ETV Bharat / state

ಅನಾಥ ಶವ ಎಂದು ಪೊಲೀಸರಿಂದ ಸಂಸ್ಕಾರ.. 20 ದಿನದ ಬಳಿಕ ದೂರು ಬಂದಾಗ ಸಮಾಧಿ ಅಗೆದ ಖಾಕಿ - DAvanagere crime news

ಕೊಲೆಯಾಗಿದ್ದ ಶವವನ್ನು ವಾರಸುದಾರರಿಲ್ಲ ಎಂದು ತಿಳಿಸಿದ್ದ ಪೊಲೀಸರು ನದಿ ತೀರದಲ್ಲಿ ಶವಸಂಸ್ಕಾರ ನೆರವೇರಿಸಿದ್ದರು. ಆದರೆ, ಮೃತನ ತಂದೆ ಈ ಕುರಿತು ದೂರು ನೀಡುತ್ತಿದ್ದಂತೆ ಹೂತು ಹಾಕಿದ್ದ ಶವವನ್ನು ಹೊರತೆಗೆದು ಮತ್ತೆ ತನಿಖೆ ಮುಂದುವರೆಸಿದ್ದಾರೆ.

ಅನಾಥ ಶವವೆಂದು ಪೊಲೀಸರಿಂದ ಸಂಸ್ಕಾರ
ಅನಾಥ ಶವವೆಂದು ಪೊಲೀಸರಿಂದ ಸಂಸ್ಕಾರ
author img

By

Published : Jun 5, 2021, 9:04 PM IST

ದಾವಣಗೆರೆ: ಅನಾಥ ಶವ ಎಂದು ಅಂತ್ಯಸಂಸ್ಕಾತರ ನೆರವೇರಿಸಿದ್ದ ಪೊಲೀಸರು, ಮತ್ತದೆ ಶವ ಹೊರತೆಗೆದು ತನಿಖೆ ನಡೆಸಬೇಕಾದ ಪ್ರಸಂಗ ನಡೆದಿದೆ. ತುಂಗಭದ್ರಾ ನದಿ ದಡದಲ್ಲಿ ದೊರೆತ ಶವವನ್ನು ಪೋಲಿಸರು ಅನಾಥ ಶವ ಎಂದು ಪರಿಗಣಿಸಿ ಶವಸಂಸ್ಕಾರ ಮಾಡಿ ಮುಗಿಸಿದ್ರು, ಆದರೆ ಸಾವನ್ನಪ್ಪಿದವನ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣಕ್ಕೆ ಹೊಸ ತಿರುವು ಪಡೆದಿದ್ದು, ಶವ ಹೂತು ಹಾಕಿ 20 ದಿನಗಳ ಬಳಿಕ ಶವವನ್ನು ಹೊರ ತೆಗೆದು, ತನಿಖೆಗೆ ಮುಂದಾಗಿದ್ದಾರೆ‌. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ.

ಏನಿದು ಪ್ರಕರಣ...?

ಹೊನ್ನಾಳಿ ತಾಲೂಕಿನ ಬುಳ್ಳಾಪುರ ಗ್ರಾಮದ ನಿವಾಸಿ ತಿಪ್ಪೇಸ್ವಾಮಿ (30) ಸಾವನಪ್ಪಿದ್ದು, ಇವರ ಶವ ತುಂಗಭದ್ರಾ ನದಿ ತೀರದಲ್ಲಿ ಪತ್ತೆಯಾಗಿತ್ತು, ಆದ್ರೆ ಪೋಲಿಸರು ಅನಾಥ ಶವ ಎಂದು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಕಳೆದ ಮೇ 31ರಂದು ಮೃತ ತಿಪ್ಪೇಸ್ವಾಮಿ ತಂದೆ ಶಿವಮೂರ್ತಪ್ಪನವರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬೆನ್ನಲ್ಲೇ ಪೊಲೀಸರು ಐವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಿಪ್ಪೇಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬುಳ್ಳಾಪುರ ಗ್ರಾಮದ ‌ನಿವಾಸಿಗಳಾದ ಪ್ರವೀಣ್, ಮಂಜುನಾಥ್, ನಾಗರಾಜ್, ರಾಜ, ಸಾಸ್ವೆ ಹಳ್ಳಿಯ ನಾಗರಾಜ್ ಎಂಬ ಐವರನ್ನು ಪೋಲಿಸರು ಬಂಧಿಸಿ ತನಿಖೆ ನಡೆಸುತ್ತಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ತನಿಖೆ ಬಳಿಕವೇ ತಿಳಿದು ಬರಲಿದೆ.

ತನಿಖೆಗಾಗಿ ಶವ ಹೊರ ತೆಗೆದ ಪೋಲಿಸರು

ಹೆಚ್ಚಿನ ತನಿಖೆ ನಡೆಸುವ ಸಲುವಾಗಿ ಅನಾಥ ಶವ ಎಂದು ಶವಸಂಸ್ಕಾರ ಮಾಡಿದ್ದ ಪೋಲಿಸರು 20 ದಿನಗಳ ಬಳಿಕ ತಹಶೀಲ್ದಾರ್ ಬಸವನಗೌಡ ಕೊಟ್ಟೂರು ಅವರ ನೇತೃತ್ವದಲ್ಲಿ ಶವ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.