಗಳಲ್ಲಿ ಹೆಚ್​​​​​5ಎನ್​1 ಸೋಂಕಿನ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆ ಕೋಳಿಗಳ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.