ETV Bharat / state

ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ.. ನ್ಯಾಯಾಧೀಶ ಸಿದ್ದರಾಜು - Covid-19 testing program Harihara

ಪರೀಕ್ಷೆಯ ನಂತರ ಸ್ಥಳದಲ್ಲಿಯೇ ಫಲಿತಾಂಶವನ್ನು ತಿಳಿಸಿ ಸೋಂಕಿತರನ್ನು ತಕ್ಷಣವೇ ಚಿಕಿತ್ಸೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ಸೋಂಕಿತರು ಭಯಪಡುವ ಕಾರಣವಿಲ್ಲ. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದಾಗ ಗುಣಮುಖವಾಗುವಿರಿ..

Harihara
ಕೋವಿಡ್-19 ಪರೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ
author img

By

Published : Oct 5, 2020, 8:32 PM IST

ಹರಿಹರ : ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು ಕೊರೊನಾ ನಿಯಂತ್ರಣದ ಸಲುವಾಗಿ ಇನ್ನು ಮುಂದೆ ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆಯನ್ನು ಮಾಡಿಸಿಕೊಳ್ಳತಕ್ಕದ್ದು ಎಂದು ನ್ಯಾಯಾಧೀಶ ಸಿದ್ದರಾಜು ಕರೆ ನೀಡಿದರು.

ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗೆ ಕೋವಿಡ್-19 ಪರೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಯಿಂದ ಬರುವ ಎಲ್ಲಾ ಕಕ್ಷಿದಾರರಿಗೆ ಪರೀಕ್ಷೆ ಮಾಡಲಾಗುವುದು.

ಪರೀಕ್ಷೆಯ ನಂತರ ಸ್ಥಳದಲ್ಲಿಯೇ ಫಲಿತಾಂಶವನ್ನು ತಿಳಿಸಿ ಸೋಂಕಿತರನ್ನು ತಕ್ಷಣವೇ ಚಿಕಿತ್ಸೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ಸೋಂಕಿತರು ಭಯಪಡುವ ಕಾರಣವಿಲ್ಲ. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದಾಗ ಗುಣಮುಖವಾಗುವಿರಿ ಎಂದು ಧೈರ್ಯ ಹೇಳಿದರು.

ಈ ಸಮಯದಲ್ಲಿ ನ್ಯಾಯಾಧೀಶರುಗಳಾದ ಅವಿನಾಶ್ ಚಂದ್ರ, ವೈ ಕೆ ಬೇನಾಳ್, ಹಿರಿಯ ಆರೋಗ್ಯ ಸಹಾಯಕ ಎಂ.ಉಮಣ್ಣ, ಕಿರಿಯ ಆರೋಗ್ಯ ಸಹಾಯಕ ದಾದಾಪೀರ್, ಪ್ರಯೋಗಾಲಯ ತಾಂತ್ರಿಕ ಸಹಾಯಕರಾದ ಹೂವಕ್ಕ, ಗಣೇಶ್, ಸಿಬ್ಬಂದಿ ಮಹೇಶ್ ಮುಂತಾದವರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.