ETV Bharat / state

ಬೀದಿ ನಾಯಿಗಳ ಹಾವಳಿ: ಶ್ವಾನಗಳ ಸಂಖ್ಯೆ ಇಳಿಸಲು ಪಾಲಿಕೆ ಕ್ರಮ - Davanagere district news

ದಾವಣಗೆರೆ ನಗರದಲ್ಲಿ ಸುಮಾರು 15 ಸಾವಿರ ನಾಯಿಗಳಿದ್ದು, ಕಳೆದ ವರ್ಷ 45 ವಾರ್ಡ್​​​ಗಳಲ್ಲಿ ಒಟ್ಟು 2,500 ನಾಯಿಗಳಿಗೆ ಸಂತಾನಹರಣ ಮಾಡಲಾಗಿದೆ. ಇನ್ನೂ ಅದರ ಕಾರ್ಯ ಮುಂದುವರೆದಿದೆ.

Davanagere metropolitan corporation action against to reduce the number of dogs
ಶ್ವಾನಗಳ ಸಂಖ್ಯೆ ಇಳಿಸಲು ಪಾಲಿಕೆ ಕ್ರಮ
author img

By

Published : Feb 5, 2021, 10:52 PM IST

ದಾವಣಗೆರೆ: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾದ ಕಾರಣ ಸಂತಾನಹರಣಕ್ಕೆ ಇಲ್ಲಿನ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು, ನಾಯಿ ದಾಳಿಯಿಂದ ಜನರಿಗೆ ತೊಂದರೆಯಾಗದಂತೆ ನಾಯಿಗೆ ಲಸಿಕೆ ನೀಡಲಾಗುತ್ತಿದೆ.

ನಗರದ ಯಾವ ಬೀದಿಗೂ ಹೋದರೂ ನಾಯಿಗಳು ಕಾಣ ಸಿಗುತ್ತವೆ. ಇನ್ನು ಮಾಂಸದಂಗಡಿಗಳ ಬಳಿ ಅವುಗಳದ್ದೇ ಕಾರುಬಾರು. ಹೀಗಾಗಿ, ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡುವ ಮೂಲಕ ಅವುಗಳ ಸಂತತಿ ಕಡಿವಾಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ನಗರದಲ್ಲಿ ಸುಮಾರು 15 ಸಾವಿರ ನಾಯಿಗಳಿದ್ದು, ಅದರಲ್ಲಿ ಕೆಲ ನಾಯಿಗಳಿಗೆ ಸಂತಾನಹರಣ ಮಾಡಲಾಗಿದೆ. ಕಳೆದ ವರ್ಷ 45 ವಾರ್ಡ್​​​ಗಳಲ್ಲಿ ಒಟ್ಟು 2,500 ನಾಯಿಗಳಿಗೆ ಸಂತಾನಹರಣ ಮಾಡಲಾಗಿದೆ. ಅದರ ಕಾರ್ಯ ಇನ್ನೂ ಮುಂದುವರೆದಿದೆ.

ಇದನ್ನೂ ಓದಿ...ಬ್ಯಾಂಕ್ ಸ್ಥಳಾಂತರಕ್ಕೆ ಗ್ರಾಮಸ್ಥರ ವಿರೋಧ: 'ಉಗ್ರ ಹೋರಾಟ ಮಾಡ್ತೀವಿ' ಎಂದ ಮಹಿಳೆಯರು

ಇನ್ನು ಹಳೆ ದಾವಣಗೆರೆಯಲ್ಲಿ ಸಾಕಷ್ಟು ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿರುವ ಕಾರಣ, ಮಕ್ಕಳು ಹಾಗೂ ಹಿರಿಯರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ಮನೆಗೆ ತೆರಳುವ ಮಾರ್ಗ ಮಧ್ಯೆಯೇ ನಾಯಿಗಳು ಅಡ್ಡಗಟ್ಟಿ ದಾಳಿ ನಡೆಸುತ್ತವೆ.

ಬೀದಿ ನಾಯಿಗಳ ಹಾವಳಿ ಕುರಿತು ಪ್ರತಿಕ್ರಿಯೆ

ಬೀದಿನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಅಧಿಕಾರಿಗಳು ಮುಂದಾದರೆ, ಅವರ ಕಾರ್ಯಕ್ಕೆ ಪ್ರಾಣಿ ದಯಾ ಸಂಘದವರು ಅಡ್ಡಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಅದೇನೆ ಇರಲಿ ಕೂಡಲೇ ನಾಯಿಗಳಿಗೆ ಮಟ್ಟಹಾಕಿ ಎಂದು ಜನರು ಪಾಲಿಕೆಗೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.