ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಫೆ. 24ರಂದು ಮೇಯರ್, ಉಪ ಮೇಯರ್ ಚುನಾವಣೆಗೆ ನಡೆಸಲು ನಿರ್ಧರಿಸಿ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಹ ನಡೆಯಲಿದ್ದು, ಈ ಹಿನ್ನೆಲೆ ಮುಂದಿನ ಚುನಾವಣೆಗೆ ಭರದ ಸಿದ್ಧತೆಗೆ ತಯಾರಿ ನಡೆದಿದೆ. 45 ಜನ ಸದಸ್ಯ ಬಲದ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 01, ಪಕ್ಷೇತರರು 05 ಸದಸ್ಯರಿದ್ದಾರೆ.
17 ಸ್ಥಾನ ಗೆದ್ದ ಬಿಜೆಪಿ ಸದ್ಯ ಅಧಿಕಾರದಲ್ಲಿ ಪಕ್ಷೇತರ ಹಾಗೂ ಶಾಸಕ, ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯರ ಮತಗಳಿಂದ ಮೊದಲ ಹಂತದಲ್ಲಿ ಅಧಿಕಾರ ಹಿಡಿದು ಇದೀಗ ಎರಡನೇ ಬಾರಿ ಮೇಯರ್ ಗದ್ದುಗೆ ಹಿಡಿಯಲು ಹೊರಟಿದೆ.
ಇದನ್ನೂ ಓದಿ: 23 ಮಕ್ಕಳು ಶಾಲೆಯಲ್ಲಿರುವಾಗಲೇ ಹೊತ್ತಿಕೊಂಡ ಬೆಂಕಿ! ವಿಡಿಯೋ...