ETV Bharat / state

ಜಿಎಂ ಸಿದ್ದೇಶ್ವರ್​ಗೆ ಬರುವ ಆದಾಯ ನಾಯಿ ಮೊಲೆ ಹಾಲು ಇದ್ದಂಗೆ: ಮಾಜಿ ಸಚಿವ ಮಲ್ಲಿಕಾರ್ಜುನ್

ದಾವಣಗೆರೆ ಕ್ಷೇತ್ರದ ಸಂಸದ ಜಿಎಂ ಸಿದ್ದೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್, ಜನರಿಗೆ ಬೇಕಾದ ಔಷಧೋಪಚಾರ ನೀಡುವಲ್ಲಿ ಅವರು ಸೋತಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಎದುರು ನಿಂತು ಜಿಲ್ಲೆಗೆ ಅವಶ್ಯಕವಾಗಿ ಬೇಕಾದ ಸವಲತ್ತು ತರುವ ತಾಕತ್ತನ್ನು ಸಹ ಕಳೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ‌.

Ex Minister SS Mallikarjun angry on MP GM Siddeshwar
ಮಾಜಿ ಸಚಿವ ಮಲ್ಲಿಕಾರ್ಜುನ್
author img

By

Published : May 19, 2021, 8:57 PM IST

ದಾವಣಗೆರೆ: ಸಂಸದ ಜಿಎಂ ಸಿದ್ದೇಶ್ವರ್​ಗೆ ದಿನಕ್ಕೆ ಒಂದು ಕೋಟಿ ಆದಾಯವಿದೆ. ಅವರಿಗೆ ಬರುವ ಆದಾಯ ನಾಯಿ ಮೊಲೆ ಹಾಲು ಇದ್ದಂಗೆ ಎಂದು ಮಾಜಿ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಟ್ಕಾದಲ್ಲಿಯೇ ಸಿದ್ದೇಶ್ವರ್​ಗೆ ಒಂದು ಕೋಟಿ ಆದಾಯ ಇದೆ. ಸಂಸದರಾದ ಮೇಲೆ ಎಷ್ಟು ಆಸ್ತಿ ಮಾಡಿದ್ದಾರೆ? ಅದಕ್ಕೂ ಮೊದಲು ಎಷ್ಟಿತ್ತು? ಈ ಬಗ್ಗೆ ನನ್ನ ಜೊತೆ ಬಹಿರಂಗ ಚರ್ಚಗೆ ಬರಲಿ ಎಂದು ಸವಾಲು ಹಾಕಿದರು.

ಜನರು ಆಕ್ಸಿಜನ್ ಇಲ್ಲದೇ ಸಾಯುತ್ತಿದ್ದಾರೆ. ಸಾವುಗಳ ಸರಣಿ ದಿನೇ ದಿನೆ ಹೆಚ್ಚಾಗುತ್ತಿದೆ. ನಾನು ಇತ್ತೀಚೆಗೆ ಹಳೇ ದಾವಣಗೆರೆ ಆಸ್ಪತ್ರೆಗೆ ಕೋವಿಡ್ ಕೇರ್ ಸೆಂಟರ್ ಮಾಡಿ ಎಂದು ಹೇಳಿದ್ದೆ. ನನಗೆ ಸರ್ಕಾರ ಆಕ್ಸಿಜನ್ ಕೊಟ್ಟರೆ 500 ಆಕ್ಸಿಜನ್ ಬೆಡ್ ಹೆಚ್ಚಿಸುತ್ತೇನೆ ಎಂದು ಮಲ್ಲಿಕಾರ್ಜುನ್​ ಸವಾಲು ಹಾಕಿದರು.

ಮಾಜಿ ಸಚಿವ ಮಲ್ಲಿಕಾರ್ಜುನ್

ಆದರೆ, ಇದೀಗ ನಮ್ಮ ಎರಡು ಮೆಡಿಕಲ್ ಕಾಲೇಜುಗಳಿಗೂ ಆಕ್ಸಿಜನ್ ಮಿತವಾಗಿ ಬಳಸುವಂತೆ ಸೂಚಿಸಿದ್ದಾರೆ. ಸೂಕ್ತ ಪ್ರಮಾಣದಲ್ಲಿ ರೆಮ್ಡೆಸಿವಿರ್​ ಇಲ್ಲ. ಅದಕ್ಕೂ ಬ್ರೇಕ್ ಹಾಕಿದ್ದಾರೆ. ಪ್ರಧಾನಿ ಮೋದಿ ಕಚೇರಿ ಬಾಗಿಲಿಗೆ ಹೋಗಿ ಕೇಳಿ ತರುವ ತಾಕತ್ತು ಇಲ್ಲಿನ ಸಂಸದರಿಗಿಲ್ಲ ಎಂದು ಲೇವಡಿ ಮಾಡಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.