ದಾವಣಗೆರೆ: ಕೊರೊನಾ ಹರಡುವುದನ್ನು ತಡೆಯಲು ಸರ್ಕಾರ ಇಂದು ಸಂಡೇ ಲಾಕ್ಡೌನ್ ಘೋಷಿಸಿದೆ. ಆದರೆ ಮಹಾನಗರ ಪಾಲಿಕೆಯಲ್ಲಿ ಮೇಯರ್ ಅಜಯ್ ಕುಮಾರ್ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.
ಮೇಯರ್ ಆಪ್ತರೆಲ್ಲರೂ ಸೇರಿ ಜನ್ಮದಿನ ಆಚರಿಸಿದ್ದಾರೆ. ಅಜಯ್ ಕುಮಾರ್ ಅವರಿಗೆ ಶುಭಾಶಯ ತಿಳಿಸಲು ಅಭಿಮಾನಿಗಳು, ಪಾಲಿಕೆಯ ಬಿಜೆಪಿ ಸದಸ್ಯರು ಬಂದಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಜೊತೆಗೆ ಮಾಸ್ಕ್ ಧರಿಸಿರಲಿಲ್ಲ. ಕೊರೊನಾ ಸೋಂಕು ಹರಡುವ ಭೀತಿಯ ಈ ವೇಳೆ ಜನ್ಮದಿನದ ಆಚರಣೆ ಬೇಕಿತ್ತಾ ಎಂಬುದು ವಿಪಕ್ಷ ಸದಸ್ಯರ ಪ್ರಶ್ನೆಯಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೇಯರ್ ಅಜಯ್ ಕುಮಾರ್, ಸ್ನೇಹಿತರು ಈ ಕಾರ್ಯಕ್ರಮ ಏರ್ಪಡಿಸಿದ್ದರು. ಹತ್ತು ನಿಮಿಷದಲ್ಲಿ ಎಲ್ಲವೂ ಮುಗಿದಿದೆ. ಕೋವಿಡ್ನ ಯಾವ ನಿಬಂಧನೆಯನ್ನು ಉಲ್ಲಂಘಿಸಿಲ್ಲ ಎಂದಿದ್ದಾರೆ.