ETV Bharat / state

6 ತಿಂಗಳಲ್ಲಿ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣ ಭೇದಿಸಿದ ದಾವಣಗೆರೆ ಪೊಲೀಸರು - ಕಳ್ಳತನ ಪ್ರಕರಣಗಳು

ಕಳೆದ ಆರು ತಿಂಗಳಲ್ಲಿ ದಾವಣಗೆರೆ ಪೊಲೀಸರು ಒಟ್ಟು ಐವತ್ತೈದು ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

davangere police
ವಾರಸುದಾರರಿಗೆ ಕಳೆದುಕೊಂಡ ವಸ್ತುಗಳನ್ನು ಹಸ್ತಾಂತರ ಮಾಡಿದ ಪೊಲೀಸರು
author img

By

Published : Jul 23, 2023, 8:43 AM IST

ವಾರಸುದಾರರಿಗೆ ಕಳೆದುಕೊಂಡ ವಸ್ತುಗಳನ್ನು ಹಸ್ತಾಂತರ ಮಾಡಿದ ಪೊಲೀಸರು

ದಾವಣಗೆರೆ: ನಗರದ ಉಪವಿಭಾಗದ ವಿವಿಧ ಠಾಣೆಗಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳುವಾಗಿದ್ದ ಹಣ, ಬಂಗಾರ, ಬೆಳ್ಳಿ ಹಾಗು ವಾಹನಗಳು ಸೇರಿದಂತೆ ಅನೇಕ ವಸ್ತುಗಳನ್ನು ವಾರಸುದಾರರಿಗೆ ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ವಸ್ತುಗಳನ್ನು ಮರಳಿ ಪಡೆದವರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.

ಜಿಲ್ಲೆಯಾದ್ಯಂತ ಕಳ್ಳತನ ಪ್ರಕರಣಗಳು ಹೆಚ್ಚು ವರದಿಯಾಗಿದ್ದವು. ಇದರಿಂದಾಗಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಕೂಡಾ ರೋಸಿ ಹೋಗಿದ್ದರು. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಸ್​ಪಿ ಡಾ. ಅರುಣ್ ಕೆ ಹಾಗೂ ಹಿಂದಿನ ಎಸ್​ಪಿ ಸಿಬಿ ರಿಷ್ಯಂತ್ ಅವರ ಅವಧಿಯಲ್ಲಿ ಸಾಕಷ್ಟು ಮನೆಗಳ್ಳತನ, ಚಿನ್ನ, ಬೆಳ್ಳಿ, ನಗದು ಸೇರಿದಂತೆ ದ್ವಿಚಕ್ರ ವಾಹನ, ಕಾರು, ಆಟೋ ಹೀಗೆ ಸಾಕಷ್ಟು ವಸ್ತುಗಳು ಕಳ್ಳತನವಾಗಿದ್ದವು. ಈ ಎಲ್ಲ ಪ್ರಕರಣಗಳನ್ನು ಭೇದಿಸಬೇಕೆಂದು ತಂಡ ಕಟ್ಟಿದ ಎಸ್​ಪಿ ಅರುಣ್ ಅವರು ಕಳ್ಳರನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಆರು ತಿಂಗಳಲ್ಲಿ 55ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸಿರುವ ಕೀರ್ತಿ ದಾವಣಗೆರೆ ಪೊಲೀಸರಿಗೆ ಸಲ್ಲುತ್ತದೆ.

ಕಳೆದುಕೊಂಡಿದ್ದ ಬಂಗಾರ, ಬೆಳ್ಳಿ ವಸ್ತುಗಳು, ವಾಹನಗಳನ್ನು ಆಯಾ ವಾರಸುದಾರರಿಗೆ ಶನಿವಾರ ಎಎಸ್​ಪಿ ರಾಮಗೊಂಡನ ಬಿ.ಬಸರಗಿ ಅವರ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು. ಮರಳಿ ವಸ್ತುಗಳು ಸಿಕ್ಕ ತಕ್ಷಣ ಕೆಲವರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.

ಎಎಸ್​ಪಿ ರಾಮಗೊಂಡನ ಬಿ ಬಸರಗಿ ಮಾತನಾಡಿ, "ದಾವಣಗೆರೆ ‌ನಗರ ಉಪವಿಭಾಗದ ವಿವಿಧ ಠಾಣೆಗಳಲ್ಲಿ ನಡೆದ ಒಟ್ಟು 55 ಪ್ರಕಣಗಳನ್ನು ಬಗೆಹರಿಸಲಾಗಿದೆ. 42 ದ್ವಿಚಕ್ರ ವಾಹನಗಳು, ಒಂದು ಆಟೋ, ಎರಡು ಕಾರು ವಶಕ್ಕೆ ಪಡೆದು ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು. ಇದಲ್ಲದೆ, 22 ಲಕ್ಷದ 54 ಸಾವಿರ ಹಣ ಕೂಡ ಕಳುವಾಗಿತ್ತು. ಆ ಹಣ ಕೂಡ ರೈತನಿಗೆ ಸಿಕ್ಕಿದೆ. ವಿವಿಧ ಮನೆಗಳ್ಳತನ ಪ್ರಕರಣಗಳಲ್ಲಿ 940 ಗ್ರಾಂ ಚಿನ್ನ, 600 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದು ಮಾಲೀಕರಿಗೆ ನೀಡಲಾಯಿತು" ಎಂದರು.

ಬಳಿಕ ದೂರು ನೀಡಿದ್ದ ಆಂಜನೇಯ ಎಂಬವರು ಮಾತನಾಡಿ, "ಮನೆ ಕಟ್ಟುವ ವೇಳೆ 7 ತೊಲ ಬಂಗಾರ ಮತ್ತು ನಲವತ್ತು ಸಾವಿರ ರೂ. ಹಣ ಕಳ್ಳತನ ಆಗಿತ್ತು, ದೂರು ನೀಡಿದ್ದೆ. ಪೊಲೀಸರು ಅದನ್ನು ಮರಳಿ ಸಿಗುವಂತೆ ಮಾಡಿದ್ದಾರೆ. ಭಗವಂತ ಅವರನ್ನು ಚೆನ್ನಾಗಿಟ್ಟಿರಲಿ" ಎಂದು ಹಾರೈಸಿದರು.

ಇದನ್ನೂ ಓದಿ : Bengaluru crime: ಟೊಮೆಟೋ ತುಂಬಿದ ಗೂಡ್ಸ್ ವಾಹನ‌ ಕದ್ದೊಯ್ದಿದ್ದ ದಂಪತಿ ಬಂಧನ

55 ಪ್ರಕರಣಗಳಲ್ಲಿ ಗಂಭೀರವಾದ ಪ್ರಕರಣ ಅಂದ್ರೆ, ರೈತ ದೇವರಾಜ್ ಅವರಿಗೆ ಸೇರಿದ 22 ಲಕ್ಷ ರೂ. ಕಳವು ಕೇಸ್​. ದೇವರಾಜ್ ಅವರು ಅಡಿಕೆ ಮಾರಾಟ ಮಾಡಿ ಅದರಿಂದ ಬಂದ 22 ಲಕ್ಷ 54 ಸಾವಿರ ಹಣ ತೆಗೆದುಕೊಂಡು ಮನೆಗೆ ಬರುತ್ತಿರುವಾಗ ಹೊಂಚು ಹಾಕಿ ಕುಳಿತಿದ್ದ ಖದೀಮರು ಹಣವನ್ನು ಲಪಟಾಯಿಸಿದ್ದರು. ಇದೀಗ ಕಳ್ಳರನ್ನು ಬಂಧಿಸಿರುವ ವಿದ್ಯಾನಗರ ಪೊಲೀಸರು 22 ಲಕ್ಷದ 54 ಸಾವಿರ ಹಣವನ್ನು ರೈತನಿಗೆ ಹಿಂದಿರುಗಿಸಿದ್ದಾರೆ. ಪೊಲೀಸರ ಕಾರ್ಯವೈಖರಿಗೆ ರೈತ ಕೃತಜ್ಞತೆ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.