ETV Bharat / state

ದಾವಣಗೆರೆಯಲ್ಲಿಂದು 265 ಜನರಿಗೆ ಸೋಂಕು, 7,000 ದಾಟಿದ ಸೋಂಕಿತರ ಸಂಖ್ಯೆ

author img

By

Published : Aug 23, 2020, 9:32 PM IST

ದಾವಣಗೆರೆಯಲ್ಲಿ 156, ಹರಿಹರ 22, ಜಗಳೂರು 5, ಚನ್ನಗಿರಿ 30, ಹೊನ್ನಾಳಿ 4, ಹೊರ ಜಿಲ್ಲೆಯಿಂದ ಬಂದಿದ್ದ 8 ಮಂದಿಯಲ್ಲಿ ಸೋಂಕಿರುವುದು ಖಚಿತವಾಗಿದೆ.

ದಾವಣಗೆರೆಯಲ್ಲಿ ಇಂದು 265 ಜನರಿಗೆ ಕೊರೊನಾ
ದಾವಣಗೆರೆಯಲ್ಲಿ ಇಂದು 265 ಜನರಿಗೆ ಕೊರೊನಾ

ದಾವಣಗೆರೆ: ಜಿಲ್ಲೆಯಲ್ಲಿ 265 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಇದುವರೆಗೆ 7,044 ಸೋಂಕಿತರಾದಂತಾಗಿದೆ. ವೈರಾಣುವಿಗೆ ಇಬ್ಬರು‌ ಮೃತಪಟ್ಟಿದ್ದು, ಸಾವಿನ ಸಂಖ್ಯೆ 155 ಕ್ಕೇರಿದೆ.

ದಾವಣಗೆರೆಯ ಶಂಕರವೀರ ಲೇಔಟ್​ನ ನಿವಾಸಿ, ಡಯಾಬಿಟಿಕ್ ಹಾಗೂ ಹೈಪರ್ ಟೆನ್ಷನ್​ನಿಂದ ಬಳಲುತ್ತಿದ್ದ 58 ವರ್ಷದ ಪುರುಷ ಹಾಗೂ ಆಲೂರು ಗ್ರಾಮದ 80 ವರ್ಷದ ವೃದ್ಧ ಆಗಸ್ಟ್ 22ರಂದು ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ದಾವಣಗೆರೆಯಲ್ಲಿ 156, ಹರಿಹರ 22, ಜಗಳೂರು 5, ಚನ್ನಗಿರಿ 30, ಹೊನ್ನಾಳಿ 4, ಹೊರ ಜಿಲ್ಲೆಯಿಂದ ಬಂದಿದ್ದ 8 ಮಂದಿಯಲ್ಲಿ ಸೋಂಕಿರುವುದು ಖಚಿತವಾಗಿದೆ.

178 ಮಂದಿ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 4,915 ಜನರು ಈವರೆಗೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 1,984 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.