ETV Bharat / state

ನಕಲಿ ATM ಕಾರ್ಡ್ ಬಳಸಿ ಬ್ಯಾಂಕಿಗೆ ಮೋಸ: ದಾವಣಗೆರೆ ಪೊಲೀಸರ ಬಲೆಗೆ ಅಂತರ್‌ರಾಜ್ಯ ವಂಚಕರು

ನಕಲಿ ಎಟಿಎಂ ಕಾರ್ಡ್ ಮೂಲಕ ಹಣ ಡ್ರಾ ಮಾಡಿಕೊಂಡು ಬ್ಯಾಂಕ್​ಗೆ ವಂಚಿಸುತ್ತಿದ್ದ ಉತ್ತರ ಪ್ರದೇಶದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

Davanagere police
ದಾವಣಗೆರೆ ಪೊಲೀಸರು
author img

By

Published : Jul 25, 2023, 10:12 AM IST

Updated : Jul 25, 2023, 10:56 AM IST

ದಾವಣಗೆರೆ: ಎಟಿಎಂನಿಂದ ಹಣ ಬಿಡಿಸಿಕೊಳ್ಳುವಾಗ ಬ್ಯಾಂಕಿಗೆ ನಷ್ಟ ಉಂಟುಮಾಡಿ ಹಣ ಡ್ರಾ ಮಾಡಿ ಮೋಸ ಮಾಡ್ತಿದ್ದ ಅಂತರ್‌ರಾಜ್ಯ ವಂಚಕರನ್ನು ದಾವಣಗೆರೆ ನಗರದ ಕೆಟಿಜೆ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರಮೋದ ಕುಮಾರ, ಅರ್ಜುನ ಸಿಂಗ್, ಎ.ಡಿ.ಸಂದೀಪ್ ಸಿಂಗ್ ಚೌಹಾಣ, ಎ.ಲವ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ನಕಲಿ ಎಟಿಎಂ ಕಾರ್ಡ್, ಸ್ವಿಪ್ಟ್ ಕಾರು ವಶಕ್ಕೆ ಪಡೆಯಲಾಗಿದೆ. ಇವರು ಮೂಲತಃ ಉತ್ತರಪ್ರದೇಶ ರಾಜ್ಯದವರೆಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಜುಲೈ 18ರಂದು ದಾವಣಗೆರೆ ನಗರದ ಲಾಯಲ್ ವೃತ್ತದಲ್ಲಿರುವ ಮುರಾಘರಾಜೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಎಟಿಎಂಗೆ 6 ಲಕ್ಷ ರೂ ಹಣವನ್ನು ಠೇವಣಿ ಮಾಡಲಾಗಿತ್ತು.‌ ಜುಲೈ 19ರಂದು ಎಟಿಎಂ ನಿರ್ವಾಹಕರೊಂದಿಗೆ ಎಟಿಎಂನಲ್ಲಿ ಹಣ ಎಷ್ಟಿರಬಹದು ಎಂದು ಪರಿಶೀಲನೆ ಮಾಡಿದಾಗ 1,85,000 ರೂಪಾಯಿ ಬಾಕಿ ಇರುವುದು ಕಂಡುಬಂದಿದೆ. ಜನರಲ್ ಲಡ್ಜರ್​​ನಲ್ಲಿ 5,85,000 ರೂ ಹಣ ಬ್ಯಾಲೆನ್ಸ್ ಇರುವುದಾಗಿ ತೋರಿಸಿದೆ. ಒಂದೇ ದಿನಕ್ಕೆ ಅಷ್ಟೊಂದು ಹಣ ಡ್ರಾ ಮಾಡಲು ಹೇಗೆ ಸಾಧ್ಯ? ಎಂದು ಅನುಮಾನಗೊಂಡ ಮುರಾಘರಾಜೇಂದ್ರ ಕೋ ಆಪರೇಟಿವ್‌ ಬ್ಯಾಂಕಿನ ಮ್ಯಾನೇಜರ್ ಅರುಣ ಎಂ.ಎಸ್ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.‌

ಜುುಲೈ 18 ಹಾಗೂ ಜುಲೈ 19ರ ನಡುವೆ ಆರೋಪಿಗಳು ತಂತ್ರಜ್ಞಾನದ ಮೂಲಕ ನಕಲಿ ಎಟಿಎಂ ಕಾರ್ಡ್​ಗಳ ಸಹಾಯದಿಂದ 3,47,900 ಹಣ ಬಿಡಿಸಿಕೊಂಡು ಬ್ಯಾಂಕಿಗೆ ವಂಚಿಸಿದ್ದರು.‌ ಮೋಸ ಮಾಡಿದವರ ವಿರುದ್ದ ಕಾನೂನು ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುರಾಘರಾಜೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಅರುಣ ಎಂ.ಎಸ್ ಅವರು ನೀಡಿದ ದೂರಿನ ಮೇರೆಗೆ ಕೆಟಿಜೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂತರ್‌ರಾಜ್ಯ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿಸಿದ್ದೇ ರೋಚಕ!: ಪ್ರಕರಣ ದಾಖಲಿಸುತ್ತಿದ್ದಂತೆ ಅಲರ್ಟ್ ಆದ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಸಿಬ್ಬಂದಿ ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಎಎಸ್ಪಿ ರಾಮಗೊಂಡ ಬಸರಗಿ ಅವರ ನಿರ್ದೇಶನದಲ್ಲಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಮಲ್ಲಿನ ದೊಡ್ಡಮನಿ ನೇತೃತ್ವದಲ್ಲಿ ತಂಡ ಉತ್ತರ ಪ್ರದೇಶಕ್ಕೆ ತೆರಳಿ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಈ ರೀತಿಯ ವಂಚನೆ ಮಾಡ್ತಿದ್ದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಡಾ.ಅರುಣ್ ಕೆ ಹಾಗೂ ಎಎಸ್ಪಿ ಬಸರಗಿ ಶ್ಲಾಘಿಸಿದರು.

ಇದನ್ನೂ ಓದಿ: Bitcoin case: ಬಿಟ್ ಕಾಯಿನ್ ಮೋಸ.. ಆಸೆಗೆ ಬಿದ್ದು ಲಕ್ಷಗಟ್ಟಲೆ ಹಣ ಕಳೆದುಕೊಂಡ ಮೈಸೂರಿನ ನಿವಾಸಿಗಳು

Last Updated : Jul 25, 2023, 10:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.