ದಾವಣಗೆರೆ: ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಪಾಲಿಕೆ ಸದಸ್ಯರು ಹಾಗೂ ಎಂಎಲ್ಸಿಗಳಿಗೆ ಮಾರ್ಗದರ್ಶನ ನೀಡಲಾಯಿತು. ಬಳಿಕ ಕಾರ್ ಮೂಲಕ ಪಾಲಿಕೆಗೆ ಮತದಾರರು ತೆರಳಿದರು.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಬಿಜೆಪಿ ಪಾಲಿಕೆ ಸದಸ್ಯರಿಗೆ ಹಾಗೂ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಸೇರಿದಂತೆ ಎಂಎಲ್ಸಿಗಳಿಗೆ ಮೇಯರ್ ಚುನಾವಣೆ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಇನ್ನೂ ಬಿಜೆಪಿಯಿಂದ ಪಾಲಿಕೆ ಸದಸ್ಯ ಬಿ.ಜಿ. ಅಜಯ್ ಕುಮಾರ್ ಕಾಂಗ್ರೆಸ್ನಿಂದ ದೇವರಮನೆ ಶಿವಕುಮಾರ್ ಮೇಯರ್ ಸ್ಥಾನ ಅಭ್ಯರ್ಥಿಗಳಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮೇಯರ್ ಹಾಗೂ ಉಪಮೇಯರ್ ಆಯ್ಕೆ ನಡೆಯಲಿದೆ.
ನಾವು ಯಾರೂ ನಾಪತ್ತೆಯಾಗುವಂತೆ ಮಾಡಿಲ್ಲ:
ನಾವು ಯಾರನ್ನೂ ನಾಪತ್ತೆಯಾಗುವಂತೆ ಮಾಡಿಲ್ಲ ಎಂದು ಪಾಲಿಕೆಯ ಬಿಜೆಪಿ ಸದಸ್ಯ ಬಿ. ಜೆ. ಅಜಯ್ ಕುಮಾರ್ ಹೇಳಿದ್ದಾರೆ. ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ನ ಇಬ್ಬರು ಪಾಲಿಕೆ ಸದಸ್ಯರು ಮತ ಹಾಕಲು ಬರುವುದಿಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ. ಬಿಜೆಪಿಯ 8 ಎಂಎಲ್ಸಿಗಳಿಗೆ ಮತದಾನದ ಹಕ್ಕು ನೀಡಲಾಗಿದೆ. ಇಲ್ಲಿಯ ವಿಳಾಸ ನೀಡಿದ್ದಾರೆ. ಬಿಜೆಪಿಯ 17, ನಾಲ್ವರು ಪಕ್ಷೇತರರು ಸೇರಿ 22 ಜನ ಜೊತೆಗಿದ್ದೇವೆ. ಸಂಸದರು, ಶಾಸಕರು, ಎಂಎಲ್ಸಿಗಳು ಮತ ಚಲಾಯಿಸಲಿದ್ದಾರೆ. ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾವು ರೆಸಾರ್ಟ್ ರಾಜಕಾರಣ ಮಾಡಿಲ್ಲ. ದೇವರ ಭಕ್ತಿ ಇದ್ದ ಕಾರಣ ದೇಗುಲಕ್ಕೆ ಪಾಲಿಕೆ ಸದಸ್ಯರು ಹೋಗಿದ್ದರು ಎಂದು ಟೂರ್ ಪಾಲಿಟಿಕ್ಸ್ ಅನ್ನು ಸಮರ್ಥಿಸಿಕೊಂಡರು.