ದಾವಣಗೆರೆ: ಸಂಕ್ರಾತಿ ಹಬ್ಬದ ಪ್ರಯುಕ್ತ ಗೋವಾ ರಾಜ್ಯಕ್ಕೆ ಪ್ರವಾಸಕ್ಕೆ ತೆರಳಿ ದಾವಣಗೆರೆ ಮೂಲದ 11 ಜನ ಸಾವನಪ್ಪಿದ್ದಾರೆ. ಇವರೆಲ್ಲರೂ ಬಾಲ್ಯದ ಗೆಳತಿಯರು ಎಂದು ತಿಳಿದು ಬಂದಿದೆ.
ಧಾರವಾಡದ ಹೊರವಲಯದ ಇಟಿಗಟ್ಟಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 11 ಮಂದಿ ಕೊನೆಯುಸಿರೆಳೆದಿದ್ದಾರೆ. ಸಾವಿಗೀಡಾಗಿದವರು ದಾವಣಗೆರೆಯ ವಿದ್ಯಾನಗರ, ಎಂಸಿಸಿ ಎ ಬ್ಲಾಕ್ ಹಾಗು ಎಂಸಿಸಿ ಬಿ ಬ್ಲಾಕ್ ಬಡಾವಣೆಯ ನಿವಾಸಿಗಳೆಂದು ತಿಳಿದು ಬಂದಿದೆ.
ಮೃತಪಟ್ಟವರನ್ನು ಪೂರ್ಣಿಮಾ, ಪ್ರವೀಣಾ, ಆಶಾ ಜಗದೀಶ್, ಮಾನಸಿ, ಪರಂಜ್ಯೋತಿ, ರಾಜೇಶ್ವರಿ ಶಿವಕುಮಾರ, ಶಕುಂತಲಾ, ಉಷಾ, ವೇದಾ, ನಿರ್ಮಲಾ, ಮಂಜುಳಾ ನಿಲೇಶ, ರಜನಿ ಶ್ರೀನಿವಾಸ, ಪ್ರೀತಿ ರವಿಕುಮಾರ ಎಂದು ಗುರುತಿಸಲಾಗಿದೆ. ಚಾಲಕನ ಹೆಸರು ತಿಳಿದು ಬಂದಿಲ್ಲ.
16 ಮಹಿಳೆಯರು ಲೇಡಿಸ್ ಕ್ಲಬ್ನಿಂದ ಸಂತೋಷ ಕೂಟಕ್ಕಾಗಿ ಗೋವಾಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ದಾವಣಗೆರೆಯಿಂದ ನಸುಕಿನ ವೇಳೆ ಹೊರಟಿದ್ದ ಇವರು ಧಾರವಾಡದ ಪರಿಚಯಸ್ಥರ ಮನೆಗೆ ಉಪಹಾರಕ್ಕೆಂದು ತೆರಳುವವರಿದ್ದರು ಎನ್ನಲಾಗಿದೆ.
ಸಾವನ್ನಪ್ಪಿದವರಲ್ಲಿ ವೀಣಾ ಪ್ರಕಾಶ್ ಹಾಗು ಪ್ರೀತಿ ರವಿಕುಮಾರ್ ವೈದ್ಯರಾಗಿದ್ದಾರೆ. ಮೃತರೆಲ್ಲರೂ ಸೆಂಟ್ ಪೌಲ್ಸ್ ಶಾಲೆಯಲ್ಲಿ ಓದಿದವರಾಗಿದ್ದು, ಇವರೆಲ್ಲರೂ ಬಾಲ್ಯ ಸ್ನೇಹಿತೆಯರಾಗಿದ್ದಾರೆ.