ದಾವಣಗೆರೆ: ಕಮಿಷನ್ ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಕಮಿಷನ್, ಎಲ್ಲದರಲ್ಲೂ ಕೈ ಸರ್ಕಾರ ಕಮಿಷನ್ ಮಾಡಿದೆ. ಕಾಂಗ್ರೆಸ್ ಭ್ರಷ್ಟಾಚಾರ ಹೊರಗೆ ಬರತ್ತೆ ಎಂದು ಲೋಕಾಯುಕ್ತ ಕ್ಲೋಸ್ ಮಾಡಿ ಎಸಿಬಿ ಪ್ರಾರಂಭಿಸಿದರು. ಎಸಿಬಿಯಲ್ಲಿ ಕಾಂಗ್ರೆಸ್ ವಿರುದ್ಧದ ದೂರುಗಳ ಬಗ್ಗೆ ಬಿ ರಿಪೋರ್ಟ್ ಹಾಕಿಸಿಕೊಂಡು ಪ್ರಕರಣ ಮುಚ್ಚಿ ಹಾಕಿ ತಾವು ಸ್ವಚ್ಛರು ಎಂದು ಬಿಂಬಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿ ವ್ಯಂಗ್ಯವಾಡಿದರು.
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜನ ಸಂಕಲ್ಪ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ದೇಶದಲ್ಲಿ ಮುಳುಗುತ್ತಿರುವ ಹಡಗು. 2023 ರಲ್ಲಿ ಮುಹೂರ್ತ ಫಿಕ್ಸ್ ಆಗಿದೆ ರಾಜ್ಯದಲ್ಲಿ ಕಾಂಗ್ರೆಸ್ ಮುಳುಗಲಿದೆ. ಅದಕ್ಕೆ ಬೂತ್ ಮಟ್ಟದಲ್ಲಿ, ಮಂಡಲ ಮಟ್ಟದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಕೈಮುಗಿದು ಕೇಳಿಕೊಳ್ಳುತ್ತೇನೆ, ಜನ ನಮಗೆ ಅಧಿಕಾರ ಕೊಡಲು ಸಿದ್ಧರಿದ್ದಾರೆ, ಕಾರ್ಯಕರ್ತರು ನಮ್ಮ ಜೊತೆ ಕೈಜೋಡಿಸಬೇಕು ಎಂದರು.
ಇದು ಡಬಲ್ ಇಂಜಿನ್ ಸರ್ಕಾರ ಎಂದು ಸಾರಿ ಸಾರಿ ಹೇಳಿದ ಸಿಎಂ.. ಡಬಲ್ ಇಂಜಿನ್ ಸರ್ಕಾರ ಇರೋದ್ರಿಂದ 6 ಸಾವಿರ ಕಿಲೋಮೀಟರ್ ಹೆದ್ದಾರಿ ಆಗಿದೆ. ದಾವಣಗೆರೆ ಜಿಲ್ಲೆಯಲ್ಲಿ 1,000 ಎಕರೆ ಕೈಗಾರಿಕಾ ಕಾರಿಡಾರ್ಗೆ ಸೂಚನೆ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಹರಿಹರ ತಾಲೂಕಿಗೆ ಕೈಗಾರಿಕೆ ತಂದು ಗತವೈಭವ ವಾಪಸ್ ತರುತ್ತೇವೆ. ನೀರಾವರಿ, ಕೈಗಾರಿಕೆಗೆ ಒತ್ತು ಕೊಡುತ್ತೇವೆ. ಹರಿಹರ ತಾಲೂಕಿನ ನನೆಗುದಿಗೆ ಬಿದ್ದಿದ್ದ ಬೈರನಪಾದ ಏತ ನೀರಾವರಿ ಯೋಜನೆ ಇದೇ ವರ್ಷ ಆರಂಭ ಮಾದುತ್ತೇವೆ ಎಂದು ಆಶ್ವಾಸನೆ ನೀಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸ್ಪರ್ಧೆಗೆ ಕ್ಷೇತ್ರವಿಲ್ಲ, ಅವರು ಪರದೇಶಿ ಇದ್ದಂತೆ: ಶ್ರೀರಾಮುಲು ವ್ಯಂಗ್ಯ