ETV Bharat / state

ಬೆಂಗಳೂರಿನ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್​​​: ಪ್ರಮೋದ್ ಮುತಾಲಿಕ್ ಆರೋಪ

ಬೆಂಗಳೂರಿನ ಹಲವು ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್​​ ಸುಲಭವಾಗಿ ವಿದ್ಯಾರ್ಥಿಗಳ ಕೈಗೆ ಸಿಗುತ್ತಿದೆ. ರಾಜಕಾರಣಿಗಳಿಗೆ ಹಾಗೂ ಪೊಲೀಸರಿಗೆ ಈ ದಂಧೆ ಎಲ್ಲೆಲ್ಲಿ ನಡೆಯುತ್ತದೆ ಎಂದು ಗೊತ್ತಿದೆ. ಆದ್ರೂ ಸಾವಿರಾರು ಕೋಟಿ ವಹಿವಾಟು ಇರುವ ಹಿನ್ನೆಲೆಯಲ್ಲಿ ಅವರೂ ಶಾಮೀಲಾಗಿದ್ದಾರೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್
author img

By

Published : Sep 3, 2020, 5:17 PM IST

ದಾವಣಗೆರೆ: ಬೆಂಗಳೂರಿನ ಶಾಸಕರೊಬ್ಬರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಡ್ರ​ಗ್ಸ್​​ ಮಾರಾಟ ಆಗುತ್ತಿದೆ. ಬೆಂಗಳೂರಿನ ಏಳರಿಂದ ಏಂಟು ಕಾಲೇಜುಗಳಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿ‌ ಮಾತನಾಡಿದ ಅವರು, ಬೆಂಗಳೂರಿನ ಕೆಲ ಖಾಸಗಿ ಶಾಲಾ-ಕಾಲೇಜುಗಳು ಸೇರಿದಂತೆ ಹಲವೆಡೆ ಡ್ರಗ್​ ಸುಲಭವಾಗಿ ವಿದ್ಯಾರ್ಥಿಗಳ ಕೈಗೆ ಸಿಗುತ್ತಿದೆ. ರಾಜಕಾರಣಿಗಳು ಹಾಗೂ ಪೊಲೀಸರಿಗೆ ಈ ದಂಧೆ ಎಲ್ಲೆಲ್ಲಿ ನಡೆಯುತ್ತಿದೆ ಎಂಬ ಬಗ್ಗೆ ಗೊತ್ತಿದೆ. ಸಾವಿರಾರು ಕೋಟಿ ವಹಿವಾಟು ಇರುವ ಹಿನ್ನೆಲೆಯಲ್ಲಿ ಅವರೂ ಶಾಮೀಲಾಗಿದ್ದಾರೆ. ರಾಜ್ಯದ ಬೇಹುಗಾರಿಕಾ ಇಲಾಖೆಯು ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪ

ಈ ಹಿಂದೆ ಶಾಸಕರೊಬ್ಬರ ಪುತ್ರ ಡ್ರಗ್ಸ್​ ಸೇವಿಸಿ ಯುವಕನೋರ್ವನ ಮೇಲೆ ಹಲ್ಲೆ ಮಾಡಿದ್ದ. ಸಂಸದೆ ಶೋಭಾ ಕರಂದ್ಲಾಜೆ ಕೂಡ ಆರೋಪಿಗೆ ಮೆಡಿಕಲ್ ಟೆಸ್ಟ್ ಮಾಡಿಸಬೇಕೆಂದು ಘಟನೆ ನಡೆದಾಗ ಒತ್ತಾಯಿಸಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮ‌ ಸರ್ಕಾರವೇ ಇದೆ. ಪ್ರಕರಣದ ಮರುತನಿಖೆ ನಡೆಸಿ ಸತ್ಯಾಸತ್ಯತೆ ಹೊರತರಬೇಕು ಎಂದು ಮುತಾಲಿಕ್​ ಒತ್ತಾಯಿಸಿದರು.

2009 ರಲ್ಲಿ ಮಂಗಳೂರಿನಲ್ಲಿ ಪಬ್ ಮೇಲೆ ದಾಳಿ ನಡೆದಾಗಲೇ ಹೇಳಿದ್ದೆ. ಆದ್ರೆ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಡ್ರಗ್ಸ್​​​ ಮಾಫಿಯಾ ವಿರುದ್ಧ ಹೋರಾಟ ಮಾಡಿದ ಕಾರಣಕ್ಕೆ ಗೋವಾದಲ್ಲಿ ನನ್ನ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆರು ವರ್ಷವಾಗಿದೆ. ಎಲ್ಲಿದೆ ಕಾನೂನು ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಡ್ರಗ್ಸ್​​​ ಜಾಲದಲ್ಲಿ ಇರುವವರನ್ನು ಬಿಡಬಾರದು. ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಸನಾವುಲ್ಲಾ ಬಂಧಿಸದಿದ್ದರೆ ಹೋರಾಟದ ಎಚ್ಚರಿಕೆ: ಪಾಕಿಸ್ತಾನ ಪರ ಸಂದೇಶ ಹಾಕಿದ್ದ ಪೊಲೀಸ್ ಕಾನ್​​ಸ್ಟೇಬಲ್ ಸನಾವುಲ್ಲಾನನ್ನು ಇನ್ನೂ ಬಂಧಿಸಿಲ್ಲ. ಬೇಕಾದರೆ ಸನಾವುಲ್ಲಾ ಪಾಕ್​ಗೆ ಹೋಗಲಿ. ಆಗ ಗೊತ್ತಾಗುತ್ತೆ. ಎಸ್ಪಿ ಅವರು 24 ಗಂಟೆಯೊಳಗೆ ಸನಾವುಲ್ಲಾನನ್ನು ಬಂಧಿಸದಿದ್ದರೆ, ಶ್ರೀರಾಮ ಸೇನೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ದಾವಣಗೆರೆಗೆ ಬಂದರೂ ಈ ಬಗ್ಗೆ ಮಾತನಾಡಿಲ್ಲ.‌ ಇವರೆಲ್ಲರಿಗಿಂತ ಸನಾವುಲ್ಲಾ ಪವರ್ ಫುಲ್ ಇದ್ದಾನಾ ಎಂದು ಮುತಾಲಿಕ್​ ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.