ETV Bharat / state

ದಾವಣಗೆರೆ: ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲವೆಂದು ಸಚಿವ ಭೈರತಿ ಬಸವರಾಜ್​ಗೆ ಕೈ ಸದಸ್ಯರ ಘೇರಾವ್​ - ದಾವಣಗೆರೆ ಮಹಾನಗರ ಪಾಲಿಕೆ

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್​ ಸದಸ್ಯರು ಸಚಿವ ಭೈರತಿ ಬಸವರಾಜ್ ಅವ​ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

dsdd
ಸಚಿವ ಭೈರತಿ ಬಸವರಾಜ್​ಗೆ ಕೈ ಸದಸ್ಯರಿಂದ ತರಾಟೆ
author img

By

Published : May 26, 2020, 4:54 PM IST

ದಾವಣಗೆರೆ: ಪಾಲಿಕೆಯಲ್ಲಿ ಅಭಿವೃದ್ಧಿ ಸಭೆ ಹಾಗೂ ಕಂಪ್ಯೂಟರ್, ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಹಿನ್ನೆಲೆ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್​ಗೆ ಘೇರಾವ್ ಹಾಕಿದ ಘಟನೆ ನಡೆದಿದೆ.

ಸಚಿವ ಭೈರತಿ ಬಸವರಾಜ್​ಗೆ ಕೈ ಸದಸ್ಯರಿಂದ ಘೇರಾವ್​

ಪಾಲಿಕೆಗೆ ಸಚಿವರು ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತಮಗೆ ಆಹ್ವಾನ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥ ಸಭೆಯನ್ನು ಯಾಕೆ ನಡೆಸುತ್ತೀರಾ? ಪ್ರತಿಪಕ್ಷದವರಿಗೆ ಕನಿಷ್ಠ ಆಹ್ವಾನ ನೀಡದೇ ಕದ್ದುಮುಚ್ಚಿ ಯಾಕೆ ಸಭೆ ನಡೆಸಿದಿರಿ ಎಂದು ಪ್ರಶ್ನಿಸಿದರು. ಸಂಸದ ಜಿ. ಎಂ. ಸಿದ್ದೇಶ್ವರ್, ಪಾಲಿಕೆಯ ಮೇಯರ್ ಅಜಯ್ ಕುಮಾರ್ ಎದುರೇ ಕಾಂಗ್ರೆಸ್​ ಸದಸ್ಯರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಯಕ್ರಮದಲ್ಲಿ ಸಚಿವ ಭೈರತಿ ಬಸವರಾಜ್, ಶಾಸಕ ಶಾಮನೂರು ಶಿವಶಂಕರಪ್ಪ ಸಾಮಾಜಿಕ ಅಂತರ ಪಾಲಿಸಲಿಲ್ಲ. ನೂರಾರು ಜನರ ನಡುವೆ ಕೆಲ ಫಲಾನುಭವಿಗಳಿಗೆ ಕಂಪ್ಯೂಟರ್, ಹೊಲಿಗೆ ಯಂತ್ರ ವಿತರಿಸಲಾಯಿತು.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.