ETV Bharat / state

ದಾವಣಗೆರೆ: ಅಗಲಿದ ಪ್ರೀತಿಯ ಮಾಲೀಕನ ನೆನೆದು ಮರುಗುತ್ತಿರುವ 'ಡಯಾನ'

author img

By

Published : Jun 13, 2022, 4:10 PM IST

ಶ್ವಾನವನ್ನು ಖರೀದಿಸಿ ತಂಡ ಮುಂದಿನ ಎರಡು ತಿಂಗಳಲ್ಲಿ ಮಾಲೀಕ ಅಗಲಿದ್ದಾನೆ. ಇದರಿಂದ ನೊಂದ ಶ್ವಾನ ಮಾಲೀಕನ ಸಮಾಧಿಯ ಮೇಲೆ ಕುಳಿತು ಮರುಗುತ್ತಿದೆಯಂತೆ.

Diyana recalls a lost owner
ಅಗಲಿದ ಮಾಲೀಕನ ನೆನೆದು ಮರಗುತ್ತಿರುವ ಡಯಾನ

ದಾವಣಗೆರೆ: ಜಿಲ್ಲೆಯ ಕೆಟಿಜೆ ನಗರದಲ್ಲಿ ಅರುಣ್ ಕುಮಾರ್ ಹಾಗೂ ಗೌರಮ್ಮ ದಂಪತಿ ನೆಲೆಸಿದ್ದಾರೆ. ಇವರ ಪುತ್ರ ಶಿವಶಂಕರ್​​ ತನಗೊಂದು ಶ್ವಾನ ಬೇಕೆಂದು ಹಟ ಹಿಡಿದು ಕೊನೆಗೂ ಒಂದು ನಾಯಿ ಮರಿಯನ್ನು ಮನೆಗೆ ತಂದಿದ್ದರು. ಅದರ ಹೆಸರು ಡಯಾನ. ಮುಂದಿನ ಎರಡು ತಿಂಗಳಿಗೆ 13 ವರ್ಷದ ಶಿವಶಂಕರ್ ಮೃತಪಟ್ಟಿದ್ದಾನೆ. ಈತನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಡಯಾನ ತನ್ನ ಮಾಲೀಕನ ಅಗಲಿಕೆಯ ನೋವಿನಿಂದ ಇನ್ನೂ ಹೊರಬಂದಿಲ್ವಂತೆ.

ಬಾಲಕನ ಶವವನ್ನು ಹಾವೇರಿಯ ಬೆಳಗುತ್ತಿ ಗ್ರಾಮದಲ್ಲಿರುವ ಅವರ ಜಮೀನಿನಲ್ಲಿ ಸಮಾಧಿ ಮಾಡಲಾಗಿತ್ತು. ಪೋಷಕರು ಶಿವಶಂಕರ್ ಸಮಾಧಿಗೆ ಭೇಟಿ ನೀಡಿದ್ರೆ, ಶಿವಶಂಕರ್​ನನ್ನು ಹಚ್ಚಿಕೊಂಡಿದ್ದ ಶ್ವಾನ ಕೂಡಾ ಸಮಾಧಿ ಮೇಲೆ ಮಲಗಿ ಕಣ್ಣೀರಿಡುತ್ತಂತೆ. ಇದನ್ನು ಗಮನಿಸಿದ ಪೋಷಕರು ಡಯಾನನನ್ನೇ ತಮ್ಮ ಮಗ ಶಿವಶಂಕರ್ ರೂಪದಲ್ಲಿ ನೋಡ್ತಿದ್ದೇವೆ. ಮಗನ ಸ್ಥಾನವನ್ನು ಡಯಾನಾಗೆ ನೀಡಿದ್ದೇವೆ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರೀತಿಯ ನಾಯಿಯ ಹುಟ್ಟುಹಬ್ಬವನ್ನೂ ಕೂಡ ಆಚರಿಸುತ್ತಿದ್ದಾರೆ.

'ಚಾರ್ಲಿ 777' ನೋಡಲು ನೋ ಎಂಟ್ರಿ: ಇತ್ತೀಚೆಗೆ ಬಿಡುಗಡೆಯಾದ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾವನ್ನು ಶ್ವಾನದೊಂದಿಗೆ ವೀಕ್ಷಿಸಲು ಹೋದಾಗ ಥಿಯೇಟರ್​ ಸಿಬ್ಬಂದಿ ಅವಕಾಶ ನೀಡಿಲ್ಲ. ಡಯಾನಗೆ ಸಿನಿಮಾ ತೋರಿಸಲು ಗೌರಮ್ಮರವರ ಪುತ್ರಿ ಹಂಸಾ, ಸಹೋದರ ಕೆಂಚರೊಂದಿಗೆ ಗೀತಾಂಜಲಿ ಸಿನಿಮಾ ಮಂದಿರಕ್ಕೆ ತೆರಳಿದ್ದರು. ಮುಂಗಡವಾಗಿ ಡಯಾನಗೂ ಸೇರಿ ಒಟ್ಟು 3 ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಖರೀದಿಸಿದ್ದಾರೆ. ಥಿಯೇಟರ್‌ ಸಿಬ್ಬಂದಿ ಚಿತ್ರಮಂದಿರದೊಳ ಬಿಡಲು ನಿರಾಕರಿಸಿದ್ದಕ್ಕೆ ಕೋಪಗೊಂಡು ಕೆಲ ಕಾಲ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ಮಂಗಳೂರು: ಪೊಲೀಸ್ ಶ್ವಾನಕ್ಕೆ'ಚಾರ್ಲಿ' ನಾಮಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.