ETV Bharat / state

ಜಮೀನು ಖಾಲಿ ಮಾಡಿಸಲು ಮುಂದಾದ ಅಧಿಕಾರಿಗಳು: ವಿಷದ ಬಾಟಲಿ ಹಿಡಿದು ನಿಂತ ರೈತರು!

ಜೆಸಿಬಿ ಸಹಿತ ಒಕ್ಕಲೆಬ್ಬಿಸಲು ಬಂದ ಅಧಿಕಾರಿಗಳನ್ನು ತಡೆದ ರೈತರು, ವಿಷದ ಬಾಟಲಿ ತೋರಿಸಿ ಕುಡಿಯಲು ಮುಂದಾದರು. ರಾಜಸ್ವ ನಿರೀಕ್ಷಕ ಸೇರಿ ಸ್ಥಳಕ್ಕೆ ಬಂದ ಅಧಿಕಾರಿಗಳೊಂದಿಗೆ ರೈತರು ಮಾತಿನ ಚಕಮಕಿ ನಡೆಸಿದರು. ದಾವಣಗೆರೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

Farmers protesting with a bottle of poison
ವಿಷದ ಬಾಟಲಿಯೊಂದಿಗೆ ಪ್ರತಿಭಟಿಸಿದ ರೈತರು..
author img

By

Published : Jun 24, 2020, 7:52 PM IST

ದಾವಣಗೆರೆ: ಜಮೀನು ಖಾಲಿ ಮಾಡಿಸಿದರೆ ಆತ್ಮಹತ್ಯೆ ‌ಮಾಡಿಕೊಳ್ಳುವುದಾಗಿ ವಿಷದ ಬಾಟಲ್ ಸಹಿತ ರೈತರು ಪ್ರತಿಭಟನೆಗೆ ಮುಂದಾದ ಘಟನೆ ಜಿಲ್ಲೆಯ ಹರಪನಹಳ್ಳಿ ‌ತಾಲೂಕಿನ ಮತ್ತೂರು ಗ್ರಾಮದಲ್ಲಿ ನಡೆದಿದೆ.

ವಿಷದ ಬಾಟಲಿಯೊಂದಿಗೆ ಪ್ರತಿಭಟಿಸಿದ ರೈತರು

ಬಗರ್ ಹುಕುಂ ಜಮೀನಿನ ಸರ್ವೇಗೆ ಕಂದಾಯ ಇಲಾಖೆ ಮುಂದಾಗಿತ್ತು. ಈ ವೇಳೆ ಮಾತನಾಡಿದ ರೈತರು, ನಾವಿಲ್ಲಿ ಸುಮಾರು 42 ರೈತರು ಹಲವು ವರ್ಷಗಳಿಂದ ಈ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದೇವೆ. ಕಂದಾಯ ಇಲಾಖೆ ಅಧಿಕಾರಿಗಳು ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಮಹಿಳೆಯರಿದ್ದ ಕಾರಣ ಪರಿಸ್ಥಿತಿ ನಿಯಂತ್ರಿಸಲು‌ ಮಹಿಳಾ ಪೊಲೀಸರು ಹರಸಾಹಸಪಟ್ಟರು.

ಜೆಸಿಬಿ ಸಹಿತ ಒಕ್ಕಲೆಬ್ಬಿಸಲು ಬಂದ ಅಧಿಕಾರಿಗಳನ್ನು ತಡೆದ ರೈತರು, ವಿಷ ಕುಡಿಯಲು ಮುಂದಾದರು. ರಾಜಸ್ವ ನಿರೀಕ್ಷಕ ಸೇರಿದಂತೆ ಸ್ಥಳಕ್ಕೆ ಬಂದ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.

ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಾಣ ಹೋದ್ರು ಭೂಮಿ ಬಿಡುವುದಿಲ್ಲವೆಂದು ಪಟ್ಟು ಹಿಡಿದ ರೈತರು, ನಮಗೆ ಈ ಜಮೀನು ಬಿಟ್ಟರೆ ಬೇರೇನೂ ಇಲ್ಲ. ಈಗ ಬಂದು ಜಮೀನು ಬಿಡಿ ಎಂದರೆ ನಾವೆಲ್ಲಾ ಏನು‌ ಮಾಡಬೇಕೆಂದು ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.