ಹರಿಹರ(ದಾವಣಗೆರೆ): ತಾಲೂಕಿನಲ್ಲಿ ಇಂದು ಇಬ್ಬರು ಮಕ್ಕಳು ಸೇರಿ 12 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ.
ತಾಲೂಕಿನ ಗಂಗನರಸಿ ಗ್ರಾಮಕ್ಕೆ ಮುಂಬೈನಿಂದ ಆಗಮಿಸಿದ್ದ 4 ಜನರ ಗಂಟಲು ದ್ರವ ಸಂಗ್ರಹಿಸಿ ಕ್ವಾರಂಟೈನ್ ಮಾಡಲಾಗಿತ್ತು. ಇಂದು (ಜುಲೈ 9) ಅವರ ವರದಿ ಬಂದಿದ್ದು, 25 ವರ್ಷದ ಮಹಿಳೆ ಹಾಗೂ ಎರಡೂವರೆ ವರ್ಷದ ಮಗುವಿಗೆ ಸೋಂಕು ದೃಢಪಟ್ಟಿದೆ. ಗಾಂಧಿ ನಗರದ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 55 ವರ್ಷದ ಪುರುಷ, 48 ವರ್ಷದ ಮಹಿಳೆ, 25 ವರ್ಷದ ಮಹಿಳೆ ಮತ್ತು 4 ವರ್ಷದ ಬಾಲಕನ ಗಂಟಲು ದ್ರವವನ್ನ ಜುಲೈ 1ರಂದು ಸಂಗ್ರಹಿಸಲಾಗಿತ್ತು. ಅಲ್ಲದೆ, ಕಂಟೇನ್ಮೆಂಟ್ ಪ್ರದೇಶದಲ್ಲಿರುವ 32 ವರ್ಷದ ವ್ಯಕ್ತಿಯ ಗಂಟಲು ದ್ರವವನ್ನ ಜುಲೈ 3ರಂದು ಸಂಗ್ರಹಿಸಲಾಗಿತ್ತು. ಇಂದು ಇವರೆಲ್ಲರ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ.
ಜ್ವರದಿಂದ ಬಳಲುತ್ತಿದ್ದ ನಗರದ ತೆಗ್ಗಿಕೇರಿಯ 22 ವರ್ಷದ ಯುವಕನ ಗಂಟಲು ದ್ರವವನ್ನ ಜುಲೈ 4ರಂದು ಸಂಗ್ರಹಿಸಲಾಗಿತ್ತು. ಈ ಯುವಕನಿಗೂ ಸೋಂಕು ತಗುಲಿದ್ದು, ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ.
ನಗರದ ಅಗಸರ ಬೀದಿಯ ಕಂಟೇನ್ಮೆಂಟ್ ವ್ಯಾಪ್ತಿಯಲ್ಲಿರುವ 50 ವರ್ಷದ ಪುರುಷ, 23 ವರ್ಷದ ಮಹಿಳೆ ಹಾಗೂ ವಿದ್ಯಾನಗರದ 55 ವರ್ಷದ ಪುರುಷ, 31 ವರ್ಷದ ಮಹಿಳೆಯ ಗಂಟಲು ದ್ರವವನ್ನು ಜುಲೈ 1ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರ ವರದಿ ಕೂಡ ಪಾಸಿಟಿವ್ ಬಂದಿದೆ. ಕ್ವಾರಂಟೈನ್ ಕೇಂದ್ರದಲ್ಲಿದ್ದ ಸೊಂಕಿತರನ್ನ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.