ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಿಲ್ಲಾ ಜಂಟಿ ಸಮಿತಿಯ ನೇತೃತ್ವದಲ್ಲಿ ನಗರದ ಜಯದೇವ ವೃತ್ತದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕೊರೊನಾ ವೈರಸ್ ಬಂದ ಬಳಿಕ ಅವೈಜ್ಞಾನಿಕವಾಗಿ ಲಾಕ್ಡೌನ್ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಯಿತು. ಆರ್ಥಿಕ ಸಂಕಷ್ಟ ಮರೆಮಾಚುವ ಸಲುವಾಗಿ ಸರ್ಕಾರ ಸುಳ್ಳು ಭರವಸೆ ನೀಡುತ್ತಿದೆ. ಕಾರ್ಮಿಕರ ಬದುಕಿನ ಮೇಲೆಯೂ ಬರೆ ಎಳೆಯುತ್ತಿದೆ.
ಗುತ್ತಿಗೆ ಕಾರ್ಮಿಕರ ಸಂಖ್ಯೆಯನ್ನು 20ರಿಂದ 50ಕ್ಕೆ ಏರಿಸಬೇಕು. ಕಾರ್ಖಾನೆಗಳ ಮಾಲೀಕರ ಲಾಬಿಗೆ ಮಣಿಯದೆ ಕಾರ್ಮಿಕರ ಹಿತ ಕಾಪಾಡಿ ವೇತನ ಹೆಚ್ಚಿಸಬೇಕು. ಆರೋಗ್ಯ ವಿಮೆ ನೀಡಿ ಕಾರ್ಮಿಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.