ದಾವಣಗೆರೆ: ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ ಮನೆ ಮುಂದೆ ಕಟ್ಟಿದ್ದ ಮೂರು ಕುರಿಗಳು ಮೃತಪಟ್ಟಿರುವ ಘಟನೆ ಶ್ರೀರಾಮ ನಗರದ ಎಸ್.ಓ.ಜಿ ಕಾಲೋನಿಯಲ್ಲಿ ನಡೆದಿದೆ.
ಅಂಜನಪ್ಪ ಎಂಬುವರಿಗೆ ಸೇರಿದ ಕುರಿಗಳು ಎನ್ನಲಾಗಿದ್ದು, ದುರ್ಗಾಂಬಿಕ ಜಾತ್ರೆಯ ಪ್ರಯುಕ್ತ ಇವುಗಳನ್ನು ತರಲಾಗಿತ್ತು. ಏಕಕಾಲಕ್ಕೆ ಆರು ಬೀದಿನಾಯಿಗಳು, ಕುರಿಗಳ ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ಕಚ್ಚಿವೆ. ಇದರಿಂದ ಕುರಿಗಳು ಅಸುನೀಗಿವೆ.
ಬೀದಿ ನಾಯಿಗಳ ಕಾಟಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.