ETV Bharat / state

ಯುಗಾದಿ ಹಬ್ಬಕ್ಕೆ ಬರುವುದು ಬೇಡ ಅಂತ ಸಂಬಂಧಿಕರಿಗೆ ತಿಳಿ ಹೇಳಿ: ಡಿಸಿ ಮನವಿ

ಕೊವಿಡ್​​-19 ವೈರಸ್​ ಹರಡುವ ಸಾಧ್ಯತೆ ಹೆಚ್ಚಿದ್ದು,ಹಬ್ಬ ಆಚರಣೆಗೆ ಯಾವುದೇ ಸಂಬಂಧಿಕರು ಬೇರೆಡೆಯಿಂದ ಗ್ರಾಮಗಳಿಗೆ ಬರದಂತೆ ತಿಳಿಸಿ ಎಂದು ದಾವಣಗೆರೆ ಡಿಸಿ ಮನವಿ ಮಾಡಿದ್ದಾರೆ.

davanagere dc mahanthesh talks about corona virus
ಡಿಸಿ ಮನವಿ
author img

By

Published : Mar 24, 2020, 2:55 PM IST

ದಾವಣಗೆರೆ: ಕೊರೊನಾ ಭೀತಿ ಇರೋದ್ರಿಂದ ಯುಗಾದಿ ಹಬ್ಬ ಆಚರಿಸಲು ಜನರು ಬೇರೆಡೆಯಿಂದ ಬರದಂತೆ ನೋಡಿಕೊಳ್ಳಿ. ಈ ಮೂಲಕ ನಮ್ಮ ಹೋರಾಟಕ್ಕೆ ಸಹಕರಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮನವಿ ಮಾಡಿದ್ದಾರೆ.

ಡಿಸಿ ಮನವಿ

ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಊರಿಗೆ ಬರುವುದು ಬೇಡ. ನೀವು ಅಲ್ಲಿಯೇ ಹಬ್ಬ ಆಚರಿಸಿ.‌ ನಾವು ಇಲ್ಲಿಯೇ ಹಬ್ಬ ಆಚರಿಸುತ್ತೇವೆ ಎಂದು ತಿಳಿ ಹೇಳಿ. ಒಂದು ವೇಳೆ ಬಂದರೆ ಅವರನ್ನು 14 ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿ ಇಡಬೇಕಾಗುತ್ತದೆ. ಈ ಪರಿಸ್ಥಿತಿ ಬರುವುದು ಬೇಡ ಎಂದು ಹೇಳಿದ್ದಾರೆ. ಯುಗಾದಿ ಹಬ್ಬಕ್ಕೆ ಸಂಬಂಧಿಕರಿಗೆ ಬರುವುದು ಬೇಡ ಎಂದು ಹೇಳಿ.‌ ಯಾಕೆಂದರೆ, ಸೋಂಕು ಗ್ರಾಮಕ್ಕೆ ತಗುಲಿದ್ರೆ ಹೊರಗೆ ಹಾಕುವುದು ತುಂಬಾನೇ ಕಷ್ಟ ಎಂದ್ರು

davanagere dc mahanthesh talks about corona virus
ಡಿಸಿ ಮನವಿ

ಬೇರೆ ಬೇರೆ ದೇಶಗಳಿಗೆ ಹೋಗಿ ಬಂದವರು ಜಿಲ್ಲೆಯಲ್ಲಿ 220 ಮಂದಿ ಇದ್ದಾರೆ. ಸೋಮವಾರ 20 ಮಂದಿ ಪೈಕಿ 18 ಜನರದ್ದು ನೆಗೆಟಿವ್ ಬಂದಿದ್ದು, ಉಳಿದ ಇಬ್ಬರ ಲ್ಯಾಬ್​ ರಿಪೋರ್ಟ್​​​​ಗಾಗಿ ಕಾಯುತ್ತಿದ್ದೇವೆ. ಹಾಗಾಗಿ ಕೊರೊನಾ ಬಗ್ಗೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕಿದೆ. ಇದಕ್ಕೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

ಕೊರೊನಾ ಬಗ್ಗೆ ಹಲವೆಡೆ ಡಿಸಿ, ಎಸ್ಪಿ ಯಿಂದ ಜಾಗೃತಿ:

ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಡಿಹೆಚ್ಓ, ದಾವಣಗೆರೆ ತಹಶೀಲ್ದಾರ್ ನಗರದಲ್ಲಿನ ಮಾರ್ಕೆಟ್ ಸೇರಿದಂತೆ ಇತರೆ ಜನಸಂದಣಿ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಕೊರೊನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿ ಹೇಳಿದರು. ಅನಾವಶ್ಯಕವಾಗಿ ಹೊರಗಡೆ ಸಂಚರಿಸಬಾರದು. ಅಗತ್ಯ ವಸ್ತುಗಳು, ದಿನಸಿಗಳ ಅಂಗಡಿಗಳನ್ನು ಬಿಟ್ಟು ಇತರೆ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.