ETV Bharat / state

ಗೃಹಿಣಿ ಅನುಮಾನಾಸ್ಪದ ಸಾವು: ಪೋಷಕರಿಂದ ಕೊಲೆ ಆರೋಪ

ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಜಗಳೂರಿನಲ್ಲಿ ನಡೆದಿದೆ.

crime-housewife-suspicious-death-in-jagaluru
ಗೃಹಿಣಿ ಅನುಮಾನಾಸ್ಪದ ಸಾವು: ಪೋಷಕರಿಂದ ಕೊಲೆ ಆರೋಪ
author img

By

Published : Jun 24, 2023, 10:44 PM IST

ಗೃಹಿಣಿ ಅನುಮಾನಾಸ್ಪದ ಸಾವು: ಪೋಷಕರಿಂದ ಕೊಲೆ ಆರೋಪ

ದಾವಣಗೆರೆ: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಗೌರಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಾಂತಮ್ಮ ಮೃತ ಗೃಹಿಣಿ ಎಂದು ಗುರುತಿಸಲಾಗಿದೆ. ಈ ಸಾವಿಗೆ ಆಕೆಯ ಪತಿ ಸೋಮಶೇಖರ್ ಕಾರಣ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಮೃತ ಶಾಂತಮ್ಮ ಹಾಗೂ ಸೋಮಶೇಖರ್​ಗೆ 11ವರ್ಷಗಳ ಹಿಂದೆ ವಿವಾಹವಾಗಿತ್ತು. ಇವರಿಗೆ ಇಬ್ಬರೂ ಮಕ್ಕಳು ಇದ್ದಾರೆ. ಪತಿ ಸೋಮಶೇಖರ್​ ಕುಡಿತದ ಚಟಕ್ಕೆ ದಾಸನಾಗಿದ್ದು, ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈ ಸಂಬಂಧ ಹಿಂದೆ ಸೋಮಶೇಖರ್​ಗೆ ಮೃತ ಮಹಿಳೆಯ ಪೋಷಕರು ಬುದ್ಧಿವಾದವನ್ನು ಹೇಳಿದ್ದರು. ಇತ್ತೀಚಿಗೆ ನಮ್ಮ ಮಗಳಿಗೆ ಆಕೆಯ ಪತಿ ದೈಹಿಕವಾಗಿ ಹಲ್ಲೆ ಮಾಡಿ ಚಿತ್ರಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತು ನಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆ ಆಕೆಯ ಪತಿಯೇ ಕಾರಣನಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತ ಮಹಿಳೆಯ ಪೋಷಕರು ಜಗಳೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತಳ ತಾಯಿ ರತ್ನಮ್ಮ ಮಾತನಾಡಿ, ನನ್ನ ಮಗಳಿಗೆ ಆಕೆಯ ಪತಿ ದೈಹಿಕವಾಗಿ ಹಲ್ಲೆ ಮಾಡಿ, ಚಿತ್ರಹಿಂಸಿ ನೀಡಿದ್ದಾನೆ. ನನ್ನ ಮಗಳನ್ನು ತವರು ಮನೆಗೆ ಹೋಗಲು ಬಿಟ್ಟಿಲ್ಲ. ಈ ಕೃತ್ಯದಲ್ಲಿ ನನ್ನ ಮಗಳ ಮೈದುನ ದಾಸ, ಆತನ ಹೆಂಡತಿ ನಾಗಮ್ಮ ಮತ್ತು ಪತಿ ಸೋಮಶೇಖರ್ ಈ ಮೂರು ಜನ ಸೇರಿ ಹಿಂಸೆ ಕೊಟ್ಟಿದ್ದಾರೆ ಆರೋಪ ಮಾಡಿದರು.

ಮೃತಳ ಸಹೋದರಿ ಗೌರಮ್ಮ ಮಾತನಾಡಿ, ನನ್ನ ಸಹೋದರಿಯನ್ನು ಆಕೆಯ ಪತಿ ಸಾಯಿಸಿದ್ದಾನೆ. ಶೌಚಾಲಯಕ್ಕಾಗಿ ತಂದಿದ್ದ ಕಲ್ಲು ಮಾರಿ ಕುಡಿದಿದ್ದಾನೆ. ನನ್ನ ತಂಗಿಯ ಗಂಡ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ, ಮೈದುನ ಮತ್ತು ಮೈದುನನ ಹೆಂಡತಿ ಎಲ್ಲರೂ ಸೇರಿ ಕಿರುಕುಳ ನೀಡುತ್ತಿದ್ದರು. ನನ್ನ ತಂಗಿಯನ್ನು ನೇಣು ಹಾಕಿ ಕೊಂದಿದ್ದಾರೆ. ನಮಗೆ ನ್ಯಾಯಬೇಕು ಎಂದು ಅಳಲು ತೋಡಿಕೊಂಡರು. ಇನ್ನು ಘಟನೆ ಸಂಬಂಧ ಜಗಳೂರು ಪೊಲೀಸ್​ ಠಾಣೆಯ ಪಿಎಸ್​ಐ ಮಾತನಾಡಿ, ಗೃಹಿಣಿಯೊಬ್ಬರ ಅನುಮಾನಾಸ್ಪದ ಸಾವು ಪ್ರಕರಣ ಆಕೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಿಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: Bengaluru crime: ಸಂಗಾತಿ ಮೇಲಿನ ಕೋಪಕ್ಕೆ ಮಗುವನ್ನು ಅಪಹರಿಸಿದ ತಂದೆಯ ಬಂಧನ

ರಾಯಚೂರಿನಲ್ಲಿ ಯುವಕನ ಕೊಲೆ: ಮತ್ತೊಂದೆಡೆ ಸಹೋದರಿ ಮೊಬೈಲ್​ಗೆ ಸಂದೇಶ ಕಳುಹಿಸಿರುವುದನ್ನು ಪ್ರಶ್ನೆ ಮಾಡಿದ ಸಹೋದರನನ್ನೇ ಹತ್ಯೆ ಮಾಡಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ದುರ್ಘಟನೆ ನಡೆದಿತ್ತು. ದೇವರಾಜ್(23) ಮೃತ ಯುವಕನೆಂದು ಗುರುತಿಸಲಾಗಿದೆ. ಬಸವರಾಜ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಆರೋಪಿಯು ಮೃತ ದೇವರಾಜ್ ಸಹೋದರಿಗೆ ಪ್ರೀತಿ ಮಾಡುವಂತೆ ಕಿರುಕುಳ ಕೊಡ್ತಿದ್ದ ಎಂಬ ಆರೋಪವಿದ್ದು, ಆಕೆಗೆ ಮೆಸೇಜ್ ಕಳುಹಿಸುವುದು, ಸಿಕ್ಕಲ್ಲಿ ಮಾತನಾಡಿಸೋದನ್ನು ಮಾಡುತ್ತಿದ್ದನಂತೆ. ಹೀಗಾಗಿ ದೇವರಾಜ್ ಬೈದು ಬುದ್ಧಿ ಹೇಳಿದ್ದ.

ಈ ವಿಚಾರಕ್ಕೆ ದೇವರಾಜ್ ಹಾಗೂ ಆರೋಪಿ ಬಸವರಾಜ್ ಕಡೆಯವರ ಮಧ್ಯೆ ಗಲಾಟೆ ನಡೆದಿತ್ತು. ಆಗ ದೇವರಾಜ್​ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪ್ರಕರಣದ ಕುರಿತಂತೆ ಆರೋಪಿ ವಿರುದ್ಧ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.