ದಾವಣಗೆರೆ: ಯುಪಿಎಸ್ಸಿ ಫಲಿತಾಂಶದಲ್ಲಿ 31 ನೇ ರ‍್ಯಾಂಕ್ ಪಡೆದ ಬೆಣ್ಣೆನಗರಿ ದಾವಣಗೆರೆಯ ಅವಿನಾಶ್ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮೊದಲನೇಯ ಪ್ರಯತ್ನದಲ್ಲೇ ದೇಶದಲ್ಲೇ 31 ರ‍್ಯಾಂಕ್ ಪಡೆದಿರುವ ಅವಿನಾಶ್ ರವರು ಮುಕ್ತವಾಗಿ ತಮ್ಮ ಪರೀಕ್ಷೆಗೆ ತಯಾರಿ ನಡೆಸಿದ ಬಗ್ಗೆ ಮಾಹಿತಿ ನೀಡಿದರು. ಅವರು ಐಎಫ್ಎಸ್ ಅಧಿಕಾರಿ ಆಗುವ ಇಂಗಿತವನ್ನೂ ಹೊರಹಾಕಿದರು.
ಟಾಪ್ 100 ರಲ್ಲಿ ನಮ್ಮ ಕರ್ನಾಟಕದವರು ಇಬ್ಬರು ಮಾತ್ರ. ಅದು ಬಹಳ ಕಮ್ಮಿಯಾಗಿದೆ, ಇದು ಹೆಚ್ಚಾಗಬೇಕಾಗಿದೆ. ಹೆಚ್ಚು ಹೆಚ್ಚು ಜನ ಕರ್ನಾಟಕದವರು ಈ ಪರೀಕ್ಷೆ ಬರೆಯಬೇಕಾಗಿದೆ. ಅದಕ್ಕೆ ನಾನು ಸಹಾಯ ಮಾಡಲು ಸಿದ್ಧ ಎಂದರು. ನಾನು ಕಷ್ಟಪಟ್ಟು ಸ್ಕಾಲರ್ಶಿಪ್ ಗಳನ್ನು ಪಡೆದು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದೆ. ಕೇವಲ ಎಸ್ಪಿ, ಡಿಸಿಯನ್ನು ನೋಡಿ ಹೀಗಾಗ್ಬೇಕೆಂದು ಕನಸು ಕಾಣ್ಬೇಡಿ, ಗುರಿ ಇಟ್ಟು ಓದಿದರೆ ಖಂಡಿತ ಯಶಸ್ಸು ಸಿಗುತ್ತೆ ಎಂದು ಸಲಹೆ ನೀಡಿದರು.
ಈಗಾಗಲೇ ನಾನು ಬೆಂಗಳೂರು, ದೆಹಲಿಯಲ್ಲಿ ಕೋಚಿಂಗ್ ಸೆಂಟರ್ ತೆರಳಿ ಕೋಚಿಂಗ್ ಪಡೆದಿದ್ದೇನೆ. ಇದೀಗ ರ‍್ಯಾಂಕ್ ಬಂದಿದೆ, ನಾನು ಐಎಎಸ್, ಐಪಿಎಸ್ ಬದಲಿಗೆ ಐಎಫ್ಎಸ್ ಪಡೆದು ದೇಶಕ್ಕೆ ಸೇವೆ ಸಲ್ಲಿಸಲು ಸಿದ್ಧವಾಗಿದ್ದೇನೆ ಎಂದರು.
ಮಾರ್ಗದರ್ಶನ ಮಾಡುವೆ: ಯಾರಾದರೂ ಬಯಸಿದ್ರೇ ನಾನು ನಮ್ಮ ಜಿಲ್ಲೆ ದಾವಣಗೆರೆ, ಕರ್ನಾಟಕ ರಾಜ್ಯದವರಿಗೆ ಯುಪಿಎಸ್ಸಿ ಪರೀಕ್ಷೆ ಬಗ್ಗೆ ಮಾರ್ಗದರ್ಶನ ಮಾಡುವೆ ಎಂದು ಇದೇ ವೇಳೆ ತಿಳಿಸಿದರು.
ನ್ಯಾಷನಲ್ ಲಾ ಕಾಲೇಜಿನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದೆ. ಕೊರೊನಾ ವೇಳೆಯಲ್ಲಿ ಸರ್ಕಾರಿ ಅಧಿಕಾರಿಗಳು ಮಾಡ್ತಿದ್ದ ಸೇವೆಯನ್ನು ನೋಡಿ ಈ ಲೋಕಸೇವಾ ಪರೀಕ್ಷೆಯನ್ನು ಆಯ್ಕೆ ಮಾಡಿಕೊಂಡಿದ್ದೆ. ಲಾ ಗ್ರ್ಯಾಜ್ಯೂಷೇನ್ ಬಳಿಕ 2021 ರಲ್ಲಿ ಓದುವುದನ್ನು ಆರಂಭಿಸಿದ್ದೆ. ಕೊರೊನಾ ಹಾಗೂ ಉಕ್ರೇನ್ ಘಟನೆ ವೇಳೆ ವಿದೇಶಿ ನಾಗರಿಕರ ಸೇವಾ ಅಡಿ ಅಧಿಕಾರಿಗಳು ಮಾಡಿದ ಕೆಲಸ ನೋಡಿ ಅವರಿಂದ ಪ್ರೇರೇಪಿತನಾಗಿ ನಾನು ಕೂಡ ಐಎಫ್ಎಸ್ ಆಯ್ಕೆಮಾಡಿಕೊಂಡಿದ್ದೇನೆ ಎಂದು ವಿವರಿಸಿದರು.
ಇದನ್ನೂ ಓದಿ: ಜೀನ್ಸ್ ಪ್ಯಾಂಟ್ನಿಂದ ನೇಣುಬಿಗಿದ ಸ್ಥಿತಿಯಲ್ಲಿ ವೈದ್ಯ ಸಾವು: ಕುಣಿಕೆ ಸುತ್ತ ಅನುಮಾನದ ಹುತ್ತ