ETV Bharat / state

ಅನೈತಿಕ ಸಂಬಂಧ ಹಿನ್ನೆಲೆ: ಪ್ರಿಯಕರನಿಂದಲೇ ಮಹಿಳೆಯ ಬರ್ಬರ ಕೊಲೆ - ದಾವಣಗೆರೆ ಅಪರಾಧ ಸುದ್ದಿ

ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

woman murder
ಮಹಿಳೆಯ ಕೊಲೆ
author img

By

Published : Dec 30, 2020, 5:58 AM IST

ದಾವಣಗೆರೆ: ವಿವಾಹಿತ ಮಹಿಳೆ ತನ್ನ ಪ್ರಿಯಕರನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಆತನಿಂದಲೇ ಕೊಲೆಯಾಗಿರುವ ಶಂಕೆ ಹರಿಹರ ನಗರದ ಕುರಬರ ಕೇರಿ ಮದ್ದಮ್ಮ ದೇವಸ್ಥಾನದ ನರ್ತಕಿ ಬಾರ್‌ ಬಳಿ ನಡೆದಿದೆ.

ಹರಿಹರ ನಗರದ ನಿವಾಸಿ ರೇಖಾ (25) ಕೊಲೆಯಾದ ವಿವಾಹಿತ ಮಹಿಳೆಯಾಗಿದ್ದು, ಚೇತನ್ ಕೊಲೆ ಮಾಡಿದ ಪ್ರಿಯಕರನಾಗಿದ್ದಾನೆ. ರೇಖಾ ಮತ್ತು ಚೇತನ್ ಮಧ್ಯೆ ಅನೈತಿಕ ಸಂಬಂಧ ಇದ್ದು, ಇಬ್ಬರ ನಡುವೆ ಮಂಗಳವಾರ ಜಗಳ ನಡೆದಿದ್ದು, ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.

ಇದನ್ನೂ ಓದಿ: ಹರಿಹರ: ಅನೈತಿಕ ಸಂಬಂಧದ ಹಿನ್ನೆಲೆ, ವಿವಾಹಿತ ಮಹಿಳೆ ಕೊಲೆ

ಇನ್ನು ರೇಖಾಳಿಗೆ ನಾಗರಾಜ್‌ ಎಂಬ ವ್ಯಕ್ತಿಯೊಂದಿಗೆ ಮದುವೆಯಾಗಿ‌ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಜಗಳ ಆಗಿ ಚಾಕುವಿನಿಂದ ಚೇತನ್ ರೇಖಾಳನ್ನು ಕೊಲೆ ಮಾಡಿರಬಹುದೆಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಕೊಲೆ ಆರೋಪಿ ಚೇತನ್​​ನನ್ನು ಹರಿಹರ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.