ದಾವಣಗೆರೆ: ಕೊರೊನಾ ಆರ್ಭಟ ಹಿನ್ನೆಲೆ ನಾಳೆಯಿಂದ ಮಂಗಳವಾರದವರೆಗೆ ದಾವಣಗೆರೆ ಸಂಪೂರ್ಣ ಲಾಕ್ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಕೊರೊನಾ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ನಾಳೆ ಬೆಳಗ್ಗೆ 10 ಗಂಟೆಯಿಂದ ಸೋಮವಾರ 6 ಗಂಟೆ ತನಕ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ತಾಲೂಕುಗಳಲ್ಲಿ ಸೋಂಕು ಹೆಚ್ಚಳ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಿದ್ದು ಜಿಲ್ಲೆಯ ಜನ ಸಹಕರಿಸಬೇಕು ಎಂದಿದ್ದಾರೆ.
ಅಗತ್ಯ ಸೇವೆ ಬಿಟ್ಟು ಎಲ್ಲವು ಬಂದ್ ಆಗಲಿದ್ದು, ಹೋಟೆಲ್ ಪಾರ್ಸಲ್, ಮೆಡಿಕಲ್ ಓಪನ್ ಇರುತ್ತೆ. ಹಾಲು, ಮೊಟ್ಟೆಗೆ ಬೆಳಗ್ಗೆ 10ರ ತನಕ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮೂರು ದಿನ ಮಾರುಕಟ್ಟೆ ಕೂಡ ಇರುವುದಿಲ್ಲ. ಬದಲಾಗಿ ಮನೆ ಮನೆಗೆ ತರಕಾರಿ ನೀಡಲು ಪಾಲಿಕೆ ವತಿಯಿಂದ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಓದಿ:18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪುನಾರಂಭ, ಆದ್ಯತೆ ಗುಂಪುಗಳಿಗೆ ಮೊದಲು ಲಸಿಕೆ