ETV Bharat / state

ಕಂಟಕವಾದ ಲಾರಿಗಳ ಧೂಳು.. ಅರ್ಧ ಎಕರೆಯಲ್ಲಿನ ಬೆಳೆ ಉಳಿಸಿಕೊಳ್ಳಲು ಗಟ್ಟಿಗಿತ್ತಿ ಏಕಾಂಗಿ ಹೋರಾಟ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಾರಥಿ ಗ್ರಾಮದ ಮಹಿಳೆ ಕೊಟ್ರಮ್ಮ ತಮ್ಮ ಜಮೀನಿನ ಮೂಲಕ ಹಾದುಹೋಗುವ ಲಾರಿಗಳಿಂದ ಬೇಸತ್ತು ತಿಂಗಳಿನಿಂದ ಪ್ರತಿಭಟನೆ ಮಾಡ್ತಿದ್ದಾರೆ.

ಮಹಿಳೆ ಕೊಟ್ರಮ್ಮ
ಮಹಿಳೆ ಕೊಟ್ರಮ್ಮ
author img

By

Published : Nov 28, 2022, 9:02 PM IST

ದಾವಣಗೆರೆ: ಆ ಬಡ ರೈತ ಮಹಿಳೆ ತಮ್ಮ ಅರ್ಧ ಎಕರೆ ಜಮೀನಿನಲ್ಲಿ 40 ಸಾವಿರ ವ್ಯಯ ಮಾಡಿ ಮೆಣಸಿನಕಾಯಿ ಬೆಳೆ ಬೆಳೆದಿದ್ದಳು. ಆದರೆ ಆ ಬೆಳೆಗೆ ಮಣ್ಣು ಸಾಗಣೆ ಲಾರಿಗಳೇ ಕಂಠಕವಾಗಿವೆ. ಲಾರಿ ಚಾಲನೆಯಿಂದ ಏಳುವ ಧೂಳಿನಿಂದ ಬೇಸತ್ತ ಆ ರೈತ ಮಹಿಳೆ ಏಕಾಂಗಿಯಾಗಿ ಹೋರಾಟಕ್ಕಿಳಿದು ಬೃಹತ್ ಲಾರಿಗಳ ವಿರುದ್ಧ ತೊಡೆತಟ್ಟಿದ್ದಾರೆ. ಮಣ್ಣು ಸಾಗಣೆ ಮಾಡ್ಬೇಕಾದ್ರೇ ಧೂಳುಮಯವಾಗಿರುವ ರಸ್ತೆಗೆ ಧೂಳು ಏಳದಂತೆ ನೀರು ಸಿಂಪಡಿಸಿ ಲಾರಿಗಳನ್ನು ಚಲಾಯಿಸಿ ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ.

ಮಣ್ಣು ಸಾಗಣೆ ಲಾರಿಗಳ ಧೂಳಿನಿಂದ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯನ್ನು ರಕ್ಷಿಸಲು ಬಡರೈತ ಮಹಿಳೆ ಬೃಹತ್ ಲಾರಿಗಳ ವಿರುದ್ಧ ಸಮರ ಸಾರಿದ್ದಾಳೆ. ಜಿಲ್ಲೆಯ ಹರಿಹರ ತಾಲೂಕಿನ ಸಾರಥಿ ಗ್ರಾಮದ ಮಹಿಳೆ ಕೊಟ್ರಮ್ಮ ತಮ್ಮ ಜಮೀನಿನ ಮೂಲಕ ಹಾದುಹೋಗುವ ಲಾರಿಗಳಿಂದ ಬೇಸತ್ತು ತಿಂಗಳಿನಿಂದ ಪ್ರತಿಭಟನೆ ಮಾಡ್ತಿದ್ದಾರೆ. ಏಕಾಂಗಿಯಾಗಿ ರಸ್ತೆಗಿಳಿದ ಗಟ್ಟಿಗಿತ್ತಿ ಕೊಟ್ರಮ್ಮ ಲಾರಿಯನ್ನು ತಡೆದು ಆಕ್ರೋಶ ಹೊರಹಾಕುತ್ತಿದ್ದಾರೆ.

ಸಮಸ್ಯೆ ಏನು?: ರೈತರು ಇಟ್ಟಿಗೆ ಭಟ್ಟಿಗಳಿಗೆ ಮಣ್ಣು ಸಾಗಿಸಲು ಒಂದು ಟಿಪ್ಪರ್ ಲೋಡ್​ಗೆ ಆರು ಸಾವಿರ ನಿಗದಿ ಮಾಡಲಾಗಿದೆ. ಆ ಮಣ್ಣಿನ ಲೋಡ್​ಗಳು ಕೊಟ್ರಮ್ಮರ ಹೊಲದ ಮೂಲಕವೇ ಹಾದು ಹೋಗುತ್ತಿರುವುದರಿಂದ ಇಡೀ ಧೂಳು ಮೆಣಸಿನಕಾಯಿ ಬೆಳೆ ಮೇಲೆ ಕೂರುತ್ತಿದೆ. ಇದು ರೈತ ಮಹಿಳೆ ಕೊಟ್ರಮ್ಮ ಅವರನ್ನು ಚಿಂತೆಗೀಡು ಮಾಡಿದೆ.

ಸತತವಾಗಿ ಒಂದು ತಿಂಗಳಿನಿಂದ ರೈತರ ಹೊಲದಿಂದಲೇ ಅನಧಿಕೃತವಾಗಿ ಮಣ್ಣು ಹೊಡೆಯಲಾಗುತ್ತಿದ್ದು, ಇಟ್ಟಿಗೆ ಭಟ್ಟಿಗೆ ಸಾಗಿಸಲಾಗುತ್ತಿದೆ. ಆದರೆ, ಈ ಮಣ್ಣು ಮಾಫಿಯಾದಿಂದ ರೈತ ಮಹಿಳೆ ಕೊಟ್ರಮ್ಮ ತಮ್ಮ 40 ಸಾವಿರ ವ್ಯಯ ಮಾಡಿದ ಮೆಣಸಿನಕಾಯಿ ಬೆಳೆ ಮಾತ್ರ ಹಾಳಾಗುತ್ತಿದೆಯಂತೆ. ಅನ್ನ ನೀಡುವ ಭೂಮಿ ತಾಯಿಯ ಸಮಾನ, ಮಣ್ಣು ಮಾರಿಕೊಂಡರೆ ಅವರ ಜಮೀನು ಹಾಳಾಗುತ್ತದೆ ಎನ್ನುತ್ತಾರೆ ಕೊಟ್ರಮ್ಮ.

ರೈತ ಮಹಿಳೆ ಕೊಟ್ರಮ್ಮ ಲಾರಿಗಳ ಧೂಳಿನಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಅಳಲು ತೋಡಿಕೊಂಡರು

ಕ್ರಿಮಿನಾಶಕ ಸಿಂಪಡಣೆ: ಈ ದೊಡ್ಡ ಲಾರಿಗಳ ಸಂಚಾರದಿಂದ ರಸ್ತೆಯಲ್ಲಿ ಧೂಳು ಏಳಲಿದ್ದು, ಇದರಿಂದಾಗಿ ನನ್ನ ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಹಾಳಾಗುತ್ತಿದೆ. ಈ ಹಿಂದೆ 10 ಸಾವಿರ ರೂಪಾಯಿ ವ್ಯಯಿಸಿ ಕ್ರಿಮಿನಾಶಕವನ್ನು ಎರಡು ಬಾರಿ ಸಿಂಪಡಣೆ ಮಾಡಿದ್ದೇನೆ. ಧೂಳು ಸಸಿಯ ಎಲೆ ಮೇಲೆ ಕೂರುವುದರಿಂದ ಫಸಲು ಕೈಗೆ ಬರ್ತಿಲ್ಲ ಸ್ವಾಮಿ ಎಂದು ಕೊಟ್ರಮ್ಮ ತಮ್ಮ ಅಳಲನ್ನು ತೋಡಿಕೊಂಡ್ರು.

'ಮಣ್ಣು ಹೊಡೆಯುವುದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಧಿಕ ಮಳೆ ಆಗಮಿಸಿ ರೈತನ‌ ಬದುಕು ಮೂರಾಬಟ್ಟೆಯಾಗಿರುವಾಗ ಮಣ್ಣು ಲಾರಿಗಳ ಧೂಳಿನಿಂದ ಅವರ ಜೀವನ ಬರ್ಬಾದ್ ಆಗಿದೆ' ಎಂದು ಸಾರಥಿ ಗ್ರಾಮದ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಾರೆ ಅರ್ಧ ಎಕರೆಯಲ್ಲಿ ಬದುಕು ಕಟ್ಟಿಕೊಂಡಿರುವ ರೈತ ಮಹಿಳೆ ಕೊಟ್ರಮ್ಮ ಕುಟುಂಬ ನಿರ್ವಹಣೆ ಮಾಡಲು ಆಗದೆ ಹೆಣಗಾಡುತ್ತಿದ್ದಾರೆ‌. ಇನ್ನು ಪತ್ನಿ ಚಂದ್ರಪ್ಪ, ಇಬ್ಬರು ಮಕ್ಕಳು ಕೂಲಿ ಕೆಲಸಕ್ಕೆ ಹೋಗುವುದರಿಂದ ಮನೆ ನಡೆಯುತ್ತೆ, ಇಂತಹ ಕಷ್ಟದ ದಿನಗಳಲ್ಲಿ ಜಮೀನಿನಲ್ಲಿ ಹಾಕಿದ ಮೆಣಸಿನಕಾಯಿ ಬೆಳೆ ಮಾತ್ರ ಈ ಧೂಳಿನಿಂದ ನೆಲಕಚ್ಚುವ ಹಂತ ತಲುಪಿದೆ.

ಓದಿ: ಹಾವೇರಿ: ಬಟನ್​ ರೋಜ್​​ ಬೆಳೆದು ತಿಂಗಳಿಗೆ ಲಕ್ಷಾಂತರ ರೂ ಲಾಭ ಗಳಿಸುತ್ತಿರುವ ಮಾದರಿ ರೈತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.