ETV Bharat / state

ಆಕ್ಸಿಜನ್ ಸರಿಯಾಗಿ ಪೂರೈಕೆಯಾಗದೆ ಸೋಂಕಿತೆ ಸಾವು? ವಿಡಿಯೋ ವೈರಲ್​​

ಹನಗವಾಡಿ ಗ್ರಾಮದ ಜಯಮ್ಮ ಕೋವಿಡ್​​ ತಗುಲಿ ಸಾವನ್ನಪ್ಪಿದ್ದಾರೆ. ಜಯಮ್ಮ ಸಾಯುವ ಮುನ್ನ ಆಕ್ಸಿಜನ್ ಬರುತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

covid patient died due to lack of oxygen in davanagere
ಅಕ್ಸಿಜನ್ ಸರಿಯಾಗಿ ಪೂರೈಕೆಯಾಗದೆ ಸೋಂಕಿತೆ ಜಯಮ್ಮ ಸಾವು
author img

By

Published : May 26, 2021, 11:14 AM IST

Updated : May 26, 2021, 11:40 AM IST

ದಾವಣಗೆರೆ: ಆಕ್ಸಿಜನ್ ಸರಿಯಾಗಿ ಪೂರೈಕೆಯಾಗದೆ ಸೋಂಕಿತೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ‌. ಹನಗವಾಡಿ ಗ್ರಾಮದ ಜಯಮ್ಮ ಮೃತರು. ಜಯಮ್ಮ ಸಾಯುವ ಮುನ್ನ ಆಕ್ಸಿಜನ್ ಬರುತ್ತಿಲ್ಲ ಎಂದು ಹೇಳಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳೆಯ ಸಾವಿಗೂ ಮುನ್ನ ತೆಗೆದ ವಿಡಿಯೋ

ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ ಎಂದು ಸಾವನ್ನಪ್ಪಿದ ಈ ಮಹಿಳೆಯ ಸಂಬಂಧಿಕರು ತಾಲೂಕು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹನಗವಾಡಿ ಗ್ರಾಮದ ಈಕೆಗೆ ಕಳೆದ ಐದು ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಉಸಿರಾಟದ ತೊಂದರೆಯಿಂದ ಹರಿಹರ ತಾಲೂಕು ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ 777 ಕೋವಿಡ್ ಸೋಂಕಿತರು ನಾಟ್‌ ರೀಚಬಲ್!

ಕಳೆದೆರಡು ದಿನಗಳ ಹಿಂದೆ ಸರಿಯಾಗಿ ಆಕ್ಸಿಜನ್ ಪೂರೈಕೆ ಆಗದೆ ಪರದಾಡಿದ ಸೋಂಕಿತೆಯ ವಿಡಿಯೋವನ್ನು ಸಂಬಂಧಿಕರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಸರಿಯಾಗಿ ಆಕ್ಸಿಜನ್ ಸಿಗದ ಕಾರಣ ಜಯಮ್ಮ ಸಾವನ್ನಪ್ಪಿದ್ದಾರೆ. ಇದಕ್ಕೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.

Last Updated : May 26, 2021, 11:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.